ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ

KannadaprabhaNewsNetwork |  
Published : Aug 04, 2025, 11:45 PM IST
4ಎಚ್ಎಸ್ಎನ್7 : ಹೊಳೆನರಸೀಪುರದ ಪುರಸಭೆ ಸಭಾಂಗಣದಲ್ಲಿ ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಮ ನಿರ್ದೇಶನ ಸದಸ್ಯರ ನಡುವೆ ವಾದಪ್ರತಿವಾದ ನಡೆಯಿತು. | Kannada Prabha

ಸಾರಾಂಶ

ಪುರಸಭೆ ಮಳಿಗೆಗಳ ಬಾಡಿಗೆ ಹಾಗೂ ಹರಾಜು, ಅಭಿವೃದ್ಧಿ ಕಾಮಗಾರಿ ಹಾಗೂ ಇತರೆ ೩೨ ವಿಷಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪುರಸಭೆಯ ೧೭ ಮಳಿಗೆಗಳನ್ನು ಹರಾಜಿಗೆ ಇಟ್ಟಿದ್ದು, ಅದರಲ್ಲಿ ೬ ಮಾತ್ರ ಹರಾಜಾಗಿದೆ ಮತ್ತು ಉಳಿದ ಎಲ್ಲಾ ಮಳಿಗೆಗಳಿಗೆ ಪುನಃ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದರು. ಪುರಸಭೆಯ ೨೩ ಚುನಾಯಿತ ಸದಸ್ಯರಲ್ಲಿ ಪುರಸಭಾಧ್ಯಕ್ಷ ಸೇರಿದಂತೆ ಜೆಡಿಎಸ್‌ನ ೧೮ ಸದಸ್ಯರು ಇದ್ದರು, ಉಪಾಧ್ಯಕ್ಷೆ ಗೈರಾಗಿದ್ದರು ಮತ್ತು ಕಾಂಗ್ರೆಸಿನ ಸದಸ್ಯ ಬೈರಶೆಟ್ಟಿ ಹಾಗೂ ೫ ನಾಮ ನಿರ್ದೇಶನ ಸದಸ್ಯರು ಇದ್ದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯಾಧಿಕಾರಿ ಶಿವಶಂಕರ್ ಅವರ ಉಪಸ್ಥಿತಿಯಲ್ಲಿ ಪುರಸಭಾ ಸದಸ್ಯರ ಸಾಮಾನ್ಯ ಸಭೆ ನಡೆಯಿತು.

ಪುರಸಭೆ ಮಳಿಗೆಗಳ ಬಾಡಿಗೆ ಹಾಗೂ ಹರಾಜು, ಅಭಿವೃದ್ಧಿ ಕಾಮಗಾರಿ ಹಾಗೂ ಇತರೆ ೩೨ ವಿಷಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪುರಸಭೆಯ ೧೭ ಮಳಿಗೆಗಳನ್ನು ಹರಾಜಿಗೆ ಇಟ್ಟಿದ್ದು, ಅದರಲ್ಲಿ ೬ ಮಾತ್ರ ಹರಾಜಾಗಿದೆ ಮತ್ತು ಉಳಿದ ಎಲ್ಲಾ ಮಳಿಗೆಗಳಿಗೆ ಪುನಃ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದರು. ಮುಖ್ಯಾಧಿಕಾರಿ ಶಿವಶಂಕರ್ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮಹಾತ್ಮಗಾಂಧಿ ಹಾಗೂ ಚೆನ್ನಾಂಬಿಕ ವೃತ್ತದಲ್ಲಿ ೨೪ ಲಕ್ಷ ರು.ನಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಿದ್ದು, ಅವುಗಳು ಕೆಟ್ಟು ಹೋಗಿವೆ. ಅದರ ದುರಸ್ತಿ ಮತ್ತು ನಿರ್ವಹಣೆ ಕುರಿತು ಗುತ್ತಿಗೆ ಅಥವಾ ಇತರೆ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದರು.

ಪುರಸಭಾ ಸದಸ್ಯರಾದ ಕೆ. ಶ್ರೀಧರ್, ಸುಧಾನಳಿನಿ, ನಿಂಗಯ್ಯ, ಮಧು ಹಾಗೂ ಕಾಂಗ್ರೆಸ್ ಪಕ್ಷದ ಬೈರಶೆಟ್ಟಿ ಅವರು ನೀಡಿದ ಕೆಲವು ಸಲಹೆಗಳನ್ನು ಪುರಸಭಾಧ್ಯಕ್ಷರು ದಾಖಲಿಸಿಕೊಂಡು ಫಾಲೋ ಮಾಡುವಂತೆ ಸೂಚಿಸಿದರು.ನಾಮ ನಿರ್ದೇಶನ ಸದಸ್ಯ ಉಮೇಶ್ ಅವರು ಪುರಸಭೆಗೆ ೩ನೇ ಸಲ ಚುನಾಯಿತರಾದ ಹಿರಿಯ ಸದಸ್ಯೆ ಹಾಗೂ ಮಾಜಿ ಪುರಭಾಧ್ಯಕ್ಷೆ ಸುಧಾನಳಿನಿ ಅವರೊಂದಿಗೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಕೋಪದಿಂದ ವಾದ ನಡೆಸಿದರು. ಈ ಪ್ರಸಂಗದಿಂದ ಸಭೆಯಲ್ಲಿದ್ದ ಇತರೆ ಜೆಡಿಎಸ್ ಸದಸ್ಯರು ಸುಧಾನಳಿನಿಯವರ ಪರವಾಗಿ ನಾಮ ನಿರ್ದೇಶನ ಸದಸ್ಯನ ಜತೆಗೆ ಪ್ರತಿವಾದ ನಡೆದು, ಸಭೆಯಲ್ಲಿ ಕೆಲಕಾಲ ಏನಾಗುತ್ತಿದೆ ಎಂಬುದು ಮತ್ತು ಏಕೆ ಈ ವಾದ-ಪ್ರತಿವಾದ ಪ್ರಾರಂಭವಾಯಿತು ಎಂಬುದೇ ತಿಳಿಯಲಿಲ್ಲ. ಆದರೆ ಪುರಸಭೆಯಲ್ಲಿ ನಾಮ ನಿರ್ದೇಶಕ ಸದಸ್ಯರ ಹಕ್ಕು ಮತ್ತು ನಡವಳಿಕೆ ಬಗ್ಗೆ ಅರಿತು ಮಾತನಾಡಬೇಕು ಜತೆಗೆ ಹಿಂಬಾಗಿಲಿನಿಂದ ಬಂದು ಚುನಾಯಿತ ಸದಸ್ಯರಂತೆ ವರ್ತನೆ ಮಾಡೋದಲ್ಲ ಎಂಬ ಮಾತು ಕೇಳಿಬಂದಿತು ಮತ್ತು ಪುರಸಭಾಧ್ಯಕ್ಷ ಪ್ರಸನ್ನ ಸಮಾಧಾನ ಪಡಿಸಿ, ಸಭೆ ಮುಂದುವರೆಸಿದರು.

ಅಂಗನವಾಡಿ ಕಟ್ಟಡಕ್ಕೆ ೬೦-೪೦ ಅಳತೆಯ ನಿವೇಶನ ಅಗತ್ಯವಿಲ್ಲ, ಒಂದು ಕೊಠಡಿಗೆ ಅಗತ್ಯದಷ್ಟು ನಿವೇಶನ ನೀಡಿ ಎಂದು ಉಮೇಶ್ ತಿಳಿಸಿದಾಗ ಪುರಸಭಾಧ್ಯಕ್ಷರು ಪುಟ್ಟಮಕ್ಕಳಿಗೆ ಓದಿನ ಜತೆಗೆ ಆಟಕ್ಕೂ ಮೈದಾನ ಬೇಕು, ೬೦-೪೦ ಅಳತೆಯ ನಿವೇಶನವೇ ಸಾಲಲ್ಲವೆಂಬುದು ನನ್ನ ಅನಿಸಿಕೆ ಎಂದಾಗ, ಜೆಡಿಎಸ್ ಸದಸ್ಯರು ನೀವು ಹೇಳೊದು ಸತ್ಯವೆಂದು ಧ್ವನಿಗೂಡಿಸಿ, ಹೆಚ್ಚಿನ ಅಳತೆಯ ನಿವೇಶನವಿದ್ದರೂ ನೀಡಿ, ನಮ್ಮ ಅಭ್ಯಂತರವಿಲ್ಲವೆಂದಾಗ ನಾಮ ನಿರ್ದೇಶನ ಸದಸ್ಯ ಮೌನವಹಿಸಿದರು.ಪುರಸಭೆಯ ೨೩ ಚುನಾಯಿತ ಸದಸ್ಯರಲ್ಲಿ ಪುರಸಭಾಧ್ಯಕ್ಷ ಸೇರಿದಂತೆ ಜೆಡಿಎಸ್‌ನ ೧೮ ಸದಸ್ಯರು ಇದ್ದರು, ಉಪಾಧ್ಯಕ್ಷೆ ಗೈರಾಗಿದ್ದರು ಮತ್ತು ಕಾಂಗ್ರೆಸಿನ ಸದಸ್ಯ ಬೈರಶೆಟ್ಟಿ ಹಾಗೂ ೫ ನಾಮ ನಿರ್ದೇಶನ ಸದಸ್ಯರು ಇದ್ದರು. ಸಭೆಗೂ ಮುನ್ನ ಪುರಸಭೆಗೆ ನೂತನವಾಗಿ ನಾಮ ನಿರ್ದೇಶನಗೊಂಡ ಕಾಂಗ್ರೆಸ್ ಪಕ್ಷದ ೫ ಸದಸ್ಯರನ್ನು ಮುಖ್ಯಾಧಿಕಾರಿ ಶಿವಶಂಕರ್ ಸಭೆಗೆ ಸ್ವಾಗತಿಸಿದರು ಹಾಗೂ ಪುರಸಭೆ ಕರ್ತವ್ಯಕ್ಕೆ ನಿಯೋಜನೆಗೊಂಡ ನೌಕರರನ್ನು ಪರಿಚಯಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಮಂಜ್ರಾಬಾದ್ ಕೋಟೆಯೊಳಗೆ ಗೋಡೆ ಕುಸಿತ