ವಿಜಯೇಂದ್ರ ಹಾಗೂ ನಮ್ಮ ನಡುವೆ ಯಾವುದೇ ಸಂಧಾನ ಸಭೆ ನಡೆದಿಲ್ಲ : ಲಿಂಬಾವಳಿ

KannadaprabhaNewsNetwork |  
Published : Jun 29, 2025, 01:33 AM ISTUpdated : Jun 29, 2025, 01:38 PM IST
Aravind Limbavali

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ನಮ್ಮ ನಡುವೆ ಸಂಧಾನ ಸಭೆ ನಡೆಯಿತು ಎಂಬುದು ಮಾಧ್ಯಮಗಳ ಸೃಷ್ಟಿ. ಆದರೆ ಯಾವುದೇ ಸಂಧಾನ ಸಭೆ, ಮತ್ತೊಂದು ಸಭೆ ಆಗಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು. '

 ಕೋಲಾರ  : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ನಮ್ಮ ನಡುವೆ ಸಂಧಾನ ಸಭೆ ನಡೆಯಿತು ಎಂಬುದು ಮಾಧ್ಯಮಗಳ ಸೃಷ್ಟಿ. ಆದರೆ ಯಾವುದೇ ಸಂಧಾನ ಸಭೆ, ಮತ್ತೊಂದು ಸಭೆ ಆಗಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು. '

ನಗರದ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಹಿನ್ನೆಲೆ ಜಿಲ್ಲಾ ಬಿಜೆಪಿಯಿಂದ ಕರಾಳ ಕಾರ್ಯಕ್ರಮದ ನಂತರ ಪತ್ರಕರ್ತರ ಜತೆ ಮಾತನಾಡಿ, ಕುಟುಂಬದಲ್ಲಿ ಸಮಸ್ಯೆ ಇದ್ದಂತೆ ಪಕ್ಷಗಳಲ್ಲೂ ಇರುತ್ತೆ, ಬಿಜೆಪಿ ಪಕ್ಷ ದೊಡ್ಡ ಪಕ್ಷ, ಸಮಸ್ಯೆಗಳು ಇದ್ದೇ ಇರುತ್ತೆ ಅದು ಸಹಜ, ಸಮಸ್ಯೆಗಳನ್ನು ಬಗೆಹರಿಸಲು ಸೇರಿದಂತಹ ಸಭೆ ಅಷ್ಟೇ ಎಂದರು.ಶೇಕ್ ಹ್ಯಾಂಡ್ ಕೊಡಬಾರದಾ

ಸಭೆಗಳಲ್ಲಿ ನಮಗೆ ಯಾರಾದರೂ ಸಿಕ್ಕಿದರೆ ಶೇಕ್ ಹ್ಯಾಂಡ್ ಕೊಡಬಾರದಾ ಎಂದು ಪ್ರಶ್ನೆ ಮಾಡಿದ ಅವರು ವಿಜಯೇಂದ್ರ ಮತ್ತು ಅರವಿಂದ ಲಿಂಬಾವಳಿ ಶೇಕ್ ಹ್ಯಾಂಡ್ ಮಾಡಿದರೆಂದು ಬರುತ್ತಿದೆ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ, ನಿಮಗೆ ಟಿಆರ್‌ಪಿ ಜಾಸ್ತಿ ಮಾಡಬೇಕು, ಅದಕ್ಕೆ ಹೀಗೆ ಎಂದರು. ಭಿನ್ನಮತ ಶಮನವಾಗಿದ್ದೀಯಾ ಎಂಬ ಪ್ರಶ್ನೆಗೆ, ಅದು ಅಂತರಿಕ ವಿಷಯ, ಪಕ್ಷ ಪರಿಹಾರ ಕಂಡು ಕೊಳ್ಳುತ್ತೆ ಎಂದರು.

ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಯಾರು ಮಾತನಾಡಿದ್ದಾರೆ ಅವರನ್ನೆ ಕೇಳಿ. ಬದಲಾವಣೆ ಅದು ಆಂತರಿಕ ವಿಚಾರ, ನಮಗೆ ಹೈಕಮಾಂಡ್ ಇದೆ, ಸಲಹೆ ಸೂಚನೆ ನೀಡಲು ಆರ್‌ಎಸ್‌ಎಸ್ ಇದೆ ಅವರ ಮಟ್ಟದಲ್ಲಿ ಚರ್ಚೆ ನಡೆಯುತ್ತೆ. ಭಿನ್ನಾಭಿಪ್ರಾಯ ಬಗೆಹರಿಸಲು ಆರ್‌ಎಸ್ ಎಸ್ ಬರಬೇಕಾಯಿತು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ತುರ್ತು ಪರಿಸ್ಥಿತಿಯನ್ನು ಆರ್‌ಎಸ್‌ಎಸ್ ಬಗೆಹರಿಸಲು ಕೆಲಸ ಮಾಡಿದೆ ಎಂದರು, ಹಾಗಾದರೆ ಬಿಜೆಪಿಯಲ್ಲಿ ತುರ್ತು ಪರಿಸ್ಥಿತಿ ಇದ್ದೀಯಾ ಎನ್ನುತ್ತಲೆ ಉತ್ತರ ನೀಡದೆ ಜಾರಿಕೊಂಡರು.

PREV
Read more Articles on

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ