ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಯಿಂದ ರುದ್ರಾಭಿಷೇಕ ನಡೆಯಲಿದ್ದು, ಭಕ್ತಾದಿಗಳು ತಮ್ಮ ಸ್ವಹಸ್ತಗಳಿಂದ ಜಲಾಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಬೆಳಗ್ಗೆ 10 ಗಂಟೆಗೆ ರಕ್ತದಾನ ಶಿಬಿರವನ್ನು ಡಾ.ರತ್ನಾಕರ್ ಉದ್ಘಾಟಿಸಲಿದ್ದಾರೆ. 11 ಗಂಟೆಯಿಂದ 7 ರಿಂದ 10 ನೇ ತರಗತಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ಹವ್ಯಾಸಿ ಛಾಯಾಗ್ರಾಹಕರೂ ಆದ ಡಾ. ರತ್ನಾಕರ್ ಅವರು ಸೆರೆ ಹಿಡಿದ ಜೀವ ವೈವಿಧ್ಯಗಳ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಂಜೆ ೪ಕ್ಕೆ ಸಾರ್ವಜನಿಕರಿಗಾಗಿ ಪರಿಸರ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು, ವಿನಯ್ ಶಿವಮೊಗ್ಗ ಇವರು ನಡೆಸಿಕೊಡಲಿದ್ದಾರೆ. ಇದರಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ತಿಳಿಸಿದರು.ಸಂಜೆ 5.30ಕ್ಕೆ ಕಲಾರ್ಪಣಂ ಸ್ಕೂಲ್ ಆಫ್ ಆರ್ಟ್ಸ್ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಪರಿಸರ ಕುರಿತ ಕಿರುಚಿತ್ರ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಸಂಜೆ 7.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಿರುಚಿತ್ರ ನಿರ್ದೇಶಕ ಪ್ರಶಾಂತ್ ಸಾಗರ್ ಉಪಸ್ಥಿತರಿರಲಿದ್ದಾರೆ.
ಸಾರ್ವಜನಿಕರಿಗೆ ಶಿವಾಷ್ಟೋತ್ತರ ಪಠಿಸುತ್ತಾ ಪ್ರದಕ್ಷಿಣೆ ಮೂಲಕ ಶಿವನಿಗೆ ಅಭಿಷೇಕ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಡಾ. ಶಾಂತಲಾ ಕೌಶಿಕ್ ತಂಡದವರಿಂದ ಪ್ಲಾಸ್ಟಿಕ್ ಮಹಾಮಾರಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿ ಬೃಹತ್ ಪರದೆಯಲ್ಲಿ ಪ್ರಾತ್ಯಕ್ಷಿಕೆ ಹಾಗೂ ಪಶ್ಚಿಮ ಘಟ್ಟಗಳ ಮೇಲಾಗುತ್ತಿರುವ ಅನಾಹುತಗಳ ಬಗ್ಗೆ ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ನಾಗರಾಜ್ ಶೆಟ್ಟರ್, ಡಾ. ಶಾಂತಲಾ ಕೌಶಿಕ್, ಶಿವಮೊಗ್ಗ ವಿನಯ್, ಪರೋಪಕಾರಂ ಶ್ರೀಧರ್, ಸುಬ್ರಹ್ಮಣ್ಯ, ಮನೋಹರ್ ವಿಜಯಪುರ, ಪಿ. ಪ್ರದೀಪ್, ಸಂತೋಷ್ ಎಲಿಗಾರ್ ಉಪಸ್ಥಿತರಿದ್ದರು.