ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ನಮೋ ಬ್ರಿಗೇಡ್ ಮಹಾಲಿಂಗಪುರ ಘಟಕದ ವತಿಯಿಂದ ಕೆಎಲ್‌ಇ ಕಾಲೇಜು ಎದುರು ಶುಕ್ರವಾರ ಸಂಜೆ ಆಯೋಜಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣದಂತಹ ದಿಟ್ಟ ನಿರ್ಧಾರಗಳಿಂದ ಇಂದು ಭಾರತ ಜಗತ್ತಿನ 5ನೇ ಆರ್ಥಿಕ ರಾಷ್ಟವಾಗಿ ಬೆಳೆದು ನಿಂತಿದೆ. ತ್ರಿವಳಿ ತಲಾಖ್ ರದ್ಧತಿಯಿಂದ ಮುಸ್ಲಿಂ ಮಹಿಳೆಯರ ಶಕ್ತಿ ಹೆಚ್ಚಿದೆ ಎಂದು ನುಡಿದರು.
ತಾವು ದಲಿತ ಪರ ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಮುಸ್ಲಿಮರ ಓಲೈಕೆಗಾಗಿ ದಲಿತರ ಆಭಿವೃದ್ಧಿಗಾಗಿ ಮೀಸಲಿದ್ದ ₹11 ಸಾವಿರ ಕೋಟಿ ಮುಸ್ಲಿಮರಿಗೆ ನೀಡಿ ದಲಿತರಿಗೆ ದ್ರೋಹ ಬಗೆದಿದ್ದಾರೆ. ಆದರೆ, ಮೋದಿ ಅಂಬೇಡ್ಕರ್ ಜನ್ಮಸ್ಥಳ, ವಿದ್ಯಾಭ್ಯಾಸ ಸ್ಥಳ, ಸಮಾಧಿಗಳನ್ನು ಪಂಚ ತೀರ್ಥಗಳೆಂದು ಅಭಿವೃದ್ಧಿ ಮಾಡಿದ್ದಾರೆ. ಹಾಗೂ ದಲಿತ ಮಹಿಳೆಯನ್ನು ರಾಷ್ಟ್ರಪತಿಗಳನ್ನಾಗಿ ಮಾಡಿ ಗೌರವ ನೀಡಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್‌ನವರಿಗೆ ದೇಶದ ಅಭಿವೃದ್ಧಿ ಬೇಕಿಲ್ಲ. ಕಳೆದ 10 ವರ್ಷಗಳ ಮೋದಿ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲೇ ಬಾಂಬ್ ಸ್ಪೋಟದ ಸದ್ದಡಗಿತ್ತು. ಆದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಂದ ತಕ್ಷಣವೇ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ನಡೆಯಿತು. ಬೆಳಗಾವಿ ಹಾಗೂ ವಿಧಾನಸೌಧದಲ್ಲೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿಬಂದವು. ಹಿಂದೂ ಯುವತಿಯರ ಹತ್ಯೆ, ಯುವಕರ ಮೇಲೆ ಹಲ್ಲೆ ನಡೆಯಿತ್ತಲೇ ಇವೆ. ಇದು ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಗಿಫ್ಟ್ ಎಂದು ಟೀಕಿಸಿದರು.
ಹುಕ್ಕೇರಿ ಕ್ಷೇತ್ರ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತ ಈಗ ಬದಲಾಗಿದೆ. ಈಗ ನಮ್ಮ ಸಮಯ ಬಂದಿದೆ. ಸಮರ್ಥ ನಾಯಕ ಮೋದಿಯವರಿಂದ ಭಾರತ ವಿಶ್ವಗುರುವಾಗಿದೆ. ಇತಿಹಾಸ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದಿ ಗೆಲ್ಲಬೇಕು ಎಂದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಶೇಖರ ಅಂಗಡಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಶ್ರೀಮಂತ ಹಳ್ಳಿ, ಮನೋಹರ ಶಿರೋಳ, ಜಿ.ಎಸ್. ಗೊಂಬಿ, ಶಿವಾನಂದ ಅಂಗಡಿ, ರವಿ ಜವಳಗಿ, ರಾಕೇಶ ಕೆಸರಗೊಪ್ಪ, ಆನಂದ ಶಿರಗುಪ್ಪಿ, ಮಹಾಲಿಂಗ ದೇಸಾಯಿ, ಮಂಜು ಗೊಂಬಿ, ರವಿ ಗಿರಿಸಾಗರ, ವಿನೋದ ಹುಣಶ್ಯಾಳ, ಸಚಿನ್ ಕಲ್ಮಡಿ, ಸಂಗಮೇಶ ಅಂಬಲ್ಯಾಳ, ತಮ್ಮಣ್ಣಿ ಆದೆಪ್ಪನವರ, ಶಶಿ ಬದ್ನಿಕಾಯಿ, ಸಚಿನ್ ಖೋತ್, ಸಿದ್ದುಗೌಡ ಪಾಟೀಲ, ಶಿವಾನಂದ ತಿಪ್ಪಾ, ಪರಪ್ಪ ಹುದ್ದಾರ ಇತರರಿದ್ದರು.
ಕೋಟ್..
ಚಕ್ರವರ್ತಿ ಸೂಲಿಬೆಲೆ. ಬ್ರಿಗೇಡ್ ಸಂಸ್ಥಾಪಕ