ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಇಂದು ಜಗತ್ತಿನಲ್ಲಿ 5ನೇ ದೊಡ್ಡ ಆರ್ಥಿಕ ಸ್ಥಾನ ಹೊಂದಿದೆ. ಜಮ್ಮು ಕಾಶ್ಮೀದಲ್ಲಿ 370ನೇ ವಿಧಿ ರದ್ದತಿ, ಶ್ರೀರಾಮ ಮಂದಿರ ಸ್ಥಾಪನೆ, ಕಾಶಿ ಹರಿದ್ವಾರ, ಉಜ್ಜೈನಿ, ಹೀಗೆ ಹತ್ತು ಹಲವು ದೇವಾಲಯ ಅಭಿವೃದ್ಧಿ ಪಡಿಸುವುದರೊಂದಿಗೆ ದೇಶದ ಪ್ರವಾಸೋದ್ಯಮ ಅತ್ಯಂತ ಬೆಳವಣಿಗೆ ಕಂಡಿವೆ. ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣಗಳು, ಬಂದರುಗಳು ನಿರ್ಮಾಣ ಮಾಡುವುದರ ಜೊತೆಗೆ ಜನಸಾಮನ್ಯರ ಅನಕೂಲಕರ ಉಜ್ವಲಾ ಯೋಜನೆ, ಸುಕನ್ಯಾ ಯೋಜನೆ, ಕಿಸಾನ ಸಮ್ಮಾನ ಯೋಜನೆ ಅನುಷ್ಠಾನ ಮಾಡುವುದರ ಮೂಲಕ ಜನಸಾಮನ್ಯರ ಸೇವೆಗೆ ಸದಾ ಸಿದ್ದವಿರುವ ಪ್ರಧಾನಿ ಮೋದಿಜಿ ಸಾಧನೆಗಳನ್ನು ಜನಕ್ಕೆ ತಿಳಿಸಬೇಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ಬಿಜೆಪಿ ಕಳೆದ 10 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಪ್ರತಿಯೊಬ್ಬರ ಮನ ಮನಕ್ಕೆ ತಲುಪಿಸುವ ಗ್ರಾಮ ಚಲೋ ಅಭಿಯಾನವನ್ನು ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ಯಶಸ್ವಿಗೋಳಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.ಪ್ರತಿ ಕಾರ್ಯಕರ್ತರಿಗೆ ನಿಗದಿಪಡಿಸಿದ ಹಳ್ಳಿಗೆ ಕಡ್ಡಾಯವಾಗಿ ತೆರಳಿ ಗ್ರಾಮ ಚಲೋ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಕಡು ಬಡವರಿಗೆ ನೀಡುವ ಗರಿಬ್ ಕಲ್ಯಾಣ ಯೋಜನೆ, ನಾರಿ ಶಕ್ತಿ ಯೋಜನೆ, ಮನೆ ಮನೆಗೆ ನೀರು ಯೋಜನೆ ಬಗ್ಗೆ ತಿಳಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಾತನಾಡಿ, ಬರುವ ಲೋಕಸಭಾ ಚುನಾವಣೆ ಅತ್ಯಂತ ಪ್ರಮುಖವಾಗಿದ್ದು, ಕೇಂದ್ರ ಸರ್ಕಾರದ ನೂರಾರು ಸಾಧನೆಗಳ ಕರಪತ್ರವನ್ನು ಮನೆ ಮನೆಗೆ ಹಂಚಬೇಕೆಂದರು.
------------
ಭಾರತ ಇಂದು ಜಗತ್ತಿನಲ್ಲಿ 5ನೇ ದೊಡ್ಡ ಆರ್ಥಿಕ ಸ್ಥಾನ ಹೊಂದಿದೆ. ಜಮ್ಮು ಕಾಶ್ಮೀದಲ್ಲಿ 370ನೇ ವಿಧಿ ರದ್ದತಿ, ಶ್ರೀರಾಮ ಮಂದಿರ ಸ್ಥಾಪನೆ, ಕಾಶಿ ಹರಿದ್ವಾರ, ಉಜ್ಜೈನಿ, ಹೀಗೆ ಹತ್ತು ಹಲವು ದೇವಾಲಯ ಅಭಿವೃದ್ಧಿ ಪಡಿಸುವುದರೊಂದಿಗೆ ದೇಶದ ಪ್ರವಾಸೋದ್ಯಮ ಅತ್ಯಂತ ಬೆಳವಣಿಗೆ ಕಂಡಿವೆ.