ಶ್ರಮದಾನ ಸಮಾಜ ಜಾಗೃತಿಯ ಸಾಧನ: ಹರೀಶ್ ಆಚಾರ್ಯ

KannadaprabhaNewsNetwork |  
Published : Jan 19, 2026, 01:15 AM IST
ವಿಶ್ವಕರ್ಮ ಬ್ಯಾಂಕಿನ ಕಾರ್ಕಳ ಶಾಖೆ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ಆಯೋಜಿಸಿದ 18 ನೇ ಸ್ವಚ್ಛ ಭಾರತ್ ಶ್ರಮದಾನ | Kannada Prabha

ಸಾರಾಂಶ

ವಿಶ್ವಕರ್ಮ ಬ್ಯಾಂಕಿನ ಕಾರ್ಕಳ ಶಾಖೆ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ಆಯೋಜಿಸಿದ 18ನೇ ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮ ನಡೆಯಿತು.

ಕಾರ್ಕಳ: ಸ್ವಚ್ಛ ಭಾರತ ಪರಿಕಲ್ಪನೆಯು ಸಾಕಾರವಾಗುವುದಕ್ಕೆ ಶ್ರಮದಾನವು ಸಮಾಜ ಜಾಗೃತಿಯ ಮೂಲ ಸಾಧನವಾಗಿದೆ. ನಿರಂತರ ಮಾಡುವ ಸ್ವಚ್ಛತೆಯ ಶ್ರಮದಾನವು ನಾಗರಿಕ ಸಮಾಜದ ಮಧ್ಯೆ ಜಾಗೃತಿ ಮೂಡಿಸುತ್ತದೆ. ಇದರಿಂದ ಮಹಾತ್ಮಾ ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸು ನನಸಾಗುತ್ತದೆ ಎಂದು ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷ ಎಸ್. ಆರ್. ಹರೀಶ್ ಆಚಾರ್ಯ ಹೇಳಿದರು.

ಅವರು ವಿಶ್ವಕರ್ಮ ಬ್ಯಾಂಕಿನ ಕಾರ್ಕಳ ಶಾಖೆ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ಆಯೋಜಿಸಿದ 18ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಕಳ ತಾಲೂಕು ಚಿನ್ನದ ಕೆಲಸಗಾರರ ಸಂಘ ಅಧ್ಯಕ್ಷ ಎಂ. ರಮೇಶ್ ಆಚಾರ್ಯ, ಪುರಸಭೆ ಸದಸ್ಯೆ ನಳಿನಿ ವಿಜೇಂದ್ರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.

ಕಾರ್ಕಳದ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನ ಹಾಗೂ ಕರಿಯಕಲ್ಲು ಪರಿಸರದಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಿಕೊಂಡು ಸ್ವಯಂ ಸೇವಕರು ಶ್ರಮದಾನದಲ್ಲಿ ಭಾಗವಹಿಸಿದರು. ವಿಶ್ವಕರ್ಮ ಬ್ಯಾಂಕ್ ಉಪಾಧ್ಯಕ್ಷ ಜಗದೀಶ್ ಪಡುಪಣಂಬೂರು, ನಿರ್ದೇಶಕರಾದ ಡಿ. ಭಾಸ್ಕರ ಆಚಾರ್ಯ, ಭರತ್ ನಿಡ್ಪಳ್ಳಿ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಜೊತೆ ಮೊಕ್ತೇಸರ ಸುರೇಶ್ ಆಚಾರ್ಯ ನಿಟ್ಟೆ, ವ್ಯವಸ್ಥಾಪಕ ದಿನೇಶ್ ಆಚಾರ್ಯ, ಯುವಶಕ್ತಿ ಮಹಿಳಾ ಮಂಡಳಿ ಕಾರ್ಕಳದ ಅಧ್ಯಕ್ಷೆ ಮಮತಾ ಕುಲಾಲ್ ಹಾಗೂ ಸದಸ್ಯರು, ಯುವಶಕ್ತಿ ಆಂಗ್ಲ ಮಾಧ್ಯಮ ಶಾಲೆ ನಿರ್ದೇಶಕಿ ಸುರೇಖಾ ಕೋಟ್ಯಾನ್ ಹಾಗೂ ಸದಸ್ಯರು, ಹಿರಿಯ ನಾಗರಿಕರಾದ ಸುನಂದಾ, ಲಯನ್ಸ್ ಕ್ಲಬ್ ಕಾರ್ಕಳ ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್, ನಿಟ್ಟೆ ಕಾಲೇಜಿನ ಪ್ರಾಧ್ಯಾಪಕಿ ಪ್ರಭಾ ನಿರಂಜನ್, ಡಾ. ಗುರುಚರಣ್, ಡಾ. ಶ್ರೀರಾಮ್ ಮೊಗೆರಾಯ, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಮಾನಸ ಮೊಗೆರಾಯ, ಸ್ವಚ್ಛ ಬ್ರಿಗೇಡ್ ಕಾರ್ಕಳದ ಸಂಯೋಜಕ ಫೆಲಿಕ್ಸ್ ಜೋಸೆಫ್ ವಾಸ್, ಪದಾಧಿಕಾರಿಗಳಾದ ರಾಜೇಂದ್ರ ಅಮೀನ್, ನಿಖಿಲ್ ಕುಮಾರ್ ಹಾಗೂ ಸದಸ್ಯರು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷ ತ್‌ನ ಜಿಲ್ಲಾದ್ಯಕ್ಷ ಪ್ರಕಾಶ್ ರಾವ್, ಧಾರ್ಮಿಕ ಹಾಗೂ ಸಾಮಾಜಿಕ ಕಾರ್‍ಯಕರ್ತರಾದ ಗುಣವರ್ಮ ಜೈನ್, ಸತೀಶ್ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಶಾಖಾಧಿಕಾರಿ ನಿತಿನ್ ಕೆ. ಹಾಗೂ ಸಿಬ್ಬಂದಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಭಾಗವಹಿಸಿ ಶ್ರಮದಾನದಲ್ಲಿ ಕೈ ಜೋಡಿಸಿ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿವಿ ವಾಲ್ಮೀಕಿ ಅಧ್ಯಯನ ಪೀಠಕ್ಕೀಗ ಮರುಜೀವ!
ಕ್ಷಣಿಕ ಸುಖಕ್ಕಾಗಿ ಮನುಷ್ಯನಿಂದ ಮನುಕುಲಕ್ಕೆ ತೊಂದರೆ: ದೇಶಪಾಂಡೆ