ಹಳೇಬೀಡಿನಲ್ಲಿ ಶ್ರೀ ಹೊಯ್ಸಳೇಶ್ವರ ದಿವ್ಯ ರಥೋತ್ಸವ

KannadaprabhaNewsNetwork |  
Published : Nov 20, 2024, 12:31 AM IST
19ಎಚ್ಎಸ್ಎನ್9 : ಹಳೇಬೀಡಿನ ಶ್ರೀ ಹೊಯ್ಸಳೇಶ್ವರ ದೇವಾಲಯದಲ್ಲಿ ೨೫ನೇ ವರ್ಷದ ದಿವ್ಯ ರಥೋತ್ಸವದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪುಷ್ಪಗಿರಿ ಶ್ರೀ ಸೋಮಶೇಖರ ಶಿವಾಚಾರ್ಯರು ವಹಿಸಿದ್ದರು. . | Kannada Prabha

ಸಾರಾಂಶ

ಹಳೇಬೀಡಿನ ಶ್ರೀ ಹೊಯ್ಸಳೇಶ್ವರ ದೇವಾಲಯದಲ್ಲಿ ೨೫ನೇ ವರ್ಷದ ದಿವ್ಯ ರಥೋತ್ಸವ ನಡೆಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸ್ವಾಮೀಜಿಗಳು ವಹಿಸಿದ್ದರು. ಈ ಪ್ರವಾಸಿ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ತಕ್ಷಣವೇ ಇದರ ಅಭಿವೃದ್ಧಿ ಹೆಚ್ಚಿನ ಸಹಕಾರ ನೀಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಹೊಯ್ಸಳರ ರಾಜಧಾನಿಯಾಗಿ ಮೆರೆದ ಹಳೇಬೀಡಿನ ಶ್ರೀ ಹೊಯ್ಸಳೇಶ್ವರ ದೇವಾಲಯದಲ್ಲಿ ೨೫ನೇ ವರ್ಷದ ದಿವ್ಯ ರಥೋತ್ಸವ ನಡೆಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸ್ವಾಮೀಜಿಗಳು ವಹಿಸಿದ್ದರು. ೧೨ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಸಾಂಸ್ಕೃತಿಕ, ಸಾಹಿತ್ಯಕ್ಕೆ ಹೆಸರುವಾಸಿಯಾದ ಈ ರಾಜಧಾನಿ ದ್ವಾರಸಮುದ್ರ ಇಂದು ಹಳೇಬೀಡು ಆಗಿದ್ದು, ಈ ಪ್ರವಾಸಿ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ತಕ್ಷಣವೇ ಇದರ ಅಭಿವೃದ್ಧಿ ಹೆಚ್ಚಿನ ಸಹಕಾರ ನೀಡಬೇಕು. ಅದರ ಜೊತೆಗೆ ಹೊಯ್ಸಳ ರಾಜಧಾನಿಯಾದಂತ ಈ ಸ್ಥಳದಲ್ಲಿ ಹೊಯ್ಸಳ ಮಹೋತ್ಸವ ಕಾರ್ಯಕ್ರಮ ನಡೆಯಬೇಕೆಂದು ತಿಳಿಸಿದರು.

ರಥದ ಚಾಲನೆಯನ್ನು ನಿರ್ವಹಿಸಿದ ಬೇಲೂರು ಕ್ಷೇತ್ರ ಶಾಸಕ ಎಚ್.ಕೆ. ಸುರೇಶ್ ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಹಳೇಬೀಡು, ಬೇಲೂರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದು ಪ್ರವಾಸಿಗ ತಾಣವಾಗಿದ್ದು ಅದರ ಜೊತೆಗೆ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯುವುದು ನಮಗೆ ಸಂತೋಷ ವಿಚಾರ. ಈ ಎರಡು ಸ್ಥಳಕ್ಕೆ ಹೆಚ್ಚಿನ ರೀತಿಯಲ್ಲಿ ಸರ್ಕಾರ ಗಮನ ನೀಡಬೇಕು. ಮುಂದಿನ ದಿನಗಳಲ್ಲಿ ಹಳೇಬೀಡಿನಲ್ಲಿ ಶ್ರೀ ಹೊಯ್ಸಳ ಮಹೋತ್ಸವ ನಡೆಯಲೇಬೇಕು. ಅದರ ಪರವಾಗಿ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದು ತಿಳಿಸಿದರು.

ಶ್ರೀ ಹೊಯ್ಸಳೇಶ್ವರ ಪ್ರವಾಸೋದ್ಯಮ ಮತ್ತು ಗ್ರಾಮೀಣ ಟ್ರಸ್ಟ್ ಅಧ್ಯಕ್ಷರಾದ ಕೆ. ಎಸ್. ಲಿಂಗೇಶ್ ಮಾತನಾಡುತ್ತಾ, ೨೦೦೦ನೇ ಸಾಲಿನಲ್ಲಿ ಈ ದೇವಾಲಯವನ್ನು ಪುರಾತತ್ವ ಇಲಾಖೆಯವರು ಹಳೇಯ ಸ್ಮಾರಕ ಪಟ್ಟಿಗೆ ಸೇರ್ಪಡೆಯಾದ ಸಂದರ್ಭದಲ್ಲಿ ಅಂದಿನ ಮಾಜಿ ಮಂಡಲ ಪ್ರಧಾನರಾದ ಶಿವಲಿಂಗಪ್ಪ, ಪರ್ತಕರ್ತರಾದ ಅನಂತರಾಮು, ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್, ರೈತ ಸಂಘ, ಗ್ರಾಮ ಪಂ.ಸಧಸ್ಯರ,ಸ್ಥಳಿಯ ನಾಗರಿಕರ ಹೋರಾಟದಿಂದ ನಡೆದು ಬಂದ ಈ ರಥೋತ್ಸವ ಇಂದಿಗೆ ೨೫ನೇ ವರ್ಷವಾಗಿದೆ. ಇದಕ್ಕೆ ಸಹಕಾರ ನೀಡಿದ ರೈತಸಂಘ, ಗ್ರಾಮ ಪಂಚಾಯತಿ, ಸ್ಥಳೀಯ ಜನತೆಗೆ ಅಭಿನಂದನೆ ಸಲ್ಲಿಸಿದರು.

ರಥಕ್ಕೆ ಚಾಲನೆ ನೀಡಿದ ಬೇಲೂರು ತಹಸೀಲ್ದಾರ್‌ ಎಂ. ಮಮತಾ ಮಾತನಾಡುತ್ತಾ, ಈ ರಥೋತ್ಸವಕ್ಕೆ ಹೆಚ್ಚು ರೀತಿಯಲ್ಲಿ ಜನತೆಯ ಸಹಕಾರ ನೀಡಬೇಕು. ಅದೇ ರೀತಿ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಶ್ರೀ ಹೊಯ್ಸಳೇಶ್ವರ ಗ್ರಾಮೀಣ ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಸಿ. ಕುಮಾರ್‌ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ವತಿಯಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಬೇಕು. ಇದು ಹೊಯ್ಸಳೇಶ್ವರ ಇತಿಹಾಸದ ರಥೋತ್ಸವ ಆಗಬೇಕು ಎಂದು ತಿಳಿಸಿದರು. ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಎರಡು ದಿನಗಳ ನಡೆಯುತ್ತಾ ಬಂದಿದ್ದು, ಅರ್ಚಕರಾದ ಎಚ್.ಎಸ್ ಸುಬ್ರಹ್ಮಣ್ಯ ಹಾಗೂ ಉದಯ್ ಕುಮಾರ್‌ ಹಾಗೂ ವಿಪ್ರ ಸಮಾಜದವರು ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿತ್ಯಾನಂದ, ಉಪಾಧ್ಯಕ್ಷೆ ರಶ್ಮಿ ವಿನಯ್ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ವಿರೂಪಾಕ್ಷ, ಕಂದಾಯ ಇಲಾಖೆಯ ಆರ್‌. ಐ. ಮಹೇಶ್, ಎಲ್ಲಾ ರೈತ ಬಾಂಧವರು ರೈತ ಮುಖಂಡರು ಹಾಗೂ ಹಳೇಬೀಡು ನಾಗರಿಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!