ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕೀಯ ಬೇಡ

KannadaprabhaNewsNetwork |  
Published : Aug 30, 2025, 01:00 AM IST
29ಎಚ್ಎಸ್ಎನ್3 : ಬೇಲೂರು ತಾಲೂಕಿನ  ಹೆಬ್ಬಾಳು ಗ್ರಾಮದಲ್ಲಿ  ಸಮುದಾಯದ ಭವನ ಅಡುಗ  ಮನೆ ಕಾಮಗಾರಿಗೆ ಕಾಂಗ್ರೆಸ್ ಮುಖಂಡರು ಶಂಕುಸ್ಥಾಪನೆ ನಡೆಸಿದರು. | Kannada Prabha

ಸಾರಾಂಶ

ಹೆಬ್ಬಾಳು ಗ್ರಾಮದಲ್ಲಿ ಸಮುದಾಯ ಭವನದ ಅಡುಗೆಮನೆ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಲೋಕಸಭಾ ಸದಸ್ಯರು ಮತ್ತು ಸ್ಥಳೀಯ ವಿಧಾನಸಭಾ ಸದಸ್ಯರು ಅನುದಾನ ನೀಡಿದ ಹಿನ್ನೆಲೆಯಲ್ಲಿ ಸಮುದಾಯದ ಭವನ ನಿರ್ಮಾಣವಾಗಿದೆ. ಸಮುದಾಯದ ಭವನದ ಪಕ್ಕದಲ್ಲಿ ಅಡುಗೆಮನೆ, ಶೌಚಾಲಯ ನಿರ್ಮಿಸಲು ಹಾಸನ ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ‌ ಪಟೇಲ್ 5 ಲಕ್ಷವನ್ನು ನೀಡಿದ್ದಾರೆ. ಈ ಗ್ರಾಮಕ್ಕೆ ಅನುದಾನ ಬರಲು ಮಾಜಿ ಸಚಿವರಾದ ಬಿ.ಶಿವರಾಂ ಕೂಡ ಕಾರಣಕರ್ತರಾಗಿದ್ದಾರೆ. ಗ್ರಾಮದ ಅಭಿವೃದ್ಧಿಯಲ್ಲಿ ಯಾವುದೇ ರಾಜಕಾರಣ ಬೇಡ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ‌ ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಗ್ರಾಮದ ಅಭಿವೃದ್ಧಿಯಲ್ಲಿ ಯಾವುದೇ ರಾಜಕಾರಣ ಬೇಡ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ‌ ಆನಂದ್ ಹೇಳಿದರು.ಹೆಬ್ಬಾಳು ಗ್ರಾಮದಲ್ಲಿ ಸಮುದಾಯ ಭವನದ ಅಡುಗೆಮನೆ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಲೋಕಸಭಾ ಸದಸ್ಯರು ಮತ್ತು ಸ್ಥಳೀಯ ವಿಧಾನಸಭಾ ಸದಸ್ಯರು ಅನುದಾನ ನೀಡಿದ ಹಿನ್ನೆಲೆಯಲ್ಲಿ ಸಮುದಾಯದ ಭವನ ನಿರ್ಮಾಣವಾಗಿದೆ. ಸಮುದಾಯದ ಭವನದ ಪಕ್ಕದಲ್ಲಿ ಅಡುಗೆಮನೆ, ಶೌಚಾಲಯ ನಿರ್ಮಿಸಲು ಹಾಸನ ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ‌ ಪಟೇಲ್ 5 ಲಕ್ಷವನ್ನು ನೀಡಿದ್ದಾರೆ. ಈ ಗ್ರಾಮಕ್ಕೆ ಅನುದಾನ ಬರಲು ಮಾಜಿ ಸಚಿವರಾದ ಬಿ.ಶಿವರಾಂ ಕೂಡ ಕಾರಣಕರ್ತರಾಗಿದ್ದಾರೆ ಎಂದರು. ಶಿಷ್ಟಾಚಾರದ ಅನ್ವಯವೇ ಲೋಕಸಭಾ ಸದಸ್ಯರೇ ಶಂಕುಸ್ಥಾಪನೆ ಮಾಡಬೇಕಿತ್ತು. ಆದರೆ ಅವರು ಇತರೆ ಕೆಲಸದ ಒತ್ತಡದಲ್ಲಿದ್ದ ಅನುದಾನ ಹಿಂತಿರುಗಬಾರದು, ಹೋಗಬಾರದು ಎಂಬ ಕಾರಣಕ್ಕೆ ಕಾರ್ಯಕರ್ತರೇ ಗ್ರಾಮಸ್ಥರ ಸಹಕಾರದಿಂದ ಗುದ್ದಲಿಪೂಜೆ ನಡೆಸಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ಶಿಷ್ಟಾಚಾರ ನಿಯಮದಂತೆ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗುತ್ತದೆ. ಹೆಬ್ಬಾಳು ದೊಡ್ಡ ಗ್ರಾಮವಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿಗೆ ಹೆಚ್ಚಿನ ಅನುದಾನವನ್ನು ನೀಡುವಲ್ಲಿ ನಾವುಗಳು ಬದ್ಧವಾಗಿದ್ದೇವೆ ಎಂದು ತಿಳಿಸಿದರು.ಕಾಂಗ್ರೆಸ್ ಮುಖಂಡ ಬಿ ಎಂ ಸಂತೋಷ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸುಭದ್ರವಾದಂತ ಆಡಳಿತವನ್ನು ನೀಡುತ್ತಿದ್ದು, ಈಗಾಗಲೇ ಗ್ಯಾರಂಟಿ ಯೋಜನೆಗಳು ಅತ್ಯಂತ ಸಾಫಲ್ಯತೆಯನ್ನು ಪಡೆದಿದೆ. ಹಂತಹಂತವಾಗಿ ರಸ್ತೆ ಚರಂಡಿ ಸಮುದಾಯ ಭವನ ಸೇರಿದಂತೆ ಇನ್ನಿತರ ಕೆಲಸಗಳಿಗೂ ಕೂಡ ಅನುದಾನವನ್ನು ಒದಗಿಸುತ್ತಾ ಬಂದಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಬ್ಬಾಳು ಉಮಾಶಂಕರ್, ಯಕಶೆಟ್ಟಿಹಳ್ಳಿ ನಾಗೇಶ್, ಪೈಂಟ್ ರವಿ, ಹೆಬ್ಬಾಳು ಗ್ರಾಮಸ್ಥರಾದ ಪ.ರಾಮೇಗೌಡ, ವಿಘ್ನೇಶಯ್ಯ, ಚಂದ್ರಶೇಖರಯ್ಯ, ನಂಜೇಗೌಡ, ಸುರೇಶ್, ಲಕ್ಷ್ಮಣ್, ಶಶಿ, ಚನ್ನಕೇಶವೇಗೌಡ, ರುದ್ರೇಶ್, ಜಗದೀಶ್ ಹಾಜರಿದ್ದರು..

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ