ಸಿದ್ದು ಸೇರಿ 139 ಶಾಸಕರೂ ನನ್ನ ಬಲ. ಸಿದ್ದು 100% ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ, ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಕೆಲಸ ಮಾಡುತ್ತೇವೆ.
ನಮಗೆ ವಿಪಕ್ಷ ಹಾಲಾಹಲ ಅಂತಿವೆ
ನೋಡಪ್ಪ ನೀವು ಹಾಲು ಇದ್ದಂತೆ, ನಾನು ಸಕ್ಕರೆ ಇದ್ದಂತೆ. ಆದರೆ ಸಿಎಂಗೂ ಡಿಕೆಶಿಗೂ ಜಗಳ ಇದೆ. ನೀವು ಹಾಲು ಅಲ್ಲ ಹಾಲಾಹಲ ಅಂತ ಅವರು (ವಿಪಕ್ಷ) ಹೇಳಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಹಾಲಾಹಲ ಇದ್ದಂತೆ ಎನ್ನುತ್ತಿದ್ದಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಿದ್ದು ನನ್ನ ಜತೆ ಸದಾ ಇರ್ತಾರೆ
ಸಿದ್ದು ಸೇರಿ 139 ಶಾಸಕರೂ ನನ್ನ ಬಲ. ಸಿದ್ದು 100% ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ, ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಅವರ ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅವರು ಕೂಡ ಕಷ್ಟ ಕಾಲದಲ್ಲಿ ನನ್ನ ಜತೆ ನಿಲ್ಲಲಿದ್ದಾರೆ.
- ಡಿ,ಕೆ. ಶಿವಕುಮಾರ್, ಡಿಸಿಎಂ
ಸಂಖ್ಯಾ ಬಲವಲ್ಲ ಪಕ್ಷ ತೀರ್ಮಾನಿಸುತ್ತೆ
‘ನಮ್ಮ ಪಕ್ಷದಲ್ಲಿ ಹಾಗೂ ನಿಮ್ಮ (ಬಿಜೆಪಿ) ಪಕ್ಷದಲ್ಲಿ ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಸರ್ಕಾರದಲ್ಲಿ ಎಷ್ಟೋ ಮುಖ್ಯಮಂತ್ರಿಗಳು ಬದಲಾದರು, ಸಚಿವ ಸಂಪುಟಗಳೇ ಬದಲಾದವು. ಪಾಲಿಟಿಕ್ಸ್ ಈಸ್ ಆರ್ಟ್ ಆಫ್ ಪಾಸಿಬಿಲಿಟೀಸ್. ನಾನು ನಂಬಿರುವುದು ‘ಒನ್ ಮ್ಯಾನ್ ವಿತ್ ಕರೇಜ್ ಮೇಕ್ಸ್ ಮೆಜಾರಿಟಿ. ದೃಢವಾದ ನಿಲುವು,
- ಡಿ.ಕೆ. ಶಿವಕುಮಾರ್, ಡಿಸಿಎಂ
ನನಗೆ ನಂಬಿಕೆ ಇದೆ, 2028ಕ್ಕೆ ನೋಡೋಣ
ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ. ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. ಧೈರ್ಯ ಹೊಂದಿರುವ ವ್ಯಕ್ತಿ ಒಬ್ಬನೇ ಬಹುಮತ ಸೃಷ್ಟಿಸಬಲ್ಲ ಎಂಬುದನ್ನು ನಾನು ನಂಬಿದ್ದೇನೆ. ದೃಢವಾದ ನಿಲುವು, ಸಂಕಲ್ಪ ಹಾಗೂ ಧ್ಯೇಯ ಹೊಂದಿದ್ದರೆ ಆತನ ಜತೆ 140 ಜನರೂ ಇರುತ್ತಾರೆ, ಅದಕ್ಕಿಂತಲೂ ಜಾಸ್ತಿಯೂ ಬರುತ್ತಾರೆ. 2028ರಲ್ಲಿ ನೋಡೋಣ.
- ಡಿ.ಕೆ. ಶಿವಕುಮಾರ್, ಡಿಸಿಎಂ

