ಶಿಕ್ಷಕ ಹಾಗೂ ರಂಗನಿರ್ದೇಶಕ ಎಸ್.ದೇವರಾಜು ಅವರನ್ನು ಗುರುತಿಸಿ ರಂಗಕರ್ಮಿಗಳು, ಅಭಿಮಾನಿಗಳು ಬಂಗಾರದ ಕಡಗವನ್ನು ಸಮರ್ಪಿಸಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ಪೂರ್ವಿಕರ ಕಾಲದಲ್ಲಿ ಶಿಕ್ಷಣದ ಕೊರತೆ ಎದುರಾಗಿದ್ದ ವೇಳೆ ನಾಟಕಗಳ ಮೂಲಕ ಇತಿಹಾಸ ತಿಳಿಸುತ್ತಾ ಒಳಿತು-ಕೆಡಕುಗಳನ್ನು ಕಲಾವಿದರು ತಿಳಿಸಿಕೊಡುತ್ತಿದ್ದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶಿಕ್ಷಕ ವೃತ್ತಿ ಜೊತೆಗೆ ರಂಗ ನಿರ್ದೇಶನದಲ್ಲಿ ತನ್ನದೆ ಚಾಪು ಮೂಡಿಸಿ ಕಲಾ ಪ್ರೇಕ್ಷಕರಿಂದ ಮನ್ನಣೆ ಗಳಿಸಿದ ರಂಗ ನಿರ್ದೇಶಕ ಕೆ.ಪಿ.ದೊಡ್ಡಿ ದೇವರಾಜು ಅವರಿಗೆ ಬಂಗಾರದ ಕಡಗ ಸಮರ್ಪಣೆ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.ವಿಶ್ವಮಾನವ ರಂಗಭೂಮಿ ಕಲಾವಿದರ ಸೇವಾ ಟ್ರಸ್ಟ್ ಆಯೋಜಿಸಿದ್ದ 8ನೇ ವರ್ಷದ ಸಂಘದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಶಿಕ್ಷಕ ಹಾಗೂ 4 ದಿನಗಳ ಸಾಮಾಜಿಕ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಹಾಗೂ ರಂಗನಿರ್ದೇಶಕ ಎಸ್.ದೇವರಾಜು ಅವರನ್ನು ಗುರುತಿಸಿ ರಂಗಕರ್ಮಿಗಳು, ಅಭಿಮಾನಿಗಳು ಬಂಗಾರದ ಕಡಗವನ್ನು ಸಮರ್ಪಿಸಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ಪೂರ್ವಿಕರ ಕಾಲದಲ್ಲಿ ಶಿಕ್ಷಣದ ಕೊರತೆ ಎದುರಾಗಿದ್ದ ವೇಳೆ ನಾಟಕಗಳ ಮೂಲಕ ಇತಿಹಾಸ ತಿಳಿಸುತ್ತಾ ಒಳಿತು-ಕೆಡಕುಗಳನ್ನು ಕಲಾವಿದರು ತಿಳಿಸಿಕೊಡುತ್ತಿದ್ದರು ಎಂದರು.ಗ್ರಾಮೀಣ ನಾಟಕಗಳು ಹುಟ್ಟಿದ್ದು ಶ್ರೀಮಂತರ ಮನೆಯಿಂದಲ್ಲ, ಭಂಗಲೆಯಿಂದಲ್ಲಾ, ಕಡು ಬಡವರ ನಡುವಿನಿಂದ ಹುಟ್ಟಿ ಬಂದಿದೆ. ಸದಾ ಒತ್ತಡದ ನಡುವೆ ಜೀವನ ನಡೆಸುತ್ತಿರುವ ಹಳ್ಳಿಗರು ಸಾಮಾಜಿಕ, ಪೌರಾಣಿಕ ನಾಟಕಗಳನ್ನು ವೀಕ್ಷಿಸುವ ಮೂಲಕ ಮನಸ್ಸನ್ನು ಉಲ್ಲಾಸ ಗೊಳಿಸಿ ಕೊಳ್ಳುತ್ತಿದ್ದರು. ಆದರೆ, ಹಗಲಿನ ಪ್ರದರ್ಶನ ಮಾಡುವುದನ್ನು ಕಡಿಮೆಗೊಳಿಸಿ ರಾತ್ರಿ ಪ್ರದರ್ಶನ ಮಾಡಿದರೆ ತಮ್ಮ ಕೆಲಸ ಕಾರ್ಯ ಮುಗಿಸಿ ನಾಟಕಗಳನ್ನು ಜನರು ವೀಕ್ಷಣೆ ಮಾಡಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.
ರಂಗಭೂಮಿ ಕಲಾವಿದರು ವೇದಿಕೆಯಲ್ಲಿ ನೇರವಾಗಿ ಪ್ರೇಕ್ಷರನ್ನು ರಂಜಿಸಲು ಪ್ರದರ್ಶನ ನೀಡುತ್ತಾರೆ. ಆದರೆ, ಸಿನಿಮಾ ಮತ್ತು ಕಿರುತೆರೆಗಳಲ್ಲಿ ಹಲವಾರು ಬಾರಿ ಅವಕಾಶ ಪಡೆದು ಪ್ರದರ್ಶನ ನೀಡಲು ಮುಂದಾಗುತ್ತಾರೆ. ಹಾಗಾಗಿ ರಂಗಕಲೆ ಗಂಡುಕಲೆಯಾಗಿದೆ ಎಂದು ರಂಗ ಕಲಾವಿದರನ್ನು ಪ್ರಶಂಸಿಸಿದರು.ಈ ವೇಳೆ ರಂಗ ನಿರ್ದೇಶಕ ಎಸ್. ದೇವರಾಜು ಅವರಿಗೆ ಬಂಗಾರದ ಕಡಗ ತೊಡಿಸಿ ಕಲಾಭಿಮಾನಿಗಳು ಅಭಿನಂದಿಸಿದರು. ಈ ವೇಳೆ ಬಿದರಹೊಸಹಳ್ಳಿ ಹನುಮೇಶ್, ದಿವ್ಯ ರಾಮಚಂದ್ರಶೆಟ್ಟಿ, ಕೆ.ಎನ್.ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ವಿ.ದೇವರಾಜು, ರಂಗಭೂಮಿ ಕಲಾವಿದರ ಸಂಘದ ಹೋಬಳಿ ಘಟಕದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಗ್ರಾಪಂ ಸದಸ್ಯ ಕೆ.ಪಿ.ದೊಡ್ಡಿ ಸಿದ್ದರಾಜು, ಮುಖಂಡರಾದ ಕೆ.ಟಿ.ಸುರೇಶ್, ಚಾಮನಹಳ್ಳಿ ಮಂಜು, ಪೊಲೀಸ್ ಸಿದ್ದರಾಜು, ಅಣ್ಣೂರು ವಿನಯ್, ತಿಪ್ಪೂರು ಕೃಷ್ಣ ,ಮಹೇಶ್, ಕೆ.ಎನ್.ರಘು ಬೂಸಿಗೌಡ, ವೆಂಕಟೇಶ್, ನವೀನ್, ರಾಜೇಶ್, ರವಿ, ವೇಣುಗೋಪಾಲ್, ಬಿ.ಟಿ.ಯೋಗೇಶ್,ಬಿ.ಎಂ. ಶ್ರೀಧರ್, ಚಂದ್ರಶೇಖರ್, ಅಶ್ವಥ್, ಬಿ.ಜಿ.ವೆಂಕಟೇಶ್,ಆನಂದ್, ಸತೀಶ್, ಮಂಜು, ಸಿದ್ದರಾಜು, ಅಂಕೇಗೌಡ, ಸಂತೋಷ್ ಸೇರಿದಂತೆ ಮತ್ತಿತರಿದ್ದರು.