ಹರಪನಹಳ್ಳಿ: ಪಟ್ಟಣದ ಸಂತೆ ಮಾರುಕಟ್ಟೆ ಹಾಗೂ ಕೊಟ್ಟೂರು ರಸ್ತೆಯಲ್ಲಿನ ವೃತ್ತ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ₹1.70 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಅವರು ಪಟ್ಟಣದ ಕೊಟ್ಟೂರು ವೃತ್ತದಲ್ಲಿ ಎರಡೂ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಶನಿವಾರ ಮಾತನಾಡಿದರು.ಕೊಟ್ಟೂರು ವೃತ್ತದ ಎರಡು ಬದಿಯಲ್ಲಿ ಒಟ್ಟು 165 ಮೀಟರ್ ಉದ್ದದ ಸಿಸಿ ಚರಂಡಿ ನಿರ್ಮಾಣ, ಪೈಪಲೈನ್ ಗಳ ದುರಸ್ತಿ, ವಿದ್ಯುತ್ ಕಂಬಗಳ ಸ್ಥಳಾಂತರ, ರಸ್ತೆ ಸುರಕ್ಷಾ ಅಂಶಗಳು ಸೇರಿದಂತೆ ವಿವಿಧ ರೀತಿಯಲ್ಲಿ ಕೊಟ್ಟೂರು ಸರ್ಕಲ್ ಅಭಿವೃದ್ಧಿಗೊಳಿಸಲಾಗುವುದು ಸಾರ್ವಜನಿಕರ ಸಹಕಾರ ನೀಡಬೇಕು ಎಂದು ತಿಳಿಸಿದರು.
ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ 1743 ಚಮೀ ಪೇವರ್ ಬ್ಲಾಕ್ ರಸ್ತೆ ಮತ್ತು 285 ಮೀಟರ್ ಉದ್ದದ ಸಿಸಿ ಚರಂಡಿ ನಿರ್ಮಾಣ, 3 ಗೇಟು, ಆರ್ಚ್ ನಿರ್ಮಾಣ, ತರಕಾರಿ ತೊಳೆಯಲು ಪ್ಲಾಟ್ ಫಾರಂ, ವಿದ್ಯುತ್ ಕಾಮಗಾರಿ ಹೀಗೆ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಹರಪನಹಳ್ಳಿ ಪಟ್ಟಣದ ಅಭಿವೃದ್ಧಿಗೆ ಡಿಎಂಎಫ್ ಅನುದಾನದಲ್ಲಿ ₹8-10 ಕೋಟಿ ಹಣ ಬಂದಿದೆ, ಐಬಿ ವೃತ್ತದ ಅಭಿವೃದ್ದಿಗೆ ₹3.50 ಕೋಟಿ ನಿಗದಿಯಾಗಿದೆ, ತಾಲೂಕಿನ ಪ್ರತಿ ಗ್ರಾಪಂಗೂ ₹15-20 ಕೋಟಿ ಅನುದಾನ ಶಾಸಕರು ನೀಡಿದ್ದಾರೆ ಎಂದು ಹೇಳಿದರು.
ಹಿಂದುಳಿದಿದ್ದ ಹರಪನಹಳ್ಳಿ ತಾಲೂಕು ಇಷ್ಟೆಲ್ಲ ಅಭಿವೃದ್ಧಿ ಆಗಲು ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿಯನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಿದ ದಿ. ಮಾಜಿ ಶಾಸಕ ಎಂ.ಪಿ. ರವೀಂದ್ರ ಕಾರಣ ಎಂದು ಸ್ಮರಿಸಿದರು.ಪುರಸಭಾ ಅಧ್ಯಕ್ಷೆ ಎಂ. ಫಾತೀಮಾಭಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಸದಸ್ಯರುಗಳಾದ ಅಬ್ದುಲ್ ರಹಿಮಾನ್, ಜಾಕೀರ ಹುಸೇನ್, ಲಾಟಿದಾದಾದಾಪೀರ, ಮಂಜುನಾಥ ಇಜಂತಕರ್, ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ ಹಾಗೂ ಕೂಲ್ ಇರ್ಪಾನ್, ವಾಗೀಶ, ಎಲ್.ಮಂಜನಾಯ್ಕ, ಎನ್. ಶಂಕರ, ಹೇಮಣ್ಣ , ಅಲೀಂ, ಗುಡಿ ನಾಗರಾಜ, ಎಇಇ ರಾಘವೇಂದ್ರ ಇತರರು ಇದ್ದರು.