ಕನ್ನಡ ಪ್ರಭ ವಾರ್ತೆ ಮುಧೋಳ
ಮತದಾನ ನಡೆಯುವ ವೇಳೆ ಮತದಾರರಿಗೆ ಯಾವುದೇ ಅಡತಡೆಯಾಗದಂತೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಂತೆ ಪೂರ್ವಭಾವಿಯಾಗಿ ಎರಡು ಹಂತದ ತರಬೇತಿ ನೀಡಲಾಗುವುದು ಎಂದು ಸಹಾಯಕ ಚುನಾವಣಾ ಅಧಿಕಾರಿ ಹುಲ್ಲುಮನಿ ತಿಮ್ಮಣ್ಣ ಹೇಳಿದರು.ಸೋಮವಾರ ಪಟ್ಟಣದ ಎಸ್.ಆರ್. ಕಂಠಿ ಮಹಾವಿದ್ಯಾಲಯದಲ್ಲಿ ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಆಯೋಜಿಸಿದ್ದ ಮೊದಲ ಹಂತದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ಹಂತದ ತರಬೇತಿಯಲ್ಲಿ 259 ಪಿಆರ್‌ಒ, 273 ಎಪಿಆರ್‌ಒ ಸೇರಿ ಒಟ್ಟು 535 ಜನರಿಗೆ ಭಾಗವಹಿಸಿದ್ದಾರೆ. ಮೊದಲ ಹಂತದಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು ಮತಯಂತ್ರಗಳ ಮಾದರಿ, ಬಳಕೆ ಮಾಡುವ ವಿಧಾನ ಕುರಿತು ನುರಿತ ತಜ್ಞರಿಂದ ತರಬೇತಿ ಪಡೆದುಕೊಳ್ಳಲಿದ್ದಾರೆ. ಕಾಲೇಜಿನ 11 ಕೊಠಡಿಗಳಲ್ಲಿ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಿಸಿ, ಜಿಲ್ಲಾ ಚುನಾವಣಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.
ಸೆಕ್ಟರ್ ಅಧಿಕಾರಿಗಳನ್ನಾಗಿ ನೇಮಕಮಾಡಲಾಗಿದೆ. ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ತಿಳಿಸಿ. ಈ ಮೂಲಕ ಲೋಕಸಭಾ ಸಾರ್ವತ್ರಿಕ ಚುನಾವಣೆ ಪಾರದರ್ಶಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಸಹಕಾರ ನೀಡಬೇಕು ಎಂದರು.ಜಿಲ್ಲಾಧಿಕಾರಿಗಳ ಭೇಟಿ: ಮುಧೋಳ ಎಸ್.ಆರ್.ಕಂಠಿ ಕಾಲೇಜಿನಲ್ಲಿ ಸೋಮವಾರ ಚುನಾವಣಾ ಸಿಬ್ಬಂದಿಗೆ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಅವರು ಭೇಟಿ ನೀಡಿದರು. ತರಬೇತಿ ಏಕೆ ನೀಡಲಾಗುತ್ತದೆ, ಚುನಾವಣೆಯ ನಿಯಮಗಳೇನು ಅವುಗಳನ್ನು ಯಾವರೀತಿ ಕಟ್ಟು ನಿಟ್ಟಾಗಿ ಪಾಲಿಸಬೇಕು, ಮತದಾನ ಪೂರ್ವ ಮತ್ತು ಮತದಾನ ದಿನದಂದು ತಮ್ಮ ಜವಾಬ್ಜಾರಿ ಹೇಗೆ ಇರುತ್ತೆ ಎಂಬುದರ ಕುರಿತು ತರಬೇತಿದಾರರಿಗೆ ವಿವರಿಸಿದರು. ಚುನಾವಣಾ ನಿಯಮ ಉಲ್ಲಂಘಿಸಿದರೆ ತಮಗಾಗುವ ತೊಂದರೆಗಳೇನು ಎಂಬುದರ ಮಾಹಿತಿ ನೀಡಿದರು. ಚುನಾವಣೆ ಹೇಗೆ ಎದುರಿಸಬೇಕು, ತಮ್ಮ ಜವಾಬ್ದಾರಿಗಳೇನು, ಅವುಗಳನ್ನು ಹೇಗೆ ನಿರ್ವಹಿಸಬೇಕು, ಚುನಾವಣಾ ನಿಯಮ ಉಲ್ಲಂಘಿಸಿದರೆ ತಮಗಾಗುವ ತೊಂದರೆಗಳೇನು ಎಂಬುದರ ಕುರಿತು ಜಿಲ್ಲಾಧಿಕಾರಿಗಳು ಪ್ರತಿ ಕೊಠಡಿಗೆ ಭೇಟಿ ನೀಡಿ ವಿವರಿಸಿದರು.
ತಹಸೀಲ್ದಾರ ವಿನೋಧ ಹತ್ತಳ್ಳಿ, ಸಹಾಯಕ ಚುನಾವಣಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತರಬೇತಿ ದಾರರು ಮತ್ತು ಸಿಬ್ಬಂಧಿ ವರ್ಗದವರು ಇದ್ದರು.