ಕನ್ನಡಪ್ರಭ ವಾರ್ತೆ ದಾವಣಗೆರೆ
ಇಲ್ಲಿನ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸೆಲ್ಫ್ ಅಸೆಸ್‌ಮೆಂಟ್ ಟೆಸ್ಟ್‌ಗೆ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದರು.
ಈ ಸಂಸ್ಥೆ 1970ರಲ್ಲಿ ಸ್ಥಾಪನೆಯಾಗಿ, ಈವರೆಗೆ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ ದಾಖಲೆ ಈ ಸಂಸ್ಥೆಯದು. ತುಮಕೂರಿನ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರ ಆರ್ಶೀವಾದದಿಂದ ಅರಳಿದ ಈ ಸಂಸ್ಥೆಯ ಸ್ಥಾಪಕ ಎಂ.ಎಸ್. ಶಿವಣ್ಣನವರ ಸದಾಶಯಗಳನ್ನು, ಕನಸುಗಳನ್ನು ನನಸಾಗಿಸುವಲ್ಲಿ ಸಫಲತೆಯನ್ನು ಕಂಡಿರುವುದು ಸತ್ಯವಾಗಿದೆ ಎಂದರು.ಈ ಶಿಕ್ಷಣ ಸಂಸ್ಥೆ ಇಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಸೆಲ್ಫ್ ಅಸೆಸ್‌ಮೆಂಟ್ ಟೆಸ್ಟ್ ಆಯೋಜಿಸಿ ನಗರದ ಹಾಗು ಸುತ್ತಲಿನ ಗ್ರಾಮೀಣ ಭಾಗಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಈ ಟೆಸ್ಟ್ ನಲ್ಲಿ ಭಾಗವಹಿಸುವಂತೆ ಮಾಡಿ, ಅವರಲ್ಲಿ ಹೊಸ ಉತ್ಸಾಹವನ್ನು ಹುಟ್ಟು ಹಾಕಿರುವುದು ನಿಜ. ಪಿಯುಸಿ ಅತ್ಯಂತ ಮುಖ್ಯ ಹಾಗು ತಿರುವಿನ ಶೈಕ್ಷಣಿಕ ಘಟ್ಟವೆಂದು ವಿವರಿಸಿ, ಹೆಚ್ಚಿನ ಅಂಕಗಳಿಸುವತ್ತ ವಿದ್ಯಾರ್ಥಿಗಳ ಮನವೊಲಿಸಿದರು.
50 ಅಂಕಗಳ 1 ಗಂಟೆ ಅವಧಿಯ ಈ ಟೆಸ್ಟ್‌ನ ಫಲಿತಾಂಶವನ್ನು ಒಂದು ವಾರದ ಒಳಗೆ ವಿದ್ಯಾರ್ಥಿಗಳಿಗೆ ಅವರ ಮೊಬೈಲ್ ಸಂಖ್ಯೆಗೆ ನೇರವಾಗಿ ಕಳಿಸಲಾಗುವುದು ಎಂದು ತಿಳಿಸಿದರು.
ಎಲ್ಲಾ ದೃಷ್ಟಿಯಿಂದ ಇದೊಂದು ವಿನೂತನವಾದ ಕಾರ್ಯಕ್ರಮವಲ್ಲದೆ, ಮಾದರಿಯಾದ ಕಾರ್ಯಕ್ರಮವೂ ಹೌದು. ಮಾದರಿ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿದ್ದು ಇನ್ನೊಂದು ವಿಶೇಷ. ಈ ಪ್ರಶ್ನೆಪತ್ರಿಕೆಯ ಪ್ರಯೋಜನವನ್ನು ನೀವೂ ಪಡೆಯಿರಿ. ನಿಮ್ಮ ಸ್ನೇಹಿತರನ್ನು ಪಡೆಯಲು ಪ್ರೋತ್ಸಾಹಿಸಿ ಎಂದು ಹಾರೈಸಿದ್ದು ಮನನೀಯ ಎಂದು ಪೋಷಕರು ತಮ್ಮ ಅನಿಸಿಕೆ ತಿಳಿಸಿದರು.