ನಸುಕಿನಲ್ಲಿಯೇ ಚುರುಕು ಮುಟ್ಟಿಸಿದ ಲೋಕಾಯುಕ್ತ

KannadaprabhaNewsNetwork |  
Published : Oct 31, 2023, 01:17 AM IST
ಲೋಕಾಯುಕ್ತ ರೈಡ್ ಚಿತ್ರದುರ್ | Kannada Prabha

ಸಾರಾಂಶ

ಜಿಲ್ಲೆಯ ಆಯಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳ ಮನೆ ಹಾಗೂ ಫಾರಂ ಹೌಸ್ ಮೇಲೆ ಸೋಮವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಚಿನ್ನಾಭರಣ, ನಗದು ಸೇರಿದಂತೆ ಕೆಲ ಕಾಗದ ಪತ್ರಗಳ ವಶಪಡಿಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಹಿರಿಯೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸಿಎಫ್ ನಾಗೇಂದ್ರ ನಾಯ್ಕ್ ಮನೆ ಮೇಲೆ ಮುಂಜಾನೆ ಏಳು ಗಂಟೆಗೆ ದಾಳಿ ಮಾಡಿದ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದ ತಂಡ ಇಡೀ ಮನೆಯನ್ನು ಪೂರ್ಣ ಪ್ರಮಾಣದಲ್ಲಿ ತಲಾಶ್ ಮಾಡಿತು. ರಾತ್ರಿ ಏಳುವರೆ ವರೆಗೂ ದಾಳಿ ಮುಂದವರಿದಿತ್ತು. ನಾಗೇಂದ್ರ ನಾಯ್ಕರ ಚಂದ್ರಾ ಲೇ ಔಟ್ ಮನೆ ಹಾಗೂ ತವನಿಧಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು.

ಹಿರಿಯೂರು ಪಟ್ಟಣದಲ್ಲಿ ಇಬ್ಬರು ಅದಿಕಾರಿಗಳ ಮನೆ, ಫಾರಂ ಮೇಲೆ ದಾಳಿ ಕನ್ನಡಪ್ರಭ ವಾರ್ತೆ ಹಿರಿಯೂರು ಜಿಲ್ಲೆಯ ಆಯಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳ ಮನೆ ಹಾಗೂ ಫಾರಂ ಹೌಸ್ ಮೇಲೆ ಸೋಮವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಚಿನ್ನಾಭರಣ, ನಗದು ಸೇರಿದಂತೆ ಕೆಲ ಕಾಗದ ಪತ್ರಗಳ ವಶಪಡಿಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಹಿರಿಯೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸಿಎಫ್ ನಾಗೇಂದ್ರ ನಾಯ್ಕ್ ಮನೆ ಮೇಲೆ ಮುಂಜಾನೆ ಏಳು ಗಂಟೆಗೆ ದಾಳಿ ಮಾಡಿದ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದ ತಂಡ ಇಡೀ ಮನೆಯನ್ನು ಪೂರ್ಣ ಪ್ರಮಾಣದಲ್ಲಿ ತಲಾಶ್ ಮಾಡಿತು. ರಾತ್ರಿ ಏಳುವರೆ ವರೆಗೂ ದಾಳಿ ಮುಂದವರಿದಿತ್ತು. ನಾಗೇಂದ್ರ ನಾಯ್ಕರ ಚಂದ್ರಾ ಲೇ ಔಟ್ ಮನೆ ಹಾಗೂ ತವನಿಧಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು. ಎಸಿಎಫ್ ನಾಗೇಂದ್ರ ನಾಯ್ಕ್ ಮನೆಯಲ್ಲಿ ಸುಮಾರು 400ಗ್ರಾಂ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಒಂದುವರೆ ಲಕ್ಷ ರುಪಾಯಿ ನಗದು ಪತ್ತೆಯಾಗಿದೆ. ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರ ಹಿರಿಯೂರು ನಿವಾಸದ ಮೇಲೆ ದಾಳಿ ನಡೆದಿದೆ. ಹಿರಿಯೂರು ಪಟ್ಟಣದ ಕುವೆಂಪು ನಗರದ ಮನೆ ಮೇಲೆ ಏಕ ಕಾಲಕ್ಕೆ ದಾಳಿ ನಡೆದಿದೆ. ಕೃಷ್ಣಮೂರ್ತಿ ಮನೆಯಲ್ಲಿ ಆಸ್ತಿಗೆ ಸಂಬಂಧಿಸಿದ ಲೆಕ್ಕ ಪತ್ರಗಳು ಸಿಕ್ಕಿವೆ. -------------- ಪೋಟೋ ಕ್ಯಾಪ್ಸನ್ ಎಸಿಎಫ್ ನಾಗೇಂದ್ರ ಅವರ ಮೇಲೆ ನಡೆದ ದಾಳಿಯಲ್ಲಿ ಲಭ್ಯವಾದ ಚಿನ್ನಾಭರಣ -------ಫೋಟೋ ಫೈಲ್ ನೇಮ್- 30 ಸಿಟಿಡಿ10

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ