ಹಾಸನದಲ್ಲಿ ಶ್ರಾವಣ ಬಂತು ಸಂಗೀತ ಸಂಜೆ ಕಾರ್ಯಕ್ರಮ

KannadaprabhaNewsNetwork |  
Published : Aug 12, 2026, 02:15 AM IST
10ಎಚ್ಎಸ್ಎನ್‌14 :  | Kannada Prabha

ಸಾರಾಂಶ

ಕಾರ್ಯಕ್ರಮದಲ್ಲಿ ರವಿ ಮೂರೂರು, ಸವಿತಾ ಗಣೇಶ್, ಭಾಗ್ಯಶ್ರೀ ಗೌಡ, ಕಡಬಗೆರೆ ಮುನಿರಾಜ್, ಮೆಲ್ವಿನ್ ಲೀಮಾ, ಆತ್ಮಾರಾಮ್ ನಾಯಕ್, ಪ್ರದೀಪ್ ಕಿಗ್ಗಲ್ ಹಾಗೂ ವಿನಯ್ ರಂಗಧೋಳ್ ಸೇರಿದಂತೆ ಹಲವು ಖ್ಯಾತ ಗಾಯಕರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದು ಹೇಳಿದರು. ಶ್ರಾವಣ ಮಾಸದ ಸಂಭ್ರಮಕ್ಕೆ ಸಂಗೀತದ ಸೊಬಗನ್ನು ಬೆರೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ವಿವಿಧ ಪ್ರಕಾರದ ಜನಪ್ರಿಯ ಗೀತೆಗಳು ಹಾಗೂ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಂಗೀತಪ್ರಿಯರಿಗೆ ರಸದೌತಣ ನೀಡುವ ಉದ್ದೇಶದಿಂದ ವಿಶ್ವಪಥ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಕ್ಷರ ಬುಕ್ ಹೌಸ್ ಸಹಯೋಗದಲ್ಲಿ ಆ.೧೩ರಂದು ‘ಶ್ರಾವಣ ಬಂತು’ ಹೆಸರಿನ ವಿಶೇಷ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ನಿರ್ದೇಶಕ ಹಾಗೂ ನಿರೂಪಕ ಯದೀಶ್, ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್‌ ಮತ್ತು ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾತ ಮಾತನಾಡಿದ ಅವರು, ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಆ.೧೩ರಂದು ಸಂಜೆ ೭ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಸುಪ್ರಸಿದ್ಧ ಗಾಯಕರ ತಂಡ ಸಂಗೀತ ಪ್ರಿಯರನ್ನು ರಂಜಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ರವಿ ಮೂರೂರು, ಸವಿತಾ ಗಣೇಶ್, ಭಾಗ್ಯಶ್ರೀ ಗೌಡ, ಕಡಬಗೆರೆ ಮುನಿರಾಜ್, ಮೆಲ್ವಿನ್ ಲೀಮಾ, ಆತ್ಮಾರಾಮ್ ನಾಯಕ್, ಪ್ರದೀಪ್ ಕಿಗ್ಗಲ್ ಹಾಗೂ ವಿನಯ್ ರಂಗಧೋಳ್ ಸೇರಿದಂತೆ ಹಲವು ಖ್ಯಾತ ಗಾಯಕರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದು ಹೇಳಿದರು. ಶ್ರಾವಣ ಮಾಸದ ಸಂಭ್ರಮಕ್ಕೆ ಸಂಗೀತದ ಸೊಬಗನ್ನು ಬೆರೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ವಿವಿಧ ಪ್ರಕಾರದ ಜನಪ್ರಿಯ ಗೀತೆಗಳು ಹಾಗೂ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.

ಕಾರ್ಯಕ್ರಮಕ್ಕೆ ಎಂಆರ್‌ಟಿಪಿ ಚಿಟ್ ಫಂಡ್ ೧೭ ಪ್ರೈವೇಟ್ ಲಿಮಿಟೆಡ್, ಮಲ್ನಾಡ್ ನರ್ಸಿಂಗ್ ಹೋಮ್, ಶ್ರೀರಂಗ ವಿದ್ಯಾಸಂಸ್ಥೆ, ಮಿತ್ರ ಗ್ರಾನೈಟ್, ಸುದ್ದಿ ಸಮಯ ದಿನಪತ್ರಿಕೆ, ಅವನಿ ಅರ್ಗಾನಿಕ್, ಹ್ಯಾಲೋ ಹಾಸನ ಸಂಜೆ ಪತ್ರಿಕೆ ಹಾಗೂ ಹಾಸನ ಜಿಲ್ಲಾ ಒಕ್ಕಲಿಗರ ವೇದಿಕೆ ಸೇರಿದಂತೆ ವಿವಿಧ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದರು. ರೋಟರಿ ಪಾಲುದಾರರಾಗಿ ಹಾಸನ ರಾಯಲ್ಸ್, ರೋಟರಿ ಕ್ಲಬ್ ಆಫ್ ಹಾಸನ ಟೈಗರ್ಸ್ ಹಾಗೂ ಇತರ ಸಂಸ್ಥೆಗಳು ಕೈಜೋಡಿಸಿವೆ. ಪಬ್ಲಿಕ್ ಇ-ಪ್ರೆಸ್, ಹಾಸನ ಸುದ್ದಿ ಸೇರಿದಂತೆ ವಿವಿಧ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಕಾರ್ಯಕ್ರಮಕ್ಕೆ ಮಾಧ್ಯಮ ಸಹಕಾರ ನೀಡುತ್ತಿವೆ. ಕಾರ್ಯಕ್ರಮವು ಆ.೧೩ರಂದು ಸಂಜೆ ೭ ಗಂಟೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು, ಸಂಗೀತ ಪ್ರಿಯರು ಸಮಯಕ್ಕೆ ಮುನ್ನವೇ ಆಗಮಿಸುವಂತೆ ಆಯೋಜಕರು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಸನ ಜಿಲ್ಲಾ ಒಕ್ಕಲಿಗರ ವೇದಿಕೆಯ ರಾಜೇಶ್ ಗೌಡ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೈಕ್ಷಣಿಕ ಶ್ರೇಷ್ಠತೆಗೆ ಹೊಸ ಅಧ್ಯಾಯ ಬರೆದ ಎಕ್ಸಲೆಂಟ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತಸಂಘ ಆಗ್ರಹ