ಪ್ರೇಮಿಗಳ ದಿನ ಆಚರಣೆಗೆ ಹಿಂದೂ ಸಂಘಟನೆ ವಿರೋಧ

KannadaprabhaNewsNetwork |  
Published : Feb 13, 2025, 12:48 AM IST
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಜರಂಗದಳ ಪ್ರೇಮಿಗಳ ದಿನಾಚರಣೆ ವಿರೋಧಿಸಿ ಕರಪತ್ರ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಫೆ.14ರಂದು ಪ್ರೇಮಿಗಳ ದಿನ ನೆಪದಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಆಚಾರ-ವಿಚಾರ ಕಣ್ಮರೆಯಾಗಿ ಸಮಾಜದಲ್ಲಿ ಲವ್ ಜಿಹಾದ್, ಅಪ್ರಾಪ್ತ ವಯಸ್ಕರ ಮದುವೆ, ವ್ಯಭಿಚಾರದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಯುವಕ-ಯುವತಿಯರು ಇದರಿಂದ ದೂರವಿದ್ದು, ಪ್ರೇಮಿಗಳ ದಿನ ವಿರೋಧಿಸಬೇಕು ಎಂದು ಹಿಂದೂ ಸಂಘಟನೆ ಮುಖಂಡ ಮಹಾಲಿಂಗ ಜಮಖಂಡಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ(ರ-ಬ)

ಫೆ.14ರಂದು ಪ್ರೇಮಿಗಳ ದಿನ ನೆಪದಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಆಚಾರ-ವಿಚಾರ ಕಣ್ಮರೆಯಾಗಿ ಸಮಾಜದಲ್ಲಿ ಲವ್ ಜಿಹಾದ್, ಅಪ್ರಾಪ್ತ ವಯಸ್ಕರ ಮದುವೆ, ವ್ಯಭಿಚಾರದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಯುವಕ-ಯುವತಿಯರು ಇದರಿಂದ ದೂರವಿದ್ದು, ಪ್ರೇಮಿಗಳ ದಿನ ವಿರೋಧಿಸಬೇಕು ಎಂದು ಹಿಂದೂ ಸಂಘಟನೆ ಮುಖಂಡ ಮಹಾಲಿಂಗ ಜಮಖಂಡಿ ಆಗ್ರಹಿಸಿದರು.

ಪಟ್ಟಣದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮಾತನಾಡಿ, ಭಜರಂಗದಳ ಸಂಘಟನೆ ಪ್ರೀತಿ, ಪ್ರೇಮದ ವಿರೋಧಿಯಲ್ಲ, ಇದು ಪಾಶ್ಚ್ಯಾತ್ಯರ ಆಚರಣೆ, ಇದರ ನೆಪದಲ್ಲಿ ಅನೈತಿಕ ಚಟುವಟಿಕೆ ನಡೆಸುವುದನ್ನು ನಾವು ಸಹಿಸುವುದಿಲ್ಲ. ಫೆ.೧೪ರಂದು ಪಟ್ಟಣ ಹಾಗೂ ಸುತ್ತ ಮತ್ತಲಿನ ಗ್ರಾಮಗಳು, ಉದ್ಯಾನವನ, ದೇವಸ್ಥಾನ ಸೇರಿದಂತೆ ಎಲ್ಲಿಯಾದರೂ ಪ್ರೇಮಿಗಳು ಕಂಡು ಬಂದರೆ, ಭಜರಂಗದಳದಿಂದ ಸ್ಥಳದಲ್ಲಿಯೇ ಮದುವೆ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಯುವಕ-ಯುವತಿಯರು ಪ್ರೇಮಿಗಳ ದಿನದ ನೆಪದಲ್ಲಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳದೆ ಶಿಕ್ಷಣ, ಕುಟುಂಬ, ಜೀವನದ ಗುರಿಯತ್ತ ಗಮನ ಹರಿಸಿ ನಮ್ಮ ಸನಾತನ ಹಿಂದೂ ಸಂಸ್ಕೃತಿ ಅಳವಡಿಸಿಕೊಂಡು ಬದುಕು ಬಂಗಾರವಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪುರಸಭೆ ಸದಸ್ಯ ರವಿ ಜವಳಗಿ, ಹಿಂದೂ ಸಂಘಟನೆ ಮುಖಂಡರಾದ ಪ್ರಕಾಶ ಮರೆಗುದ್ದಿ, ಭೈರೇಶ ಆದೆಪ್ಪನ್ನವರ, ಅರ್ಜುನ ಪವಾರ, ಜಗದೀಶ ಜಕಣ್ಣವರ, ಮಹಾಲಿಂಗ ದೇಸಾಯಿ, ಶಿವು ಹುಣಶ್ಯಾಳ, ನಂದು ಲಾತೂರ, ಆನಂದ ಉತ್ತೂರ, ಸಚಿನ ಕಲಮಡಿ, ಶ್ರೀನಿಧಿ ಕುಲಕರ್ಣಿ, ಅನಿಲ ಕವಾಸಿ, ಹೇಮಂತ ಗುರವ, ರಾಘು ಶಿರೋಳ, ಬಸು ಮುರಾರಿ, ಅಭಿ ಲಮಾಣಿ, ರಾಘು ಕಪರಟ್ಟಿ, ಶಿವು ಕಲಮಡಿ, ಆನಂದ ಬಂಡಿಗಣಿ, ಶಿವು ಸಣ್ಣಕ್ಕಿ, ,ಅಕ್ಷಯ ಜಳ್ಳಿ, ರೇವಣ್ಣ ಇಟಕನ್ನವರ, ಪ್ರಜ್ವಲ್ ಶೆಟ್ಟಿ, ಸಂದೀಪ ಸೊರಗೊಂಡ, ರಾಘು ಪವಾರ, ಕಿರಣ ದಲಾಲ, ಅನಿಲ ಹಾವೇರಿ, ಪ್ರವೀಣ ಜಮಖಂಡಿ, ದಾನೇಶ ಡೋoಬರ, ಅಪ್ಪು ಅಮ್ಮನಗೋಳ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ನೆಮ್ಮದಿ ಜೀವನಕ್ಕಾಗಿ ಗ್ಯಾರಂಟಿಯಲ್ಲಿ ಪ್ರಾಮುಖ್ಯತೆ: ಚಲುವರಾಯಸ್ವಾಮಿ
ರಂಗ ನಿರ್ದೇಶಕ ಕೆ.ಪಿ.ದೊಡ್ಡಿ ದೇವರಾಜುಗೆ ಬಂಗಾರದ ಕಡಗ ಸಮರ್ಪಣೆ