ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ಪಟ್ಟಣದ ಬಿಜೆಪಿ ಕಾರ್ಯಕರ್ತರು ಕಲ್ಲಟ್ಟಿಯ ಪಕ್ಷದ ಕಚೇರಿಯಿಂದ ನಾಡಕಾರ್ಯಾಲಯದವರೆಗೂ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಿದರು ನಂತರ ಮಾತನಾಡಿದ ಅವರು, ಹಂತಕರ ಧರ್ಮದ ಆಧಾರದ ಮೇಲೆ ಅವರನ್ನು ತುಷ್ಟೀಕರಣ ಮಾಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು. ಕೂಡಲೇ ಹಿಂದೂಗಳ ಅದರಲ್ಲೂ ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ಮುಂದಾಗಬೇಕು. ಹಂತಕರಿಗೆ ಉಗ್ರ ಶಿಕ್ಷೆ ನೀಡಿದರೆ ಇಂತಹ ಕೃತ್ಯಗಳು ಮರುಕಳಿಸುವುದಿಲ್ಲ ಎಂದರು. ತೇರದಾಳ ತಹಶೀಲ್ದಾರ ವಿಜಯಕುಮಾರ ಕಡಕೋಳ ಮನವಿ ಸ್ವೀಕರಿಸಿದರು.
ತೇರದಾಳ ಬಿಜೆಪಿ ನಗರ ಘಟಕದ ಅಧ್ಯಕ್ಷ ಮಹಾವೀರ ಕೊಕಟನೂರ, ರಾಮಣ್ಣ ಹಿಡಕಲ್, ನಿಂಗಪ್ಪ ಮಾಲಗಾಂವಿ, ಸುರೇಶ ಅಕಿವಾಟ, ಸಿದ್ದು ಅಮ್ಮಣಗಿ, ರಾಜು ಬೆಳವಣಕಿ, ಅಲ್ಲಪ್ಪ ಬಾಬಗೊಂಡ, ಸದಾಶಿವ ಹೊಸಮನಿ, ಪ್ರಕಾಶ ಮಾನಶೆಟ್ಟಿ, ಹುಲೆಪ್ಪ ಹುಕ್ಕೇರಿ, ಲಕ್ಕಪ್ಪ ಪಾಟೀಲ, ಸಂತೋಷ ಅಕ್ಕೆನ್ನವರ, ಆನಂದ ಮಧುಮಲಿ, ಆನಂದ ಕಂಪು, ಕೇದಾರಿ ಪಾಟೀಲ್, ಮುರುಗೇಶ ಮಿರ್ಜಿ, ಅನೀಲ ಗುಬಚೆ, ಪ್ರವೀಣ ತುಬಚಿ, ಲಕ್ಷ್ಮಣ ನೇಮಗೌಡ, ವಿಜಯಪ್ರಕಾಶ ದಾನಿಗೊಂಡ, ವಿಜಯ ವಾಜಂತ್ರಿ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.