ನ.3 ರಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ''''ಫೋನ್‌ ಇನ್'''' ಕಾರ್ಯಕ್ರಮ

KannadaprabhaNewsNetwork |  
Published : Nov 01, 2024, 12:16 AM IST
 ಕು. ಲಲಿತಾ ಅನಪುರ, ನಗರಸಭೆ ಅಧ್ಯಕ್ಷರು, ಯಾದಗಿರಿ.  | Kannada Prabha

ಸಾರಾಂಶ

"Phone in " program by Municipal Council Chairperson Lalita Anapura on November 3

ಯಾದಗಿರಿ:ನಗರದಲ್ಲಿ ಮೂಲಭೂತ ಸೌಕರ್ಯಗಳ ಸ್ಥಿತಿಗತಿ ಹೇಗಿದೆ? ನಾಗರಿಕರ ಕುಂದುಕೊರತೆಗಳು, ದೂರುಗಳಿಗೆ ಸ್ಪಂದನೆ ಸಿಗುತ್ತಿದೆಯೇ? ನೀರು, ರಸ್ತೆ, ಚರಂಡಿ, ನೈರ್ಮಲ್ಯ, ಆರೋಗ್ಯ ಸುಧಾರಿಸಲು ನಗರಸಭೆ ಏನು ಮಾಡಬೇಕು? ಇನ್ನು, ನಾಗರಿಕರು ನಗರಸಭೆಗೆ ತೆರಿಗೆ ಪಾವತಿ ಮಾಡುತ್ತಿದ್ದಾರೆಯೇ? ತೆರಿಗೆ ಪಾವತಿ ಮಾಡದಿದ್ದರೆ ಅಭಿವೃದ್ಧಿಯ ನಿರೀಕ್ಷೆ ಸಾಧ್ಯವೇ? ನಗರಸಭೆಯ ನೂತನ ಅಧ್ಯಕ್ಷೆ ಕು. ಲಲಿತಾ ಅನಪುರ ಅವರು ನಗರ ವ್ಯಾಪ್ತಿಯ ನಾಗರಿಕರ ಇಂತಹ ಹತ್ತಾರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿದ್ದಾರೆ. ಭಾನುವಾರ ಬೆಳಿಗ್ಗೆ 10.30 ರಿಂದ 11.45 ರವರೆಗೆ ''''ಕನ್ನಡಪ್ರಭ'''' ದಿನಪತ್ರಿಕೆ ಆಯೋಜಿಸಿರುವ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ನಗರದ ಪ್ರಥಮ ಪ್ರಜೆ ನಾಗರಿಕರ ಅಹವಾಲುಗಳಿಗೆ ದನಿಯಾಗಲಿದ್ದಾರೆ. ನಗರಸಭೆ ಪೌರಾಯುಕ್ತ ರಜನೀಕಾಂತ ಶೃಂಗೇರಿ ಮತ್ತವರ ತಂಡ ಉಪಸ್ಥಿತರಿರುವರು. ಪ್ರಜ್ಞಾವಂತ ನಾಗರಿಕರು ನಗರದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಲೂಬಹುದು. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈ ಫೋನ್‌ ಇನ್‌ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಬಹುದು. (https://facebook.com/kannadaprabha.yadgir) ಸಂಪರ್ಕಿಸುವ ಮೊಬೈಲ್‌ ಸಂಖ್ಯೆ : 7204601197.

------

31ವೈಡಿಆರ್‌1 : ಕು. ಲಲಿತಾ ಅನಪುರ, ನಗರಸಭೆ ಅಧ್ಯಕ್ಷರು, ಯಾದಗಿರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ