“ಕೆಪಿಎ ಆಸರೆ” ಯೋಜನೆ ಎಚ್.ಎನ್. ನಾಗೇಶ್ಉ ದ್ಘಾಟನೆ
ರಾಜ್ಯದ ವೃತ್ತಿನಿರತ ಛಾಯಾಗ್ರಾಹಕರು ಅಕಾಲಿಕ ಮರಣಕ್ಕೆ ತುತ್ತಾದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರ ಕೆಪಿಎ ಆಸರೆ ಯೋಜನೆ ಜಾರಿಗೊಳಿಸಲಾಗಿದೆ ಎಂದು ಕರ್ನಾಟಕ ಫೋಟೊಗ್ರಾಫರ್ಸ್ ಅಸೋಸಿಯೇಷನ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್. ನಾಗೇಶ್ ತಿಳಿಸಿದರು.ಬೀರೂರಿನ ರೋಟರಿ ಭವನದಲ್ಲಿ ಕಡೂರು ತಾಲೂಕು ಛಾಯಾಗ್ರಾಹಕರ ಸಂಘ ಹಮ್ಮಿಕೊಂಡಿದ್ದ ಕೆನಾನ್ ಕ್ಯಾಮೆರಾ ಕಾರ್ಯಾಗಾರ ಹಾಗೂ ''''''''ಕೆಪಿಎ ಆಸರೆ'''''''' ಯೋಜನೆ ಚಾಲನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಛಾಯಾಗ್ರಾಹಕರು ₹110 ಪಾವತಿಸಿ ಯೋಜನೆಗೆ ನೋಂದಾಯಿಸಿಕೊಳ್ಳಬೇಕು. ಯೋಜನೆ ಸದಸ್ಯರು ಅಕಾಲಿಕ ನಿಧನರಾದಲ್ಲಿ ಅವರ ಕುಟುಂಬಕ್ಕೆ ₹1 ಲಕ್ಷ ಪರಿಹಾರ ನೀಡಲಾಗುವುದು. ರಾಜ್ಯದ ಎಲ್ಲ ಛಾಯಾಗ್ರಾಹಕರ ಸಹಭಾಗಿತ್ವದ ಮೂಲಕ ಯೋಜನೆ ನಿರಂತರವಾಗಿ ಮುಂದುವರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಯೋಜನೆ ಸೌಲಭ್ಯ ಪಡೆಯಲು ಛಾಯಾಗ್ರಾಹಕರು ಸಂಘದ ಸದಸ್ಯತ್ವ ಹಾಗೂ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ ಎಂದು ತಿಳಿಸಿದರು.ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಯಚಂದ್ರ ಮಾತನಾಡಿ, ಸದಸ್ಯರ ನಿಧನದ ಮಾಹಿತಿ ದೊರೆತ 12 ದಿನ ಗಳೊಳಗೆ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗುವುದು. ಫಲಾನುಭವಿಗಳ ಆಧಾರ್ ಕಾರ್ಡ್, ಸಂಘದ ಸದಸ್ಯತ್ವ ಗುರುತಿನ ಚೀಟಿ ಹಾಗೂ ನಾಮನಿರ್ದೇ ದಾಖಲೆ ಸಲ್ಲಿಸಿದ ಬಳಿಕ ನೆರವು ವಿತರಿಸಲಾಗುವುದು ಎಂದು ಹೇಳಿದರು.ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಮಾತನಾಡಿ, ''''''''ಕೆಪಿಎ ಅಸರೆ” ಯೋಜನೆ ಮಾನವೀಯ ಕಾಳಜಿಯಿಂದ ರೂಪುಗೊಂಡಿದ್ದು, ಸಂಕಷ್ಟದ ಸಂದರ್ಭದಲ್ಲಿ ಸದಸ್ಯರ ಕುಟುಂಬಗಳಿಗೆ ನೆರವಾಗುವ ಉದ್ದೇಶ ಹೊಂದಿದೆ. ಎಲ್ಲ ಸದಸ್ಯರು ಯೋಜನೆ ಯಶಸ್ಸಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕೆಪಿಎ ಯೋಜನೆ ನಿರ್ದೇಶಕ ರುದ್ರೇಶ್ ದೋರನಾಳು, ಕಾರ್ಯದರ್ಶಿ ಪ್ರೇಮ್ ಕುಮಾರ್, ಬೀರೂರು ಸಂಘದ ಉಪಾಧ್ಯಕ್ಷ ಶ್ರೀಧರ್, ಗೌರವಾಧ್ಯಕ್ಷ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಮಧು, ಅಜಯ್, ಬಿ.ವಿ. ವೆಂಕಟೇಶ್, ಬಿ.ಟಿ. ಮೋಹನ್ ಕುಮಾರ್, ಬಸವರಾಜ್ ಇದ್ದರು.18 ಬೀರೂರು 1 ಕೆನಾನ್ ಕ್ಯಾಮೆರಾದ ಕಾರ್ಯಾಗಾರ ಮತ್ತು ಕೆ.ಪಿ.ಎ ಆಸರೆ ಯೋಜನೆಯ ಉದ್ಘಾಟನೆ ಸಮಾರಂಭವನ್ನು ಕರ್ನಾಟಕ ಫೋಟೊಗ್ರಾಫರ್ಸ್ ಅಸೋಸಿಯೇಷನ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್. ನಾಗೇಶ್ ಉದ್ಘಾಟಿಸಿದರು