ಕಡಿಮೆ ಅಂಕ ನೀಡಿದ ಶಿಕ್ಷಕಿ ನೀರಿನಬಾಟಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು!

KannadaprabhaNewsNetwork |  
Published : Oct 08, 2023, 12:00 AM ISTUpdated : Oct 08, 2023, 12:01 AM IST

ಸಾರಾಂಶ

ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ ಕಾರಣಕ್ಕೆ 6ನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಗಣಿತ ಶಿಕ್ಷಕಿಯೊಬ್ಬರ ನೀರಿನ ಬಾಟಲಿಗೆ ಅವಧಿ ಮೀರಿದ ಮಾತ್ರೆ ಹಾಕಿರುವ ಆತಂಕಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಶಾಲೆಯಲ್ಲಿ ನಡೆದಿದೆ. ಈ ನೀರು ಕುಡಿದ ಪರಿಣಾಮ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆ.

- ಉಳ್ಳಾಲದಲ್ಲಿ ನಡೆದ ಘಟನೆ, ಇಬ್ಬರು ಶಿಕ್ಷಕರಿಯರು ಅಸ್ವಸ್ಥ ಕನ್ನಡಪ್ರಭ ವಾರ್ತೆ ಉಳ್ಳಾಲ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ ಕಾರಣಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಗಣಿತ ಶಿಕ್ಷಕಿಯೊಬ್ಬರ ನೀರಿನ ಬಾಟಲಿಗೆ ಅವಧಿ ಮೀರಿದ ಮಾತ್ರೆ ಹಾಕಿರುವ ಆತಂಕಕಾರಿ ಘಟನೆ ಶುಕ್ರವಾರ ಉಳ್ಳಾಲದ ಶಾಲೆಯಲ್ಲಿ ನಡೆದಿದೆ. ಈ ನೀರು ಕುಡಿದ ಪರಿಣಾಮ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆ. ಶಾಲೆಯಲ್ಲಿ ನಡೆದ ಘಟಕ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿದ್ದು, ಸರಿಯಿದ್ದ ಉತ್ತರಕ್ಕೆ ಶಿಕ್ಷಕಿ ತಪ್ಪು ಹಾಕಿದ್ದಾರೆ ಎನ್ನುವ ದ್ವೇಷದಿಂದ ವಿದ್ಯಾರ್ಥಿನಿ ಶಿಕ್ಷಕಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ತನ್ನ ಸ್ನೇಹಿತೆಯೊಬ್ಬಳ ಸಹಾಯ ಪಡೆದುಕೊಂಡು ಈ ಕೃತ್ಯ ಎಸಗಿದ್ದಾಳೆ. ಸ್ಟಾಫ್ ರೂಮ್‌ನಲ್ಲಿ ಶಿಕ್ಷಕಿಯರಿಲ್ಲದ ವೇಳೆ ಅವಧಿ ಮೀರಿದ ಮಾತ್ರೆಗಳನ್ನು ಶಿಕ್ಷಕಿಯ ವಾಟರ್ ಬಾಟಲಿಗೆ ಹಾಕಿದ್ದಾರೆ. ಈ ನೀರನ್ನು ಗಣಿತ ಶಿಕ್ಷಕಿ ಜತೆಗೆ ಮತ್ತೊಬ್ಬ ಶಿಕ್ಷಕಿಯೂ ಕುಡಿದಿದ್ದಾರೆ. ಆ ಬಳಿಕ ಒಬ್ಬರು ಶಿಕ್ಷಕಿ ಅಸ್ವಸ್ಥಗೊಂಡರೆ, ಮತ್ತೊಬ್ಬ ಶಿಕ್ಷಕಿ ಮುಖದಲ್ಲಿ ಊತ ಉಂಟಾಗಿದೆ. ಈ ಕುರಿತು ವಿಚಾರಿಸಿ ಸಿಸಿಟಿವಿ ಗಮನಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರಿಬ್ಬರಿಗೆ ವರ್ಗಾವಣೆ ಪತ್ರ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿದೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ