ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕಾಗಿ ಕಾಂಗ್ರೆಸ್ ಪರ ನಿಲ್ಲುವ ಪರಿಸ್ಥಿತಿ ಇವತ್ತು ಬಂದಿದೆ. ದೇಶದಲ್ಲಿ ಸಂವಿಧಾನ ಉಳುವಿಗಾಗಿ ಜನರ ಸ್ವಯಂ ಪ್ರೇರಣೆಯಿಂದ ಎಚ್ಚೆತ್ತುಕೊಂಡಿದ್ದಾರೆ. ಜನರಿಗೆ ಮೋದಿಯವರ ಬಗ್ಗೆ ಅಪಾರ ನಂಬಿಕೆ ಇತ್ತು. ಜನರಿಗೆ 2 ಕೋಟಿ ಉದ್ಯೋಗ ಹಾಗೂ ವಿದೇಶದಲ್ಲಿ ಕಪ್ಪು ಹಣ ತಂದು ಬಡವರಿಗೆ ಹಂಚುತ್ತೇನೆ ಎಂದಿದ್ದರು ಎಲ್ಲಿದೆ? ಎಂದು ಪ್ರಶ್ನಿಸಿದರು.
ಇಂದಿರಾಗಾಂಧಿ ಉಳುವವನೆ ಭೂ ಒಡೆಯ ಕಾಯ್ದೆ ಜಾರಿಗೆ ತಂದರು. ದೊಡ್ಡ ದೊಡ್ಡ ಶ್ರೀಮಂತ ರೈತರ ಜಮೀನು ಬಡವರಿಗೆ ಕೊಟ್ಟರು. ಮೋದಿ ಬಡವರಿಗೆ ವಂಚಿಸಿ ಶ್ರೀಮಂತರ ಉದ್ಯಮಗಳು ಸಾಲ ಮನ್ನಾ ಮಾಡಿದರು. ಕರ್ನಾಟಕದಿಮದ 25 ಜನ ಗೆದ್ದರೂ ಸದನದಲ್ಲಿ ದಲಿತರ ಪರ ಮಾತನಾಡಲಿಲ್ಲ. ಈ ಸಾರಿ ಮಾದಿಗ ಸಮುದಾಯ ಮೋಸ ಹೋಗುವುದಿಲ್ಲ ಎಂದು ಹೇಳಿದರು.ಸಮಾಜದ ಮುಖಂಡ ಶಿವಾನಂದ ಮಾದರ, ನಾಗೇಶ ಶಿಡ್ಲನವರ, ಪುಂಡಲೀಕ ಮಾದರ, ರಮೇಶ ಗುಂಡನಪಲ್ಲೆ, ಮುದಕಪ್ಪ ಶಿಲ್ಲಿಕೇರಿ, ಪರಶುರಾಮ ಮಾದರ, ಮಂಜುನಾಥ ಮಾದರ, ಅರ್ಜುನ ಹೊಸಮನಿ ಇತರರು ಇದ್ದರು.