ಮಕ್ಕಳಿಗೆ ನಮ್ಮ ಪರಂಪರೆಯ ಜ್ಞಾನ ಅತ್ಯಗತ್ಯ

KannadaprabhaNewsNetwork |  
Published : Aug 24, 2025, 02:00 AM IST
23ಎಚ್ಎಸ್ಎನ್4 :  | Kannada Prabha

ಸಾರಾಂಶ

ವಂಶವೃಕ್ಷವು ನಮ್ಮ ತಂದೆ- ತಾಯಿ, ಅವರ ತಂದೆ- ತಾಯಿಗಳು, ಸಹೋದರ- ಸಹೋದರಿಯರು, ರಕ್ತ ಸಂಬಂಧಗಳನ್ನು ತಿಳಿಸುತ್ತದೆ. ಆದರೆ ಇಂದಿನ ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಅಪ್ಪ- ಅಮ್ಮ ಬಿಟ್ಟರೆ ಎಷ್ಟೋ ಮಕ್ಕಳಿಗೆ ತಾತ-ಮುತ್ತಾತಂದಿರ ಪರಿಕಲ್ಪನೆಯೇ ಇರುವುದಿಲ್ಲ. ಆದ್ದರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಮಕ್ಕಳಲ್ಲಿ ವಂಶವೃಕ್ಷದ ಪರಿಕಲ್ಪನೆ ಮೂಡಿಸಲು ತಳಮಟ್ಟದಿಂದಲೂ ಇಂತಹ ಅಗತ್ಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದು ಸ್ತುತ್ಯಾರ್ಹ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ವಂಶವೃಕ್ಷ ರಚನೆ ಸ್ಪರ್ಧೆ ಮಕ್ಕಳಲ್ಲಿ ಪೂರ್ವಜರ ಮಾಹಿತಿ ನೀಡುವುದರ ಜೊತೆಗೆ ಪರಂಪರೆಯ ಬಗ್ಗೆ ಅರಿವನ್ನುಂಟು ಮಾಡುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಮರಸು ಹೊಸಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಂಶವೃಕ್ಷ ರಚನಾ ಸ್ಪರ್ಧೆಯನ್ನು ದೀಪ ಹಚ್ಚುವದರ ಮೂಲಕ ಉದ್ಘಾಟಿಸಿ ಮಾತನಾಡಿ, ವಂಶವೃಕ್ಷವು ನಮ್ಮ ತಂದೆ- ತಾಯಿ, ಅವರ ತಂದೆ- ತಾಯಿಗಳು, ಸಹೋದರ- ಸಹೋದರಿಯರು, ರಕ್ತ ಸಂಬಂಧಗಳನ್ನು ತಿಳಿಸುತ್ತದೆ. ಆದರೆ ಇಂದಿನ ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಅಪ್ಪ- ಅಮ್ಮ ಬಿಟ್ಟರೆ ಎಷ್ಟೋ ಮಕ್ಕಳಿಗೆ ತಾತ-ಮುತ್ತಾತಂದಿರ ಪರಿಕಲ್ಪನೆಯೇ ಇರುವುದಿಲ್ಲ. ಆದ್ದರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಮಕ್ಕಳಲ್ಲಿ ವಂಶವೃಕ್ಷದ ಪರಿಕಲ್ಪನೆ ಮೂಡಿಸಲು ತಳಮಟ್ಟದಿಂದಲೂ ಇಂತಹ ಅಗತ್ಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದು ಸ್ತುತ್ಯಾರ್ಹ ಎಂದರು.

ಹಿರಿಯ ಗೈಡ್ಸ್ ಶಿಕ್ಷಕಿ ಎಸ್.ಎಸ್.ಸುನೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೃಕ್ಷ ಎಂದರೆ ಸಂಬಂಧಗಳನ್ನು ಗರ್ಭೀಕರಿಸಿಕೊಂಡ ಅಂಶ. ನಮ್ಮ ಪೂರ್ವಜರ ವಿವರಗಳನ್ನು ಕ್ರಮಾನುಗತವಾಗಿ ದಾಖಲಿಸುವುದೇ ವಂಶವೃಕ್ಷ ರಚನೆ. ವೃಕ್ಷ ಫಲವತ್ತಾಗಿ ವಿಕಾಸ ಹೊಂದಬೇಕಾದರೆ ನೀರು, ಗೊಬ್ಬರ, ಆರೈಕೆ ಮಹತ್ವ ಪಡೆದಂತೆ ಇಲ್ಲಿ ವಂಶವೃಕ್ಷವೂ ನಮ್ಮ ಪೂರ್ವಜರ ಹಿಮ್ಮಾಹಿತಿ ನೀಡಲು ಅತ್ಯಗತ್ಯ. ಪೂರ್ವಜರ ಉತ್ತಮ ಗುಣಧರ್ಮಗಳು ವಂಶದ ಬಳವಳಿಯಾಗಿ ನಮಗೆ ಬರುತ್ತವೆ. ಇದರಲ್ಲಿ ಕಲೆ, ಸಾಹಿತ್ಯ, ಕ್ರೀಡೆ ಹೀಗೆ ಅನೇಕ ಅಂಶಗಳ ವರ್ಗಾವಣೆಯ ಪ್ರಸಾರವನ್ನು ನೆನಪಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ವಿಜ್ಞಾನ ಶಿಕ್ಷಕ ಲೋಕೇಶ್ ಮಾತನಾಡಿ, ವಂಶವೃಕ್ಷ ರಚನೆಯಲ್ಲಿ ಮಗುವಿನಿಂದ ಪ್ರಾರಂಭವಾಗಿ ಮೇಲ್ಮುಖವಾಗಿ ಸಾಗುತ್ತಾ ಅಣ್ಣ- ತಮ್ಮ, ಅಕ್ಕ- ತಂಗಿ, ಅಪ್ಪ- ಅಮ್ಮ, ಅತ್ತೆ-ಮಾವ, ಚಿಕ್ಕಪ್ಪ- ಚಿಕ್ಕಮ್ಮ, ದೊಡ್ಡಪ್ಪ- ದೊಡ್ಡಮ್ಮ, ಅಜ್ಜ- ಅಜ್ಜಿ, ಮುತ್ತಜ್ಜ- ಮುತ್ತಜ್ಜಿ ಹೀಗೆ ಹೆಸರು ಹಾಗೂ ಸಂಬಂಧಗಳನ್ನು ದಾಖಲಿಸುವುದಾಗಿದೆ. ಈ ದಿಸೆಯಲ್ಲಿ ನಮ್ಮ ಶಾಲೆಯ ಅನೇಕ ಮಕ್ಕಳು ಶ್ರಮವಹಿಸಿ ರಚನೆ ಮಾಡಿದ್ದಾರೆ ಎಂದರು.

ಸ್ಪರ್ಧಾ ವಿಜೇತರು:ತಾಲೂಕು ಮಟ್ಟದ ವಂಶವೃಕ್ಷ ರಚನಾ ಸ್ಪರ್ಧೆಯಲ್ಲಿ ಗಗನ ಎಸ್.ಎಲ್. ಪ್ರಥಮ, ಎಚ್. ಪ್ರಕೃತಿ ದ್ವಿತೀಯ, ಬಿ.ಎಲ್.ಯಶಸ್ ತೃತೀಯ ಸ್ಥಾನ ಪಡೆದರೆ, ಎಚ್.ಕೆ.ಹೇಮಂತ್ ಹಾಗೂ ಹರ್ಷಾ ಎಸ್. ಅವರು ಸಮಾಧಾನಕರ ಬಹುಮಾನ ಪಡೆದರು. ಸ್ಕೌಟ್ ಮಾಸ್ಟರ್ ಸುಬ್ರಹ್ಮಣ್ಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಗೈಡ್ ಶಿಕ್ಷಕಿ ಅನಿತಾ ಸ್ವಾಗತಿಸಿದರು, ಶಿಕ್ಷಕ ಅಣ್ಣಪ್ಪ ವಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಸಂಧ್ಯಾ, ಕಂಪ್ಯೂಟರ್ ಶಿಕ್ಷಕಿ ಅನುಪಮ, ಗೈಡ್ಸ್ ನಾಯಕಿ ಅನಿತಾ, ಕನ್ನಡ ಶಿಕ್ಷಕ ಅಣ್ಣಪ್ಪ, ಸ್ಕೌಟ್ ಮಾಸ್ಟರ್ ಸುಬ್ರಹ್ಮಣ್ಯ ನಾಯಕ್ ಸೇರಿ ಹಲವರು ಉಪಸ್ಥಿತರಿದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!