-ಎಸ್ಪಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡನೆ: ಶಾಸಕ ಮತ್ತಿಮುಡ ನಿರ್ಧಾರ । ಹೆಚ್ಚುವರಿ ಮಹೇಶ್ ಮೇಘಣ್ಣನವರ ಅಮಾನತಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ, ಕಲಬುರಗಿ
ಜೇವರ್ಗಿ ಪುರಸಭೆ ಚುನಾವಣೆಯ ಗದ್ದಲ ತಾರಕಕ್ಕೆ ಏರಿದ್ದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ ವಿರುದ್ಧ ಜೇವರ್ಗಿ ಠಾಣೆಯಲ್ಲಿ ಕಾಂಗ್ರೆಸ್ ಸದಸ್ಯೆಯೊಬ್ಬರನ್ನು ಕಿಡ್ನ್ಯಾಪ್ ಮಾಡಿರುವುದಾಗಿ ದೂರು ದಾಖಲಾಗಿದೆ.ಪುರಸಭೆಯ ಕಾಂಗ್ರೆಸ್ ಸದಸ್ಯ ಶಿವುಬಾಯಿ ಕೊಂಬಿನ್ ಅವರ ಪುತ್ರರಾದ ಸಂಗಮೇಶ್ ಬಸಣ್ಣ ಕೊಂಬಿನ್ ಹಾಗೂ ನಾಗರಾಜ ಬಸಣ್ಣ ಕೊಂಬಿನ್ ಈ ದೂರು ದಾಖಲಿಸಿದ್ದಾರೆ.
ಈ ಘಟನೆಯಿಂದಾಗಿ ಪ್ರಜಾಸತ್ತಾತ್ಮಕವಾಗಿ ಮತಚಲಾವಣೆ ಮಾಡಬೇಕಿದ್ದ ತಮ್ಮತಾಯಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಕೃತ್ಯಕ್ಕೆ ಕೆಲವು ಸ್ಥಳೀಯ ಪೊಲೀಸ್ ಸಿಬ್ಬಂದಿ ಕೂಡ ಸಹಕರಿಸಿದ್ದು, ಈ ಕುರಿತಾದ ವಿಡಿಯೋ ಪುರಾವೆ ಸಹ ತಮ್ಮ ಬಳಿಯಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಜೇವರ್ಗಿ ಠಾಣೆಯಲ್ಲಿ ದೂರು ಸ್ವೀಕರಿಸಿದ್ದಾಗ್ಯೂ ಇನ್ನೂ ಎಫ್‍ಐಆರ್ ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.ಹಕ್ಕುಚ್ಯುತಿ ಮಂಡನೆಗೆ ಚಿಂತನೆ:
ಸ್ವತಃ ಪೊಲೀಸರೇ ಗೂಂಡಾಗಳಂತೆ ವರ್ತಿಸಿದ್ದಾರೆ. ಈ ಬೆಳವಣಿಗೆಯನ್ನು ಖಂಡಿಸಲು ಪ್ರತಿಭಟನೆ ನಡೆಸುತ್ತಿದ್ದ ವೇಳೆ ತಮ್ಮನ್ನು ಮೇಘಣ್ಣನವರ ತಳ್ಳಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮುಡ ತಿಳಿಸಿದ್ದಾರೆ.
ಕೂಡಲೆ ಹೆಚ್ಚುವರಿ ಎಸ್.ಪಿ ಮಹಶ ಮೇಘಣ್ಣನವರ ಅವರನ್ನುಅಮಾನತು ಮಾಡಬೇಕು. ಜೇವರ್ಗಿ ಪುರಸಭೆಗೆ ಮರು ಚುನಾವಣೆ ನಡೆಸಬೇಕು. ಸರ್ಕಾರದ ಕೈಗೊಂಬೆಯಾಗಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಪುರಸಭೆ ಚುನಾವಣೆ ಸಂಬಂಧ ಬಿಜೆಪಿ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಮುಖಂಡರು ಹೇಳಿದ್ದಾರೆ.
ಫೋಟೋ- ಬಿಜೆಪಿ