ಯೋಜನೆಗಳ ಕುರಿತು ಜನತೆಗೆ ಅರಿವು ನೂಡಿಸಿ

KannadaprabhaNewsNetwork |  
Published : Sep 12, 2024, 01:49 AM IST
೧೧ಎಸ್.ವಿ.ಪುರ-೧ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಹಕ್ಕಿ ಪಿಕ್ಕಿ ಕಾಲೋನಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಭೇಟಿ ನೀಡಿ ಸಾರ್ವಜನಿಕರ ಕುಂದುಕೂರತೆಗಳ ಬಗ್ಗೆ ಚರ್ಚಿಸುತ್ತಿರುವುದು. | Kannada Prabha

ಸಾರಾಂಶ

ಸ್ಥಳೀಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಬೇಕು, ಹಕ್ಕಿ ಪಿಕ್ಕಿ ಜಾನಾಂಗಕ್ಕೆ ವಿದ್ಯಾರ್ಥಿ ವೇತನ, ಉಚಿತ ವಿದ್ಯಾಭ್ಯಾಸ ಇದೆ ಸಮಾಜ ಕಲ್ಯಾಣ ಇಲಾಖೆಯಿಂದ ಎಲ್ಲಾ ಸೌಲಭ್ಯಗಳು ಸಿಗುತ್ತದೆ, ಅವರಿಗೆ ಸರ್ಕಾರ ಸೌಲಭ್ಯಗಳ ಬಗ್ಗೆ ಅರಿವು ಇಲ್ಲ,

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರಮೊದಲನೇ ಬಾರಿಗೆ ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಈ ಬಗ್ಗೆ ಮೊದಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸಭೆಗೆ ಯಾರೂ ಬಂದಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ರಾಯಲ್ಪಾಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಹಕ್ಕಿ ಪಿಕ್ಕಿ ಕಾಲೋನಿಗೆ ಭೇಟಿ ನೀಡಿ ಕುಂದುಕೂರತೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಮಾಹಿತಿ ಪಡೆದು ಚರ್ಚಿಸಿ, ನಂತರ ಮಾತನಾಡಿದರು.ಯೋಜನೆಗಳ ಅರಿವು ಮೂಡಿಸಿ

ಸ್ಥಳೀಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಬೇಕು, ಹಕ್ಕಿ ಪಿಕ್ಕಿ ಜಾನಾಂಗಕ್ಕೆ ವಿದ್ಯಾರ್ಥಿ ವೇತನ, ಉಚಿತ ವಿದ್ಯಾಭ್ಯಾಸ ಇದೆ ಸಮಾಜ ಕಲ್ಯಾಣ ಇಲಾಖೆಯಿಂದ ಎಲ್ಲಾ ಸೌಲಭ್ಯಗಳು ಸಿಗುತ್ತದೆ, ಅವರಿಗೆ ಸರ್ಕಾರ ಸೌಲಭ್ಯಗಳ ಬಗ್ಗೆ ಅರಿವು ಇಲ್ಲ, ಗ್ರಾಮ ಸಭೆ ನಡೆದಿಲ್ಲ, ಉದ್ಯೋಗ ಖಾತರಿ ಬಗ್ಗೆ ಮಾಹಿತಿ ಇಲ್ಲ. ಈ ಗ್ರಾಮದಲ್ಲಿ ಐದು ಜನ ಅಂಗವಿಕಲ ಮಕ್ಕಳು, ಆರೋಗ್ಯ ಇಲಾಖೆ ಕೆಲಸ ಮಾಡುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಇಲಾಖೆ ಈ ಗ್ರಾಮದ ಜನರು ಸ್ಪಂದಿಸುತ್ತಿಲ್ಲ ಎಂದರು. ಅಧಿಕಾರಿಗಳಿಗೆ ತರಾಟೆ:ಮಹಿಳಾ ಆಯೋಗದ ಅಧ್ಯಕ್ಷರು ನೇತೃತ್ವದ ತಂಡದ ಪ್ರವಾಸದ ಮಾಹಿತಿ ಇದ್ದರೂ ಸ್ಥಳಕ್ಕೆ ಅಧಿಕಾರಿಗಳು ಬಂದಿರಲಿಲ್ಲ. ಇದುದ್ದನ್ನ ಕಂಡು ಬೇಸರಗೊಂಡ ಅಧ್ಯಕ್ಷರು, ಜಿಲ್ಲಾಧಿಕಾರಿಗೆ ಕರೆ ಮಾಡಿ ತಾಲೂಕು ಮಟ್ಟದ ಅಧಿಕಾರಿಗಳನ್ನು (ಹಕ್ಕಿ ಪಿಕ್ಕಿ ಕಾಲೋನಿಗೆ) ಸ್ಥಳಕ್ಕೆ ಕರೆಸಿಕೊಡುವಂತೆ ಕೋರಿದರು. ಬಳಿಕ ಸರ್ಕಾರದ ವಿವಿಧ ಸೌಲಭ್ಯಗಳ ಬಗ್ಗೆ ಸಾರ್ವಜಿನಿಕರಿಂದ ಮಾಹಿತಿ ಪಡೆದು ಸೌಲಭ್ಯಗಳ ಬಗ್ಗೆ ಅರಿವು ಇಲ್ಲದ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ನೀವು ಗ್ರಾಮಕ್ಕೆ ಎಷ್ಟು ಸರಿ ಭೇಟಿ ನೀಡಿದ್ದೀರಿ, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸದಿದ್ದರೆ ಇಲಾಖೆಯಿಂದ ಬರುವಂತಹ ಆದೇಶಗಳಿಗೆ ತಲೆಭಾಗಬೇಕಾಗುತ್ತದೆ ಎಂದು ಖಾರವಾಗಿ ನುಡಿದರು. ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಇದೇ ತಿಂಗಳು ೨೦ರಂದು ಗ್ರಾಮವಾಸ್ತವ್ಯ ಮಾಡಿ ಸಾರ್ವಜನಿಕರ ಕುಂದುಕೊರೆತೆಯ ಬಗ್ಗೆ ಚರ್ಚಿಸಲಾಗುವುದು ಮಾಹಿತಿ ನೀಡಿದರು. ವೈದ್ಯರ ನೇಮಕಕ್ಕೆ ಕ್ರಮ

ಕಳೆದ ಮೂರು ವರ್ಷದಿಂದ ವೈದ್ಯರಿಲ್ಲದೆ ಪರದಾಡುತ್ತಿದ್ದು, ಇಲ್ಲಿ ಶುಶ್ರೂಷಕಿಯೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ವೈದ್ಯರಿಲ್ಲದೆ ಮಗುವೊಂದು ಚಿಕಿತ್ಸೆ ಇಲ್ಲದೆ ಮೃತಪಟ್ಟಿತ್ತು. ಹೆರಿಗಾಗಿ ಆರೋಗ್ಯ ಕೇಂದ್ರಕ್ಕೆ ಹೋದರೆ ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿತ್ತಾರೆ ಎಂದು ಸಾರ್ವಜನಿಕರ ದೂರು ನೀಡಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನ ಅತಿ ಶೀಘ್ರವಾಗಿ ನೇಮಿಸಲು ಬೇಕಾಗುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಡಿಎಚ್‌ಒ ಡಾ.ಶ್ರೀನಿವಾಸ್, ಆರ್‌ಸಿಎಚ್‌ಒ ಡಾ.ಚಂದನ್, ತಹಶೀಲ್ದಾರ್ ಜಿ.ಎನ್.ಸುದಿಂದ್ರ, ಇಒ ಎನ್.ರವಿ, ಟಿಎಚ್‌ಒ ಮಹಮ್ಮದ್ ಶರೀಫ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಸಿಡಿಪಿಒ ನವೀನ್, ಸ್ಥಳೀಯ ವೈದ್ಯ ಡಾ.ರೆಡ್ಡಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!