ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಂಗಳವಾರ ಬಿಜೆಪಿ ಬಾಗಲಕೋಟೆ ಮತಕ್ಷೇತ್ರದಿಂದ ನಗರ 2ಮತ್ತು 4 ನೇ ವಾರ್ಡಿನಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರದ ಪಾದಯಾತ್ರೆಯಲ್ಲಿ ಮತಯಾಚನೆ ಮಾತನಾಡಿದ ಅವರು, ಇದು ದೇಶದ ಚುನಾವಣೆಯಾಗಿದ್ದರಿಂದ ಜನರಿಗೆ ದೇಶದ ಭದ್ರತೆ ಹಾಗೂ ಅಭಿವೃದ್ಧಿ ಪಥದ ಬಗ್ಗೆ ಯೋಚನೆ ಇರುತ್ತದೆ. ದೇಶದ ಅಭಿವೃದ್ಧಿ ಹಾಗೂ ಭದ್ರತೆ ಮೋದಿಯಿಂದ ಮಾತ್ರ ಸಾಧ್ಯ ಎಂದು ಜನರಿಗೆ ಮನದಟ್ಟಾಗಿದೆ. ಹೀಗಾಗಿ ರಾಜ್ಯದಲ್ಲಿ ಮೋದಿ ಅಲೆ ಜನರ ಮನಮನದಲ್ಲಿ ಗಟ್ಟಿಯಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಗದ್ದಿಗೌಡರನ್ನು ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲ ಪಡಿಸೋಣ ಎಂದರು.
ಪಾದಯಾತ್ರೆಯಲ್ಲಿ ನಗರಸಭೆ ಸದಸ್ಯೆ ರೇಖಾ ಕಲಬುರ್ಗಿ, ನಿರ್ಮಲಾ ಖಂಡೆಗೋಳ, ಶಶಿಕಲಾ ಮಜ್ಜಗಿ, ಶೋಭಾ ರಾವ್, ಮುತ್ತು ಜಿಗಳೂರ, ನೀಲಪ್ಪ ಬೆವೂರ, ರುದ್ರುಗೌಡ, ಸಲಿಂ ಮೊಮಿನ, ರಮೇಶ ಕಾಂಬಳೆ, ಸುರೇಶ ಲಮಾಣಿ, ಈರಣ್ಣ ಬಡಿಗೇರ, ಕುಮಾರ ಕಾಳೆ, ಉಮೇಶ ಒಡಿಯರ, ಸಂಗಮೇಶ ಆರಿ, ಹನಮಂತ ಅಂಬಿಗೇರ, ಯಕ್ಕಪ್ಪ ಅಂಬಿಗೇರ, ಸೇರಿದಂತೆ ಬಿಜೆಪಿಯ ಎಲ್ಲ ನಗರಸಭೆ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.