ಕನ್ನಡಪ್ರಭ ವಾರ್ತೆ ಇಳಕಲ್ಲಇಲ್ಲಿನ ಲಿಂ.ವಿಜಯ ಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಮದುವೆಯಾಗುವ ನೀವುಗಳು ಪುಣ್ಯವಂತರು ಕಾರಣ ಸರ್ವಧರ್ಮಗಳ ಕಲ್ಯಾಣ ಮಹೋತ್ಸವದಲ್ಲಿ ಮದುವೆಯಾಗುವವರು ಸ್ವರ್ಗದಲ್ಲಿ ಮದುವೆಯಾದಂತೆ ಎಂದು ಡಾ.ಗುರುಮಹಾಂತ ಶ್ರೀಗಳು ನುಡಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಲ್ಲಿನ ಲಿಂ.ವಿಜಯ ಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಮದುವೆಯಾಗುವ ನೀವುಗಳು ಪುಣ್ಯವಂತರು ಕಾರಣ ಸರ್ವಧರ್ಮಗಳ ಕಲ್ಯಾಣ ಮಹೋತ್ಸವದಲ್ಲಿ ಮದುವೆಯಾಗುವವರು ಸ್ವರ್ಗದಲ್ಲಿ ಮದುವೆಯಾದಂತೆ ಎಂದು ಡಾ.ಗುರುಮಹಾಂತ ಶ್ರೀಗಳು ನುಡಿದರು.

ನಗರದ ಹೋರ ವಲಯದಲ್ಲಿರುವ ಲಿಂ.ವಿಜಯ ಮಹಾಂತ ಶಿವಯೋಗಿಗಳ ಕರ್ತು ಗದ್ದುಗೆಯಲ್ಲಿ ನಡೆದ ಸರ್ವಧರ್ಮಗಳ ಉಚಿತ ಕಲ್ಯಾಣ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ 20 ಜೋಡಿ ನವದಂಪತಿಗಳಿಗೆ ಪ್ರತಿಜ್ಞಾವಿಧಿ ಬೋದಿಸಿ ಬಸವ ತತ್ವದಂತೆ ನವದಂಪತಿಗಳಿಗೆ ಮದುವೆ ಸಮಾರಂಭ ಮಾಡಿ ಮಾತನಾಡಿದ ಶ್ರೀಗಳು, ನವದಂಪತಿಗಳು ಪರಸ್ಪರ ಅರಿತು ಬಾಳಬೇಕು. ನಿಮ್ಮಲ್ಲಿ ದುಶ್ಚಟಗಳಿದ್ದರೆ ಇಂದೆ ಮಹಾಂತ ಜೋಳಿಗೆಗೆ ಹಾಕಿ ಉತ್ತಮ ಜೀವನ ನಡೆಸಿ, ಮುಂದೆ ನಿಮಗಾಗುವ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರ ಜತೆ ಅವರಿಗೆ ಸಂಸ್ಕಾರ ಲಿಂಗಪೂಜೆ ಮಾಡುವುದನ್ನು ಕಲಿಸಿ ಇನ್ನು ಬಡ ಜನರು ಸಾಲ ಸೂಲ ಮಾಡಿ ಅದ್ಧೂರಿ ಮದುವೆ ಮಾಡುವುದನ್ನು ಬಿಟ್ಟು ಇಂತ ಗುಡಿ ಜಾತ್ರೆಗಳಲ್ಲಿ ಆಗುವ ಸರಳ ಕಲ್ಯಾಣ ಮಹೋತ್ಸವ ಸಮಾರಂಭದಲ್ಲಿ ನಿಮ್ಮ ಮಕ್ಕಳ ಮದುವೆ ಮಾಡಿ ಎಂದು ಆಶೀರ್ವಚನ ನೀಡಿದರು.

ಶಿರೂರಿನ ಡಾ.ಬಸವಲಿಂಗ ಶ್ರೀಗಳು, ಲಿಂಗಸೂರಿನ ಸಿದ್ದಲಿಂಗ ಶ್ರೀ, ಸಿದ್ದಯ್ಯನಕೊಟೆಯ ಮಹಾಂತ ಶ್ರೀ ಇತರರು ಪಾಲ್ಗೊಂಡಿದ್ದರು.

ಮಲ್ಲಯ್ಯ ಗಣಾಚಾರಿ ಅವರು ಬಸವ ತತ್ವದಂತೆ ವಧು-ವರರಿಗೆ ರುದ್ರಾಕ್ಷಿ ಕಟ್ಟುವ ಮೂಲಕ ಮತ್ತು ಅಕ್ಷತೆ ಹಾಕದೆ ಪುಷ್ಪವೃಷ್ಟಿ ಮಾಡಿ ಮದುವೆಯ ಕಾರ್ಯವನ್ನು ಮಾಡಿಸಿದರು.

ಈ ಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಇಳಕಲ್ಲ ನಗರದ ವಿಜಯ ಮಹಾಂತೇಶ್ವರ ಕೃಷಿ ಮಾರುಕಟ್ಟೆ ಎಲ್ಲ ವ್ಯಾಪಾರಸ್ಥರು ಅಚ್ಚುಕಟ್ಟಾಗಿ ಏರ್ಪಡಿಸಿದ್ದರು. ಮಹಾಂತಗೌಡ ಪಾಟೀಲ ಸ್ವಾಗತಿಸಿದರೆ. ಅಂಗಡಿ ವಂದಿಸಿದರು. ಸಂಗಣ್ಣ ಕಂಪ್ಲಿ ನಿರೂಪಿಸಿದರು.