ಕನ್ನಡಪ್ರಭ ವಾರ್ತೆ ರಾಯಬಾಗ
ಸಿಬಿಕೆಎಸ್‌ಎಸ್‌ಕೆ ನಿರ್ದೇಶಕ ಭರತೇಶ ಬನವಣೆ ಮಾತನಾಡಿ, ಪಟ್ಟಣದಲ್ಲಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ ಮತ್ತು ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬೃತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಚಿತ ಔಷದ್ಯೋಪಚಾರ, ಬಸ್ ಸೇವೆ ಮತ್ತು ಊಟದ ವ್ಯವಸ್ಥೆ ಇರುವುದರಿಂದ ಗ್ರಾಮೀಣ ಭಾಗದ ಜನರು ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೆಎಲ್‌ಇ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅಲ್ಲಂಪ್ರಭು ಪ್ರಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಶಿಬಿರ ಫೆ.13 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ರವರೆಗೆ ನಡೆಲಿದೆ. ಶಿಬಿರದಲ್ಲಿ ಪಾಲ್ಗೊಳ್ಳುವವರು ತಮ್ಮ ಆಧಾರ ಕಾರ್ಡ, ರೇಷನ್ ಕಾರ್ಡ ಮತ್ತು ಆಧಾರ ಲಿಂಕ್ ಇರುವ ಮೊಬೈಲ್ ಹೊಂದಿರುವವರಿಗೆ ಆಯ್ಯುಷಮಾನ್ ಕಾರ್ಡಗಳನ್ನು ಮಾಡಿಕೊಡಲಾಗುವುದು ಎಂದರು.ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಸಿಬಿಕೆಎಸ್‌ಎಸ್‌ಕೆ ಉಪಾಧ್ಯಕ್ಷ ತಾತ್ಯಾಸಾಬ ಕಾಟೆ, ಮಲ್ಲಪ್ಪ ಮೈಶಾಳೆ, ರಾಮಚಂದ್ರ ನಿಸಾನದಾರ, ಬಸವರಾಜ ಡೊಣವಾಡೆ, ಆರ್.ಕೆ.ಪಾಟೀಲ, ಡಾ.ಕಾಡು ಗುಂಡಕಲ್ಲೆ, ಸದಾನಂದ ಹಳಿಂಗಳಿ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ರಾಮಚಂದ್ರ ಕಾಟೆ, ಲಗಮಣ್ಣಾ ಪಾಟೀಲ, ಅಪ್ಪಾಸಾಬ ಮೈಶಾಳೆ, ಗಂಗಧಾರ ಮೈಶಾಳೆ, ಅಮೀತ ಜಾಧವ, ಕಲ್ಲಪ್ಪ ನಿಂಗನೂರೆ ಸೇರಿದಂತೆ ಅನೇಕರು ಇದ್ದರು.