ನಮ್ಮ ಒಳಗಿನ ಮನಸ್ಸನ್ನು ಶುದ್ಧಿ ಮಾಡುವ ಕೆಲಸ ಆಗಬೇಕು: ಸಿದ್ಧಗಂಗಾಮಠದ ಸಿದ್ಧಲಿಂಗ ಶ್ರೀ

KannadaprabhaNewsNetwork |  
Published : Nov 26, 2024, 12:48 AM IST
ಪೋಟೋ 5 : ಸೋಂಪುರ ಹೋಬಳಿಯ ಹಳೇನಿಜಗಲ್ ಗ್ರಾಮದಲ್ಲಿರುವ ಅಷ್ಟಲಕ್ಷ್ಮೀ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಭಾಗವಹಿಸಿರುವುದು | Kannada Prabha

ಸಾರಾಂಶ

ಕಾರ್ತಿಕ ದೀಪೋತ್ಸವವೆಂದರೆ ಭಕ್ತಿಯೆಂಬ ಹಣತೆ ಹಚ್ಚುವ ಕಾರ್ಯಕ್ರಮ ಇದ್ದಾಗಿದ್ದು, ನಮ್ಮ ಪೂರ್ವಜರು ಹೊಲದಲ್ಲಿ ಉಳುಮೆ ಮಾಡುವ ವೇಳೆಯಲ್ಲಿ ಲಕ್ಷ್ಮೀ ವಿಗ್ರಹ ದೊರಕಿತು, ಇದೀಗ ಅದೇ ವಿಗ್ರಹವನ್ನು ಪ್ರತಿಷ್ಠಾಪಿಸಿ ಕಳೆದ ಕೆಲ ವರ್ಷಗಳ ಹಿಂದೆ ದೇವಾಲಯ ನಿರ್ಮಾಣ ಮಾಡಿದ್ದೆವು, ಪ್ರತಿ ವರ್ಷವು ಕಾರ್ತಿಕ ಮಾಸದಲ್ಲಿ ದೀಪೋತ್ಸವ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುತ್ತೇವೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಕಾರ್ತಿಕ ಮಾಸದಲ್ಲಿ ದೀಪವನ್ನು ಹಚ್ಚುವ ಮನುಷ್ಯ ತನ್ನಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿಕೊಳ್ಳುತ್ತಾನೆ, ನಮ್ಮ ಒಳಗಿನ ಮನಸ್ಸನ್ನು ಶುದ್ಧಿ ಮಾಡುವ ಕೆಲಸ ಆಗಬೇಕಿದೆ, ಯಾರ ದುಡಿಮೆಯಲ್ಲಿ ಪರಿಶ್ರಮ, ಕಾಯಕ, ನಿಷ್ಠೆ ಮತ್ತು ಹೃದಯ ಶ್ರೀಮಂತಿಕೆ ಇರುತ್ತದೋ ಅವರಿಗೆ ಮಾತ್ರ ದೇವರು ಒಳಿತು ಮಾಡುತ್ತಾನೆಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸೋಂಪುರ ಹೋಬಳಿಯ ಹಳೆ ನಿಜಗಲ್ ಗ್ರಾಮದಲ್ಲಿರುವ ಅಷ್ಟಲಕ್ಷ್ಮೀ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಭಕ್ತಿಯಿಂದ ದೀಪ ಹಚ್ಚುವುದರ ಜೊತೆಗೆ ಗ್ರಾಮದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಿನ ಮಂತ್ರ ಅನುಸರಿಸಬೇಕು, ಶಾಲೆ ಮತ್ತು ದೇವಾಲಯ ಗ್ರಾಮದ ಹಿರಿಮೆ ಎಂದರು.

ವಾಸ ಸೈಂಟಿಫಿಕ್ ಕಂಪನಿ ಮುಖ್ಯಸ್ಥ ಬಿ.ಪಿ.ಪ್ರಕಾಶ್ ಮಾತನಾಡಿ, ಕಾರ್ತಿಕ ದೀಪೋತ್ಸವವೆಂದರೆ ಭಕ್ತಿಯೆಂಬ ಹಣತೆ ಹಚ್ಚುವ ಕಾರ್ಯಕ್ರಮ ಇದ್ದಾಗಿದ್ದು, ನಮ್ಮ ಪೂರ್ವಜರು ಹೊಲದಲ್ಲಿ ಉಳುಮೆ ಮಾಡುವ ವೇಳೆಯಲ್ಲಿ ಲಕ್ಷ್ಮೀ ವಿಗ್ರಹ ದೊರಕಿತು, ಇದೀಗ ಅದೇ ವಿಗ್ರಹವನ್ನು ಪ್ರತಿಷ್ಠಾಪಿಸಿ ಕಳೆದ ಕೆಲ ವರ್ಷಗಳ ಹಿಂದೆ ದೇವಾಲಯ ನಿರ್ಮಾಣ ಮಾಡಿದ್ದೆವು, ಪ್ರತಿ ವರ್ಷವು ಕಾರ್ತಿಕ ಮಾಸದಲ್ಲಿ ದೀಪೋತ್ಸವ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುತ್ತೇವೆ ಎಂದರು.

ವಾಸ ಸೈಟಫಿಂಕ್ ಸಿಇಒ ಬಿ.ಪಿ ರೂಪೇಶ್, ಸೈಬರ್ ಕ್ರೈಂ ವಿಭಾಗದ ಐಜಿಪಿ ಪ್ರಣವ್ ಮೊಹಂತಿ, ಶಾಸಕ ಜ್ಯೋತಿಗಣೇಶ್, ಹೂಡಿಕೆ ತಜ್ಞ ರುದ್ರಮೂರ್ತಿ, ಡಿವೈಎಸ್ಪಿ ಜಗದೀಶ್, ಹೇಮಲತಾ ಪ್ರಕಾಶ್, ಅಕ್ಷತಾ ರೂಪೇಶ್, ಆಕಾಶವಾಣಿ ಕಲಾವಿದೆ ಅರುಣ, ಶಿವಲಿಂಗಮ್ಮ, ಅಂದನೂರು ಬಾಬು, ಅಮರಜ್ಯೋತಿ, ಪ್ರಭು, ಹರಳೂರು ರುದ್ರೇಶ್, ಅರ್ಚಕ ನಾರಾಯಣಚಾರ್, ಗ್ರಾಮದವರಾದ ಗ್ರಾಪಂ ಮಾಜಿ ಅಧ್ಯಕ್ಷೆ ಪುಷ್ಪಕಲಾ ಶ್ರೀನಿವಾಸ್, ಕುಮಾರ್, ಪ್ರಭು, ಸೀನ, ರವಿ, ಇನ್ನಿತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ