ಕೃಷಿ ಪಂಪ್‌ಸೆಟ್‌ಗೆ ಸೌಲಭ್ಯ ಕಲ್ಪಿಸದೆ ಮಲತಾಯಿ ಧೋರಣೆ

KannadaprabhaNewsNetwork | Published : Aug 7, 2024 1:09 AM

ಸಾರಾಂಶ

ರೈತರು ಸ್ವಯಂ ನಿರ್ವಹಣಾ ಕಾಮಗಾರಿ ಯೋಜನೆಯ ಅಡಿಯಲ್ಲಿ ನಿರ್ವಹಿಸುವ ಕಾಮಗಾರಿಗಳಿಗೆ ಜೋಡಿ ಕಂಬಗಳು , ಜಿ.ಪಿ.ಎಸ್ ಆಳವಡಿಸಬೇಕು ಮೀಟರ್ ಬಾಕ್ಸ್ ಅಳವಡಿಸಬೇಕು ಬ್ಲೂ ಪ್ರಿಂಟ್ ಅನುಮೋದನೆ ಈ ಎಲ್ಲಾ ಕಾನೂನುಗಳನ್ನು ರೈತರಿಗೆ ಅನಾವಶ್ಯಕವಾಗಿ ಕಡ್ಡಾಯಗೊಳಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿಯಿಂದ ಜಿಲ್ಲಾಧ್ಯಕ್ಷ ಟಿ. ಎಸ್. ಬಾಬು ನೇತೃತ್ವದಲ್ಲಿ ಬೆಸ್ಕಾಂ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಟಿ. ಎಸ್. ಬಾಬು ಮಾತನಾಡಿ, ರೈತರ ನೀರಾವರಿ ಪಂಪ್ ಸೆಟ್ಟುಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮಲತಾಯಿ ಧೋರಣೆ ಮಾಡಲಾಗಿದೆ. ಉದಾಹರಣೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ರೈತರ ನೀರಾವರಿ ಪಂಪ್ ಸೆಟ್ಟುಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಟೆಂಡರ್ ಕಾಮಗಾರಿಗಳಲ್ಲಿ ಜಿ.ಓ.ಎಸ್, ಮೀಟರ್ ಬಾಕ್ಸ್ ಅಳವಡಿಸುತ್ತಿಲ್ಲ ಮತ್ತು ಎಲೆಕ್ಟಿಕಲ್ ಇನ್ಸ್‌ ಪೆಕ್ಟರೆಟ್ ಬ್ಲೂ ಪ್ರಿಂಟ್ ಯಾವುದೇ ಅಪ್ರೋವೆಲ್ ಇಲ್ಲ ಎಂದರು.

ಮಲತಾಯಿ ಧೋರಣೆ ಕೈಬಿಡಲಿ

. ಆದರೆ ರೈತರು ಸ್ವಯಂ ನಿರ್ವಹಣಾ ಕಾಮಗಾರಿ ಯೋಜನೆಯ ಅಡಿಯಲ್ಲಿ ನಿರ್ವಹಿಸುವ ಕಾಮಗಾರಿಗಳಿಗೆ ಜೋಡಿ ಕಂಬಗಳು , ಜಿ.ಪಿ.ಎಸ್ ಆಳವಡಿಸಬೇಕು ಮೀಟರ್ ಬಾಕ್ಸ್ ಅಳವಡಿಸಬೇಕು ಬ್ಲೂ ಪ್ರಿಂಟ್ ಅನುಮೋದನೆ ಈ ಎಲ್ಲಾ ಕಾನೂನುಗಳನ್ನು ರೈತರಿಗೆ ಅನಾವಶ್ಯಕವಾಗಿ ಕಡ್ಡಾಯಗೊಳಿಸಿದೆ. ತಕ್ಷಣವೇ ಈ ಮಲತಾಯಿಧೋರಣೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರಿಗೆ ತತ್ಕಾಲ್ ಯೋಜನೆ ಜಾರಿಗೊಳಿಸಿದ್ದರು. ಇದನ್ನು ಬೆಸ್ಕಾಂ ಹಿಂಪಡೆದಿದ್ದಾರೆ. ಕೂಡಲೆ ಇದನ್ನು ಜಾರಿಗೆ ತರಬೇಕು. ಬೆಸ್ಕಾಂ ರೈತರ ನೀರಾವರಿ ಪಂಪ್‌ ಸೆಟ್ಟುಗಳಿಗೆ ಅಕ್ರಮ-ಸಕ್ರಮಯೋಜನೆ ಯಾವುದೇ ದಿನಾಂಕ ನಿಗದಿಪಡಿಸದೆ ಏಕಾಏಕಿ ರೈತರ ನೀರಾವರಿ ಪಂಪ್ ಸೆಟ್ ಸಂಪರ್ಕಗಳನ್ನು ಹಿಂಪಡೆದಿದ್ದಾರೆ. ಇದರಿಂದ ಕಂಪನಿಗೆ ಕೋಟ್ಯತರ ರುಪಾಯಿಗಳು ನಷ್ಟ ಉಂಟಾಗಿರುತ್ತದೆ. ಆದುದರಿಂದ ಸರ್ಕಾರ ಮತ್ತು ವಿದ್ಯುತ್ ಸರಬರಾಜು ಕಂಪನಿಗಳೂ ಆಕ್ರಮವಾಗಿ ಇರುವಂತಹ ರೈತರ ನೀರಾವರಿ ಪಂಪ್ ಸೆಟ್ಟುಗಳನ್ನು ಸಕ್ರಮಗೊಳಿಸಲು ಕಾಲಾವಕಾಶ ಕೊಡಬೇಕು ಎಂದರು.

ಬೆಸ್ಕಾಂಗೆ ಮನವಿ ಸಲ್ಲಿಕೆ

ಪ್ರತಿಭಟನೆಯ ನಂತರ ಪ್ರತಿಭಟನಾಕಾರರು ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಆನಂದ್ ರಿಗೆ ಬೇಡಿಕೆ ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿದ್ಯುತ್ ಗುತ್ತಿಗೆದಾರ ಸಂಘದ ಜಂಟಿ ಕಾರ್ಯದರ್ಶಿ ಪ್ರಸಾದ್ ಕೋಶ್ಯಾಧ್ಯಕ್ಷ ಸಿ.ವೆಂಕಟೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ರವಿ, ಶಂಕರಪ್ಪ, ಬಾಗೇಪಲ್ಲಿ ನಾರಾಯಣಸ್ವಾಮಿ, ಮಾಜಿ ತಾಲೂಕು ಅಧ್ಯಕ್ಷ ವಿ. ಮಧುಚಂದ್ರ, ಗುಡಿಬಂಡೆ ಶ್ರೀನಾಥ್, ಮೂರ್ತಿ, ಚಿಂತಾಮಣಿ ನಾರಾಯಣಸ್ವಾಮಿ, ಮಿಟ್ಟಹಳ್ಳಿ ಮಂಜು, ಆಂಜನೇಯ ಗೌಡ, ಗೌರಿಬಿದನೂರು ಹೊನ್ನೇಗೌಡ, ನಾಗರಾಜ್, ಶಿಡ್ಲಘಟ್ಟ ಬಚ್ಚೇಗೌಡ ಮತ್ತು ಜಿಲ್ಲೆಯ ಎಲ್ಲಾ ಗುತ್ತಿಗೆದಾರ ಸದಸ್ಯರು ಇದ್ದರು.

Share this article