24 ಗಂಟೆಯಲ್ಲಿ 1,76,248 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ

KannadaprabhaNewsNetwork | Published : Jul 26, 2024 1:30 AM

ಸಾರಾಂಶ

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ದಿನಗಳೆದಂತೆ ಮಳೆಯ ಅಬ್ಬರ ಹೆಚ್ಚಾಗುತ್ತಿದೆ. ಇದರಿಂದ ಕೃಷ್ಣಾ ನದಿಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗುರುವಾರದ ಮಾಹಿತಿ ಪ್ರಕಾರ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ನಿಂದ 153542 ಕ್ಯುಸೆಕ್, ದೂಧಗಂಗಾ ನದಿಯಿಂದ 25200 ಕ್ಯುಸೆಕ್, ರಾಜ್ಯದ ಗಡಿಯಲ್ಲಿರುವ ಕಲ್ಲೋಳ ಬ್ಯಾರೇಜಿನಿಂದ 1,88,742 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಯಲ್ಲಿ 1,76,248 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅದೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಬುಧವಾರಕ್ಕಿಂತ ಸುಮಾರು 12394 ಕ್ಯುಸೆಕ್ ನೀರು ಹೆಚ್ಚಾಗಿ ಬರುತ್ತಿದೆ ಎಂದು ತಹಸೀಲ್ದಾರ್ ಸದಾಶಿವ ಮಕ್ಕೋಜಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ದಿನಗಳೆದಂತೆ ಮಳೆಯ ಅಬ್ಬರ ಹೆಚ್ಚಾಗುತ್ತಿದೆ. ಇದರಿಂದ ಕೃಷ್ಣಾ ನದಿಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗುರುವಾರದ ಮಾಹಿತಿ ಪ್ರಕಾರ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 153542 ಕ್ಯುಸೆಕ್‌, ದೂಧಗಂಗಾ ನದಿಯಿಂದ 25200 ಕ್ಯುಸೆಕ್, ರಾಜ್ಯದ ಗಡಿಯಲ್ಲಿರುವ ಕಲ್ಲೋಳ ಬ್ಯಾರೇಜಿನಿಂದ 1,88,742 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಯಲ್ಲಿ 1,76,248 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಅದೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಬುಧವಾರಕ್ಕಿಂತ ಸುಮಾರು 12394 ಕ್ಯುಸೆಕ್‌ ನೀರು ಹೆಚ್ಚಾಗಿ ಬರುತ್ತಿದೆ ಎಂದು ತಹಸೀಲ್ದಾರ್‌ ಸದಾಶಿವ ಮಕ್ಕೋಜಿ ತಿಳಿಸಿದ್ದಾರೆ.

ಮಳೆ ಪ್ರಮಾಣ:

ಕೃಷ್ಣಾ ಕೊಳ್ಳದ ಕೊಯ್ನಾ 163 ಮಿಮಿ, ನವಜಾ 237 ಮಿಮಿ, ಮಹಾಬಳೇಶ್ವರ 307 ಮಿಮಿ, ಧೂಮ 71 ಮಿಮಿ, ಕನ್ಹೇರಿ 65 ಮಿಮಿ, ಉರ್ಮೊಡಿ 141 ಮಿಮಿ, ತಾರಳಿ 134 ಮಿಮಿ, ವಾರನಾ 127 ಮಿಮಿ, ರಾಧಾನಗರಿ 202 ಮಿಮಿ, ದೂಧಗಂಗಾ 142 ಮಿಮಿ ದಾಖಲೆಯ ಮಳೆ ಸುರಿದಿದೆ. ಮಳೆ ಇದೇರೀತಿ ಮುಂದುವರೆಯು ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯಶೇ.71.15ರಷ್ಟು ಭರ್ತಿಯಾಗಿದೆ. 1050 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಇನ್ನು ಸುಮಾರು 10000 ಕ್ಯುಸೆಕ್‌ ಹೆಚ್ಚುವರಿಯಾಗಿ ನೀರು ಬಿಡುವ ಸಾಧ್ಯತೆಗಳಿವೆ. ಮಳೆ ಅಬ್ಬರ ಜೋರಾಗಿದ್ದು ನದೀ ತೀರದ ಜನತೆ ಆದಷ್ಟು ನದಿಯತ್ತ ಹೋಗಬಾರದು. ಆದಷ್ಟು ಸುರಕ್ಷಿತ ಪ್ರದೇಶಗಳಲ್ಲಿರಬೇಕು ಎಂದು ತಿಳಿಸಿದ್ದಾರೆ.

ಎಷ್ಟು ನೀರು ಬಂದರೆ ಯಾವ ಗ್ರಾಮಕ್ಕೆ ನೆರೆ:

ಪ್ರಸ್ತುತ ತಾಲೂಕಿನ ಮುತ್ತೂರು, ತುಬಚಿ ಗ್ರಾಮಗಳಿಗೆ 23000 ಕ್ಯುಸೆಕ್‌, ಮೈಗೂರು, ಕಡಕೋಳ, ಲಿಂಗದಕಟ್ಟಿ, ಸನಾಳ, ಜಂಬಗಿಕೆಡಿ, ಜಂಬಗಿ ಬಿಕೆ, ಟಕ್ಕೋಡ, ಟಕ್ಕಳಕಿ, ಹಿರೇಪಡಸಲಗಿ ಗ್ರಾಮಗಳಿಗೆ 290000 ಕ್ಯುಸೆಕ್‌, ಶೂರ್ಪಾಲಿ 300000 ಕ್ಯುಸೆಕ್‌, ಕಂಕಣವಾಡಿ 310000 ಕ್ಯುಸೆಕ್‌, ಆಲಗೂರ 220000 ಕ್ಯುಸೆಕ್‌, ಚಿನಗುಂಡಿ, ಚಿಕ್ಕಪಡಸಲಗಿ, ಕವಟಗಿ ಗ್ರಾಮಗಳಿಗೆ 250000 ಕ್ಯುಸೆಕ್‌, ಶಿರಗುಪ್ಪಿ, 260000 ಕ್ಯುಸೆಕ್‌, ಕುಂಬಾರಹಳ್ಳ, ಕುಂಚನೂರು, ಜಕನೂರ, ನಾಗನೂರ, ಬಿದರಿ ಗ್ರಾಮಗಳಿಗೆ 400000 ಕ್ಯುಸೆಕ್‌ ನೀರು ಹರಿದು ಬಂದರೆ ಈ ಎಲ್ಲ ಗ್ರಾಮಗಳು ಪ್ರವಾಹ ಪೀಡಿತವಾಗುತ್ತವೆ. ಕಳೆದ ಬಾರಿ 2019 ರಲ್ಲಿ 523000 ಕ್ಯುಸೆಕ್‌ ಮತ್ತು 2021 ರಲ್ಲಿ 410000 ಕ್ಯುಸೆಕ್‌ ನೀರು ಬಂದಿದ್ದ ರಿಂದ ತಾಲೂಕಿನ 23 ಗ್ರಾಮಗಳು ಪ್ರವಾಹದಿಂದ ತತ್ತರಿಸಿದ್ದವು ಎಂದರು.

Share this article