ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ₹೧.೪೦ ಕೋಟಿ ಮಂಜೂರಾಗಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಬಾವಿ ಶಾಸಕ ಮತ್ತು ಬೆಮುಲ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ₹೧.೪೦ ಕೋಟಿ ಮಂಜೂರಾಗಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಬಾವಿ ಶಾಸಕ ಮತ್ತು ಬೆಮುಲ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ತಾಲೂಕಿನ ಖಂಡ್ರಟ್ಟಿ ಗ್ರಾಮದಲ್ಲಿ ₹೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಇದಕ್ಕಾಗಿ ನರೇಗಾ ಯೋಜನೆಯಡಿ ಅನುದಾನ ನೀಡಲಾಗಿದೆ ಎಂದವರು ತಿಳಿಸಿದರು.
ಖಂಡ್ರಟ್ಟಿ, ಹಳ್ಳೂರ, ಸುಣಧೋಳಿ, ತುಕ್ಕಾನಟ್ಟಿ, ಹೊಸಟ್ಟಿ, ಉದಗಟ್ಟಿ ಮತ್ತು ದಂಡಾಪೂರ ಗ್ರಾಮಗಳಿಗೆ ತಲಾ ₹೨೦ ಲಕ್ಷ ಇದಕ್ಕಾಗಿ ವ್ಯಯ ಮಾಡಲಾಗುತ್ತಿದೆ ಎಂದು ಹೇಳಿದರು.
ಖಂಡ್ರಟ್ಟಿ ಗ್ರಾಮದಲ್ಲಿ ನಮ್ಮ ಸರ್ಕಾರವಿದ್ದಾಗ ಸಾಕಷ್ಟು ಜನೋಪಯೋಗಿ ಕೆಲಸ ಕೈಗೊಳ್ಳಲಾಗಿದೆ. ಜನರ ಮೂಲ ಸಮಸ್ಯೆಗಳಿಗೆ ಆದ್ಯತೆ ನೀಡಲಾಗಿದೆ. ಈಗಿರುವ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.
ಅಗತ್ಯವಿರುವ ರಸ್ತೆ ದುರಸ್ತಿ ಕಾಮಗಾರಿ ಕೈಕೊಳ್ಳುತ್ತೇನೆ. ಖಂಡ್ರಟ್ಟಿ ಗ್ರಾಮಕ್ಕೆ ಸಂಪರ್ಕವಿರುವ ರಸ್ತೆಗಳನ್ನು
ಅಭಿವೃದ್ಧಿಪಡಿಸುವುದಾಗಿ ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿ ಗೌರವಿಸಿದರು.
ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ತಾಪಂ ಮಾಜಿ ಸದಸ್ಯ ಲಕ್ಷ್ಮಣ ಮುಸಗುಪ್ಪಿ, ಅರಬಾವಿ ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ, ಪ್ರಮುಖರಾದ ಲಕ್ಷ್ಮಣ ಬೀರಾಣಿ, ಬಾಳಪ್ಪ ಕಪರಟ್ಟಿ, ಲಕ್ಕಪ್ಪ ಬೆಳಗಲಿ, ಸುನೀಲ ಎತ್ತಿನಮನಿ, ಭೀಮಪ್ಪ ಜೋಗಿ, ಬಾಳಪ್ಪ ಜಗ್ಗಿನವರ, ಅರ್ಜುನ ಅಳಗುಡಿ, ಮುತ್ತೆಪ್ಪ ಪೂಜೇರಿ, ಯಲ್ಲಪ್ಪ ಸೂರನ್ನವರ, ರಮೇಶ ಬಡಿಗವಾಡ, ಕೆಂಪಣ್ಣ ಮಾದರ, ವಸಂತ ಕಪರಟ್ಟಿ, ಗಣಪತಿ ಚಿಪ್ಪಲಕಟ್ಟಿ, ಸಿದ್ದಪ್ಪ ಜಗ್ಗಿನವರ ಸೇರಿ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.