ಕನ್ನಡಪ್ರಭ ವಾರ್ತೆ ಯಮಕನಮರಡಿ
ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳನ್ನು ಜನ ಸಾಮಾನ್ಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹುಕ್ಕೇರಿಯ ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಶುಕ್ರವಾರ ಯಮಕನಮರಡಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹುಕ್ಕೇರಿ, ಮತ್ತು ಗ್ರಾಮೀಣ ಸ್ಥಳಿಯ ಸಂಸ್ಥೆಗಳ ಸಹಯೋಗದಲ್ಲಿ ಹೊಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶ ಸಮಾರಂಭದಲ್ಲಿ ಅವರು ಮಾತನಾಡಿದರು. ಯುವ ಧುರೀಣ ಕಿರಣಸಿಂಗ್ ರಜಪೂತ ಮಾತನಾಡಿ ಜನಸಾಮಾನ್ಯರಿಗೆ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಮಾದರಿ ಆಗಿದೆ. ಈ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಪಡೆದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಸ್ತ್ರೀ ಶಕ್ತಿ, ಭಾಗ್ಯಲಕ್ಷ್ಮೀ ಯೊಜನೆಗಳಿಂದ ಮಹಿಳೆಯರು ಸ್ವಾವಲಂಬಿ ಬದುಕು ನಡೆಸುವಂತಾಗಿದೆ ಎಂದು ಹೇಳಿದರು.ಜಿ.ಪಂ, ಮಾಜಿ ಸದಸ್ಯ ಮಹಾಂತೇಶ ಮಗದುಮ್ಮ, ರವಿಂದ್ರ ಜಿಂಡ್ರಾಳಿ ಮಾತನಾಡಿದರು.
ವಿವಿಧ ಇಲಾಖೆಗಳ ಅಧೀಕಾರಿಗಳು ಗ್ಯಾರಂಟಿ ಯೋಜನೆಗಳ ಮಹತ್ವ ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ಯಮಕನಮರಡಿ ಗ್ರಾ.ಪಂ ಅಧ್ಯಕ್ಷೆ ಆಸ್ಮಾ ಫಣಿಬಂದ ವಹಿಸಿದ್ದರು. ಈ ಸಂದರ್ಭದಲ್ಲಿ ಹತ್ತರಗಿ ಗ್ರಾ.ಪಂ, ಅಧ್ಯಕ್ಷ ಸಮೀರ ಬೇಪಾರಿ, ಇಸ್ಲಾಂಪೂರ ಗ್ರಾ,ಪಂ,ಅಧ್ಯಕ್ಷತೆ ಸಿದ್ದವ್ವಾ ಗುರವ್ವ, ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಗುರುಪಾದಯ್ಯಾ ಹಿರೇಮಠ, ಹುಕ್ಕೇರಿ, ಹಾಗೂ ಸಂಕೇಶ್ವರ ಕೆ,ಎಸ್,ಆರ್,ಟಿ, ಘಟಕದ ವ್ಯವಸ್ಥಾಪಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧೀಕಾರಿ ಎಚ್, ಹೊಳೆಪ್ಪಾ, ಉಪತಹಸೀಲ್ದಾರ ಸಿ,ಆರ್, ಸಿಗಿಹಳ್ಳಿ, ಕಂದಾಯ ನಿರೀಕ್ಷಕ ಸಿ,ಕೆ,ಕಲಕಾಂಬಕರ, ಸಾಧೀಕ ಅಂಕಲಗಿ, ಸಾಗರ ಪಿಂಗಟ, ಮತ್ತಿತರರು ಇದ್ದರು.ಫಲಾನುಭವಿಗಳಾದ ವಿಜಯಲಕ್ಷ್ಮೀ ಕಡಲಗಿ, ಆನಂದ ಪಿಟಗಿ, ಅನುರಾಧಾ ಕಾಪಸಿ, ಮಂಗಲ ಸುತಾರ, ಹಾಗೂ ಮುಜಾವರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಗ್ರಾಮ ಆಡಳಿತಾಧಿಕಾರಿ ವಿಠ್ಠಲ ಬುಕನಟ್ಟಿ ವಂದಿಸಿದರು, ಅಭಿವೃದ್ಧಿ ಅಧಿಕಾರಿಗಳಾದ, ಎಸ್,ಎಸ್,ಢಂಗ ಹಾಗೂ ಆನಂದ ಹೊಳೆನ್ನವರ ಕಾರ್ಯಕ್ರಮ ನಡೆಸಿಕೊಟ್ಟರು.