ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿ ಸಾಹಿತಿಕನ್ನಡಪ್ರಭ ವಾರ್ತೆ ಹೊನ್ನಾವರನಶಿಸುತ್ತಿರುವ ಜನಪದ ಸಾಹಿತ್ಯದ ಜೀವಂತಿಕೆಗಾಗಿ ಸರ್ಕಾರ ಗ್ರಾಮೀಣ ಪ್ರತಿಭೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಸಾಹಿತಿ ರೋಹಿದಾಸ ನಾಯಕ ಹೇಳಿದರು.

ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪುರಸ್ಕಾರಕ್ಕೆ ಭಾಜನರಾದ ಹೊದಿಕೆ ಶಿರೂರಿನ ಗೌರಿ ನಾಯ್ಕ ಅವರ ಮನೆಯಂಗಳದಲ್ಲಿ ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನ ಶ್ರಮದ ಸಂಕೇತವೇ ಜಾನಪದವಾಗಿ ಅಕ್ಷರಗಳಿಲ್ಲದ ಕಾಲದ ಜನಪದರ ಸಾಮೂಹಿಕ ಅಭಿವ್ಯಕ್ತಿಯನ್ನು ನೃತ್ಯ, ಕುಣಿತ, ಹಾಡಿನ ಮೂಲಕ ಹೊರಹಾಕಿ ಸಂತೋಷಪಡುವ ಜಾನಪದ ಕಲೆ ಇಂದು ನಶಿಸುತ್ತಿದೆ. ಅದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಸಾಹಿತಿ ಡಾ. ವಸಂತ‌ ಪೆರ್ಲ ಮಾತನಾಡಿ, ನಸಿಸುತ್ತಿರುವ ಜಾನಪದ ಅಕ್ಷರ ರೂಪದಲ್ಲಿದ್ದರೆ ಸಾಲದು. ಹಾಡುಗಳನ್ನು ಧ್ವನಿ ಮುದ್ರಣ ಮಾಡಿ ದಾಖಲಿಸಿದರೆ ಮಾತ್ರ ಅದು ಶಾಶ್ವತವಾಗಿ ನೆನಪಿರಲು ಸಾಧ್ಯ ಎಂದರು.

ಸಾಹಿತಿ ಸುಮುಖಾನಂದ ಜಲವಳ್ಳಿ ಮಾತನಾಡಿ, ಶಿಷ್ಟ ಕಾವ್ಯಕಿಂತಲೂ ಅದ್ಭುತವಾದ ಕಾವ್ಯ ಪರಂಪರೆ ಜನಪದದಲ್ಲಿದೆ. ಒಂದೊಂದು ಖಂಡ ಕಾವ್ಯವು ಬದುಕಿನ ದರ್ಶನವನ್ನು ಮಾಡಿಕೊಡುತ್ತದೆ. ನಾಮಧಾರಿಗಳಲ್ಲಿ ಸಾಕಷ್ಟು ಸಮೃದ್ಧವಾದ ಸಾಹಿತಿಕ ಜನಪದ ಮೌಲ್ಯಗಳು ಅಡಗಿದೆ ಎಂದರು.


ಸಾಹಿತ್ಯ ಪರಿಷತ್ತಿನ ಪರವಾಗಿ ಸನ್ಮಾನಿಸಿದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಅತ್ಯಂತ ಶ್ರೀಮಂತವಾದ ಜನಪದ ಕಲೆ ಮಾಯವಾಗುತ್ತಿದೆ. ಸಾಹಿತ್ಯ ಪರಿಷತ್ತು ಸಾಧಕರಿಗೆ ಗೌರವಿಸುವುದರ ಮೂಲಕ ಜಾನಪದ ಕಲೆಯ ಉಳಿವಿಗಾಗಿ ಮತ್ತು ಅದನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸಕ್ಕಾಗಿ ಸದಾ ಕಲಾವಿದರೊಂದಿಗೆ ಕೈಜೋಡಿಸುತ್ತೇವೆ ಎಂದರು.

ಸಾಹಿತಿ ಪುಟ್ಟು ಕುಲ್ಕರ್ಣಿ, ಎನ್.ಆರ್. ಗಜು, ಪ್ರಾಂಶುಪಾಲ ರಾಜೀವ ನಾಯ್ಕ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಎಂ. ಮಾರುತಿ, ಸಾಹಿತಿ ಪ್ರಕಾಶ ನಾಯ್ಕ, ಸಾಲ್ಕೋಡ ಗ್ರಾಪಂ ಮಾಜಿ ಅಧ್ಯಕ್ಷೆ ರಜನಿ ನಾಯ್ಕ, ಉಪಾಧ್ಯಕ್ಷ ಸಚಿನ ನಾಯ್ಕ, ಚಂದಾವರ ಗ್ರಾಪಂನ ಹನುಮಂತ ನಾಯ್ಕ, ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಗಜಾನನ ನಾಯ್ಕ, ಶಿಕ್ಷಕ ಸಂಘದ ಶಂಕರ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ನಾಯ್ಕ, ಉದ್ದಿಮೆದಾರ ಗಿರೀಶ ನಾಯ್ಕ, ಶಿವಾನಂದ ಮರಾಠಿ, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಜನಾರ್ದನ ಕಾಣಕೋಣಕರ್, ಮಹೇಶ ಭಂಡಾರಿ, ಕೇಶವ ಶೆಟ್ಟಿ, ಶುಭಾ ಸಭಾಹಿತ, ಸಾಧನ ಬರ್ಗಿ, ವಿಶ್ವನಾಥ ನಾಯ್ಕ, ಮೀನಾ ಗೌಡ, ಗಜಾನನ ನಾಯ್ಕ, ಗೋವಿಂದ ನಾಯ್ಕ ಉಪಸ್ಥಿತರಿದ್ದರು.

ಗೌರಿ ನಾಯ್ಕ ಮತ್ತು ನಾಗಪ್ಪ ನಾಯ್ಕ ದಂಪತಿಯನ್ನು ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಚ್‌. ಗೌಡ ಸ್ವಾಗತಿಸಿದರು. ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.