ರಕ್ತದಾನ ಕುರಿತು ಮೂಢನಂಬಿಕೆ, ತಪ್ಪು ಕಲ್ಪನೆ ಬಿಡಿ

KannadaprabhaNewsNetwork | Published : Jul 25, 2024 1:31 AM

ಸಾರಾಂಶ

ರಕ್ತದಾನಕ್ಕಿಂತ ಮಿಗಿಲಾದ ವತಿಯಿಂದ ದಾನವಿಲ್ಲ .ಈ ಮುಂಚೆ ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಇನ್ನಿತರೆ ಅನೇಕ ತುರ್ತು ಸಂದರ್ಭಗಳಲ್ಲಿ ರಕ್ತದ ಅಲಭ್ಯತೆಯಿಂದಲೇ ಸಾಕಷ್ಟು ಮಂದಿ ಮೃತಪಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಕ್ತ ಲಭ್ಯವಾಗುವುದರಿಂದ ಸಾಯುವವರ ಸಂಖ್ಯೆ ಕಡಿಮೆಯಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಮಂದಿಯಲ್ಲಿ ರಕ್ತದಾನ ಕುರಿತು ಇನ್ನೂ ಸಹ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ ಎಂದು ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ .ವಿ. ನವೀನ್ ಕಿರಣ್ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಸಿ.ವಿ. ವೆಂಕಟರಾಯಪ್ಪ ಶಿಕ್ಷಣ ಕೇಂದ್ರದಲ್ಲಿ ಬುಧವಾರ 28ನೇ ದತ್ತಿ ದಿನಾಚರಣೆ ಹಾಗೂ ಕೆವಿ ದತ್ತಿಗಳ ಸಂಸ್ಥಾಪಕ ಅಧ್ಯಕ್ಷ ಸಿ.ವಿ.ವೆಂಕಟರಾಯಪ್ಪರವರ 109ನೇ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ತುರ್ತು ಸಂದರ್ಭದಲ್ಲಿ ರಕ್ತ ಬೇಕು

ರಕ್ತದಾನಕ್ಕಿಂತ ಮಿಗಿಲಾದ ವತಿಯಿಂದ ದಾನವಿಲ್ಲ .ಈ ಮುಂಚೆ ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಇನ್ನಿತರೆ ಅನೇಕ ತುರ್ತು ಸಂದರ್ಭಗಳಲ್ಲಿ ರಕ್ತದ ಅಲಭ್ಯತೆಯಿಂದಲೇ ಸಾಕಷ್ಟು ಮಂದಿ ಮೃತಪಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಕ್ತ ಲಭ್ಯವಾಗುವುದರಿಂದ ಸಾಯುವವರ ಸಂಖ್ಯೆ ಕಡಿಮೆಯಾಗಿದೆ ಎಂದರು. ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು ಜೀವನ್ಮರಣ ಹೋರಾಟದಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು ಎಂಬುದು ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಂಸ್ಥಾಪಕ ಅಧ್ಯಕ್ಷರಾದ ಸಿ.ವಿ. ವೆಂಕಟರಾಯಪ್ಪನವರ ಸಂದೇಶವಾಗಿದ್ದು ಈ ನಿಟ್ಟಿನಲ್ಲಿ 1997ರಿಂದ ನಿರಂತರವಾಗಿ ಪ್ರತಿ ವರ್ಷ ರಕ್ತದಾನ ಶಿಬಿರಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.

2148 ಯೂನಿಟ್‌ ರಕ್ತ ಸಂಗ್ರಹ

ನಮ್ಮದೇ ದಾಖಲೆಯಾಗಿರುವ ಒಂದೇ ಶಿಬಿರದಲ್ಲಿ ಸಂಗ್ರಹವಾಗುವ 2500ಕ್ಕೂ ಹೆಚ್ಚು ಯೂನಿಟ್ ಗಳ ರಕ್ತ ಸಂಗ್ರಹಣೆಯನ್ನು ಈ ದಿನ ಮಾಡುವ ಗುರಿ ಹೊಂದಿದ್ದು ,ಬೆಳಗ್ಗೆ ಎಂಟು ಗಂಟೆಗೆ ನೂರಾರು ಮಂದಿ ರಕ್ತಧಾನಿಗಳು ಆಗಮಿಸಿದ್ದು ಇದು ಒಂದು ರಕ್ತದಾನದ ಕ್ರಾಂತಿಯಾಗಿದೆ ಎಂದರು. ರಕ್ತದಾನ ಶಿಬಿರದಲ್ಲಿ ದಾಖಲೆಯ 2148 ಯೂನಿಟ್‌ ರಕ್ತ ಸಂಗ್ರಹಿಸಲಾಯಿತು.

ಇದೇ ವೇಳೆ ಪೆರೇಸಂದ್ರದ ಉಪನ್ಯಾಸಕ ಎಂ.ವೆಂಕಟೇಶ್ 82 ನೇ ಭಾರಿಗೆ ರಕ್ತ ದಾನ ಮಾಡಿದರು. ಕೆ.ವಿ.ದತ್ತಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಿಬ್ಬಂದಿ ವರ್ಗ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಚಿಕ್ಕಬಳ್ಳಾಪುರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾ ಕೇಂದ್ರದ ಪತ್ರಕರ್ತರು, ಕೆ .ವಿ. ನವೀನ್ ಕಿರಣ್ ರವರ ಅಭಿಮಾನಿ ವೃಂದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ರಕ್ತ ನೀಡಿದ ಎಲ್ಲರಿಗೂ ರೆಡ್‌ಕ್ರಾಸ್ ಸೊಸೈಟಿಯಿಂದ ಅಭಿನಂದನಾ ಪತ್ರ ವಿತರಿಸಲಾಯಿತು. ರಕ್ತದಾನಿಗಳಿಗೆ ಸಂಘಟಕರು ಹಣ್ಣು, ತಂಪು ಪಾನೀಯ ನೀಡಿ ಉಪಚರಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಬಿ.ಮುನಿಯಪ್ಪ,ಸಿ.ವಿ.ನಿರ್ಮಲಾ ಪ್ರಭು, ದತ್ತಿ ಆಡಳಿತಾಧಿಕಾರಿ ಡಾ. ಸಾಯಿಪ್ರಭು, ಮ್ಯಾನೇಜರ್ ಲಕ್ಷ್ಮಣ ಸ್ವಾಮಿ. ದತ್ತಿ ಹಿತೈಷಿಗಳಾದ ವಿಜಯಲಕ್ಷ್ಮಿ, ಇಮ್ರಾನ್ ಖಾನ್, ರಕ್ತಾದಾನ ಶಿಬಿರದ ನಿರ್ವಹಣೆ ಮುಖ್ಯಸ್ಥ ಹಾಗೂ ಕೆ ವಿ ಬಿಪಿಎಡ್ ಪ್ರಾಂಚುಪಾಲ ಆರ್.ವೆಂಕಟೇಶ್. ಪಿಆರ್ ಓ ಎನ್.ವೆಂಕಟೇಶ್. ಕೆ.ವಿ. ಬಿಎಡ್ ಪ್ರಾಂಶುಪಾಲ ಶೇಖರ್,ರೆಡ್ ಕ್ರಾಸ್ ನ ಎಂ.ಜಯರಾಂ,ಕೋಡಿರಂಗಪ್ಪ, ರೆಡ್‌ಕ್ರಾಸ್ ಸೊಸೈಟಿ ವೈದ್ಯರ ತಂಡ, ಸಿಬ್ಬಂದಿ ಇದ್ದರು.

Share this article