ಪಂಕಜ್ ಪಾಂಡೆ ಹಾಗೂ ಜಾಟ್ ರೆಜಿಮೆಂಟ್ ಅಕೌಂಟೆಂಟ್ ಹೆಸರಿನ ವ್ಯಕ್ತಿ ಮೋಸ ಮಾಡಿದವರಾಗಿದ್ದಾರೆ.
ಶಿರಸಿ: ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ ವ್ಯಕ್ತಿಯೊಬ್ಬ ಶಿರಸಿ ಮೂಲದ ಪ್ರಾಧ್ಯಾಪಕನಿಗೆ ₹೧.೨೪ ಲಕ್ಷ ವಂಚಿಸಿದ ಘಟನೆ ನಡೆದಿದೆ.
ಪಂಕಜ್ ಪಾಂಡೆ ಹಾಗೂ ಜಾಟ್ ರೆಜಿಮೆಂಟ್ ಅಕೌಂಟೆಂಟ್ ಹೆಸರಿನ ವ್ಯಕ್ತಿ ಮೋಸ ಮಾಡಿದವರಾಗಿದ್ದಾರೆ. ಪಂಕಜ್ ಪಾಂಡೆ ಎನ್ನುವ ವ್ಯಕ್ತಿಯು ಬನವಾಸಿ ರಸ್ತೆಯ ಸದಾಶಿವನಗರದ ನೆಜ್ಜೂರ ಪ್ಲಾಟ್ ನಿವಾಸಿ ಶಿರಸಿ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಸೂರ್ಯನಾರಾಯಣ ವಿಶ್ವೇಶ್ವರ ಶಾಸ್ತ್ರಿ(೬೧) ಎಂಬವರಿಗೆ ಕಳೆದ ಮಾ. ೧೭ರಂದು ಕರೆ ಮಾಡಿ ತಾನು ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ತನಗೆ ನಿಮ್ಮ ಪ್ಲಾಟ್ ಹಿಡಿಸಿದೆ ಅಂತಾ ಹೇಳಿ, ಮುಂಗಡ ಹಣ ತಮ್ಮ ಆರ್ಮಿ ಕಚೇರಿಯವರು ಸಂದಾಯ ಮಾಡುತ್ತಾರೆ ಎಂದು ಮರುದಿನ ಜಾಟ್ ರೆಜಿಮೆಂಟ್ ಅಕೌಂಟೆಂಟ್ ಹೆಸರಿನ ವ್ಯಕ್ತಿಯನ್ನು ಪರಿಚಯಿಸಿದ್ದಾನೆ. ಅವನು ಹೇಳಿದಂತೆ ಸೂರ್ಯನಾರಾಯಣ ತನ್ನ ಪತ್ನಿ ಕೆನರಾ ಬ್ಯಾಂಕ್ ಖಾತೆಯಿಂದ ₹೨೫ ಸಾವಿರ ಮತ್ತು ತಮ್ಮ ಎಸ್‌ಬಿಐ ಖಾತೆಯಿಂದ ₹೯೯ ಸಾವಿರ ಸಂದಾಯ ಮಾಡಿದ್ದಾರೆ. ಆರೋಪಿಗಳಿಬ್ಬರೂ ಮೋಸದಿಂದ ಫಿರ್ಯಾದಿ ಕಡೆಯಿಂದ ಒಟ್ಟೂ ₹೧.೨೪ ಲಕ್ಷ ಹಣವನ್ನು ಮೋಸದಿಂದ ವರ್ಗಾವಣೆ ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ಸೂರ್ಯನಾರಾಯಣ ಶಾಸ್ತ್ರೀ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಸಾರಿಗೆ ಸಂಸ್ಥೆ ಡಿಪೋ ವ್ಯವಸ್ಥಾಪಕರಿಗೆ ದಂಡ
ಕಾರವಾರ: ಸಾರಿಗೆ ಸಂಸ್ಥೆಯ ಕುಮಟಾ ಡಿಪೋ ವ್ಯವಸ್ಥಾಪಕರಿಗೆ ಗ್ರಾಹಕರ ನ್ಯಾಯಾಲಯ ₹೫೦ ಸಾವಿರ ದಂಡ ಹಾಗೂ ₹೨೧ ಸಾವಿರ ಹಣವನ್ನು ಬಡ್ಡಿ ಸಹಿತ ತುಂಬುವಂತೆ ಮಂಗಳವಾರ ಆದೇಶಿಸಿದೆ.೨೦೨೨ನೇ ಇಸ್ವಿಯಲ್ಲಿ ಕುಮಟಾದ ಅಳ್ವೆಕೋಡಿಯ ಸಾರಿಗೆ ಸಂಸ್ಥೆ ನಿವೃತ್ತ ನೌಕರ ಶೇಷು ಹರಿಕಾಂತ್ರ ದಾವಣಗೆರೆಗೆ ತೆರಳಲು ಮುಂಗಡ ₹೨೧ ಸಾವಿರ ಹಣ ನೀಡಿ ಸಾರಿಗೆ ಬಸ್ ಬುಕ್ ಮಾಡಿದ್ದರು. ಆದರೆ ಅದೇ ದಿನ ರಾತ್ರಿ ಬಸ್‌ನನ್ನು ನೀಡಲಾಗುವುದಿಲ್ಲ. ಖಾಸಗಿ ಬಸ್ ತೆಗೆದುಕೊಂಡು ಹೋಗುವುದಂತೆ ಅಂದಿನ ಡಿಪೋ ವ್ಯವಸ್ಥಾಪಕ ವೈ.ಕೆ. ಬಾನವಾಳಿಕರ ತಿಳಿಸಿದ್ದರು. ಶೇಷು ಅವರು ಕಾರಣ ಕೇಳಿದರೂ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಹೀಗಾಗಿ ಡಿಪೋ ಮ್ಯಾನೇಜರ್ ವಿರುದ್ಧ ಶೇಷು ಹರಿಕಾಂತರ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಧೀಶ ಮಂಜುನಾಥ ಬೊಮ್ನನಕಟ್ಟಿ ವಾದ ವಿವಾದವನ್ನು ಆಲಿಸಿ ನ್ಯಾಯಾಲಯಕ್ಕೆ ₹೫೦ ಸಾವಿರ ದಂಡ ಹಾಗೂ ಗ್ರಾಹಕನಿಂದ ಪಡೆದ ₹೨೧ ಸಾವಿರಕ್ಕೆ ಶೇ. ೭ರಂತೆ ಬಡ್ಡಿ ನೀಡಿ ಮರಳಿಸುವಂತೆ ಆದೇಶಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.