ಕನ್ನಡಪ್ರಭ ವಾರ್ತೆ ಮಾಲೂರುಸರ್ಕಾರಿ ಇಲಾಖೆಗಳ ಅಧಿಕಾರಿಗಳಾಗಿರಲಿ, ಚುನಾಯಿತ ಪ್ರತಿನಿಗಳಾಗಲಿ ಅವರ ಅಧಿಕಾರ ಅವಧಿಯಲ್ಲಿ ಮಾಡಿರುವ ಕೆಲಸ ಕಾರ್ಯಗಳು ಶಾಶ್ವತವಾಗಿರುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಜಿಪಂ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಸುಮಾರು ೨೨ ವರ್ಷ ಕಾಲ ಸೇವೆಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಕಾರ್ಯಪಾಲಕ ಅಭಿಯಂತರ ಜಿ.ನಾರಾಯಣಸ್ವಾಮಿ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿದರು.ನೌಕರರ ಜತೆ ಉತ್ತಮ ಬಾಂಧವ್ಯ
ಅಧಿಕಾರ ಶಾಶ್ವತವಲ್ಲ ನಾವು ಮಾಡಿದ ಕೆಲಸ ಕಾರ್ಯಗಳೇ ಶಾಶ್ವತವಾಗಿರುತ್ತದೆ. ನಾರಾಯಣಸ್ವಾಮಿ ಅಭಿಯಂತರರಾಗಿ ಪದೋನ್ನತಿ ಪಡೆದು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನೌಕರರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಪ್ರತಿ ಗ್ರಾಮದಲ್ಲಿ ಅವರು ಅಧಿಕಾರವಧಿಯಲ್ಲಿ ನಿರ್ಮಾಣಗೊಂಡ ಕಟ್ಟಡಗಳು, ರಸ್ತೆಗಳು, ಸಲಹೆ ಮತ್ತು ಪ್ಲಾನ್ ನೀಡಿ ಕಾಮಗಾರಿ ವೀಕ್ಷಿಸಿ ಗುಣಮಟ್ಟದ ಕಾಮಗಾರಿ ಮಾಡಿಸಿದ್ದಾರೆ ಎಂದು ಶ್ಲಾಘಿಸಿದರು.ಯಾರಿಗೂ ತೊಂದರೆ ನೀಡಿಲ್ಲ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿ.ಪಂ ಜಿ.ನಾರಾಯಣಸ್ವಾಮಿ, ತಾಲೂಕಿನಲ್ಲಿ ಕಳೆದ ೨೨ ವರ್ಷದಿಂದ ಸೇವೆ ಸಲ್ಲಿಸಲು ಸಹಕರಿಸಿದ ಶಾಸಕರು ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ನಮ್ಮ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸುವದಾಗಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಕೆಲಸ ನಿರ್ವಹಿಸುವುದು ಕಠಿಣವಾದ ಸವಾಲೇ ಆಗಿರುತ್ತದೆ. ಆದರೂ ಸಣ್ಣಪುಟ್ಟ ಏರಿಳಿತ ಬಿಟ್ಟರೆ ಬೇರೆ ಯಾರಿಗೂ ನನ್ನ ಅಧಿಕಾರಾವಧಿಯಲ್ಲಿ ತೊಂದರೆ ನೀಡಿಲ್ಲ ಎಂದರು.ತಹಸೀಲ್ದಾರ್ ಕೆ.ರಮೇಶ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿ.ಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ, ನಿವೃತ್ತ ಕಾರ್ಯಪಾಲಕ ಅಭಿಯಂತರ ವೆಂಕಟಾಚಲಪತಿ, ಜಿಪಂ ಅಭಿಯಂತರ ದೇವರಾಜ್, ಸುಬ್ರಮಣಿ, ಹರಿನಾಥ್, ಬಿಜಿಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬೈಯಣ್ಣ, ಮತ್ತಿತರರು ಇದ್ದರು.