ಬೆಂಗಳೂರು: ಸಮಾಜ ಸೇವಾ ಕ್ಷೇತ್ರದಲ್ಲಿ ನಿಷ್ಠಾವಂತ ಹಾಗೂ ಮೌಲ್ಯಾಧಾರಿತ ಸೇವೆ ಮಾಡುತ್ತಿರುವ ಶ್ಯಾಮ್ ಸುಂದರ್ ಹೆಗಡೆ ಅವರಿಗೆ ಪ್ರತಿಷ್ಠಿತ ಕುವೆಂಪು ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಮ್ಮನ್ನು ಗುರುತಿಸಿ ಗೌರವಿಸಿದ ಎಸ್.ಎಸ್. ಕಲಾ ಸಂಗಮ ಟ್ರಸ್ಟ್, ಸಂಸ್ಥಾಪಕ ಹಾಗೂ ಅಧ್ಯಕ್ಷ ಶಿವಕುಮಾರ್, ಕಾರ್ಯಕ್ರಮದ ಆಯೋಜಕರು, ಸಹಕರಿಸಿದ ಗಣ್ಯರಿಗೆ ಮತ್ತು ಹಿತೈಷಿಗಳಿಗೆ ಶ್ಯಾಮ್ ಸುಂದರ್ ಹೆಗಡೆ ಧನ್ಯವಾದ ಸಲ್ಲಿಸಿದರು.
ಈ ಸಮಾರಂಭದಲ್ಲಿ ಹಿರಿಯ ರಾಜಕಾರಣಿ ಬಿ.ಟಿ. ಲಲಿತಾ ನಾಯಕ್, ಖ್ಯಾತ ಗಾಯಕ ಹಾಗೂ ನಟ ಶಶಿಧರ ಕೋಟೆ, ಹಿರಿಯ ನಟಿ ಗಿರಿಜಾ ಲೋಕೇಶ್, ಡಾ. ಸಂಗೀತಾ ಹೊಳ್ಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಎಸ್.ಎಸ್. ಕಲಾ ಸಂಗಮದ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಾಹಿತ್ಯ, ಸಂಸ್ಕೃತಿ ಮತ್ತು ಸದ್ಭಾವನೆಯ ಮಹತ್ವವನ್ನು ಪ್ರತಿಬಿಂಬಿಸುವ ಅತ್ಯಂತ ಅರ್ಥಪೂರ್ಣ ವೇದಿಕೆಯಾಗಿ ಮೂಡಿಬಂತು.ಶ್ಯಾಮ್ ಸುಂದರ್ ಹೆಗಡೆ ಕುರಿತು... ಕುವೆಂಪು ಸದ್ಭಾವನಾ ಪ್ರಶಸ್ತಿ ಶ್ಯಾಮ್ ಸುಂದರ್ ಹೆಗಡೆ ಅವರು ಹೊನ್ನಾವರ ಮುಗ್ವಾ ಗಾಳಿಮನೆ ಗಜಾನನ ಹಾಗೂ ನಾಗವೇಣಿ ಅವರ ಪುತ್ರ. ಪ್ರಸ್ತುತ ಅವರು ಬೆಂಗಳೂರಿನಲ್ಲಿ ಅಕೌಂಟ್ಸ್ ಮತ್ತೆ ಫೈನಾನ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲ ದಿನದ ಹಿಂದೆ ಕರ್ನಾಟಕ ಎಕ್ಸಲೆನ್ಸಿ ಹಾಗೂ ಕರ್ನಾಟಕ ಸೇವಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.