ಸೂಲಿಬೆಲೆ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಆದರೆ ಕಾಯಂ ಶಿಕ್ಷಕರಿಲ್ಲದೆ ದಾಖಲಾತಿ ಕುಸಿಯುತ್ತಿರುವುದು ಆತಂಕಕಾರಿ ವಿಷಯ ಎಂದು ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟಿನ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಕಳವಳ ವ್ಯಕ್ತಪಡಿಸಿದರು.
ಜೇನುಗೂಡು ಟ್ರಸ್ಟಿನಿಂದ ಜನತಾ ಕಾಲೋನಿ ಕನ್ನಡ ಶಾಲೆ, ಉರ್ದುಶಾಲೆ ಹಾಗೂ ಬೆಟ್ಟಹಳ್ಳಿ ಶಾಲೆಯನ್ನು ದತ್ತು ಪಡೆದಿದ್ದು, ಕಂಪನಿಗಳ ಸಿಎಸ್‌ಅರ್ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಟ್ರಸ್ಟಿನ ಸಹಯೋಗದಲ್ಲಿ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣೆ ಮಾಡಲಾಗುತ್ತಿದೆ. ಪೋಷಕರು ಸರ್ಕಾರಿ ಶಾಲೆಗಳಲ್ಲಿ ಸಿಗುವ ಉಚಿತ ಸವಲತ್ತುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಟ್ರಸ್ಟಿನ ಹಿರಿಯ ನಿರ್ದೇಶಕ ಬಿ.ಶ್ರೀನಿವಾಸ್ ಮಾತನಾಡಿ, ಟ್ರಸ್ಟಿನ ವತಿಯಿಂದ ಉಚಿತವಾಗಿ ಟ್ರಾಕ್ ಸೂಟ್ ನೀಡಲಾಗುತ್ತಿದೆ. ಶಾಸಕ ಶರತ್ ಬಚ್ಚೇಗೌಡ ಸಹಕಾರದಲ್ಲಿ ವಾಟರ್ ಪಿಲ್ಟರ್ ಹಾಕಿಸಿಕೊಡಲಾಗಿದೆ. ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡರ ಸಹಕಾರದಲ್ಲಿ ಶಾಲಾ ಬ್ಯಾಗ್, ತಟ್ಟೆ ಲೋಟ ವಿತರಣೆ ಮಾಡಿದ್ದೇವೆ. ಬೆಟ್ಟಹಳ್ಳಿ ಸರ್ಕಾರಿ ಶಾಲೆಯನ್ನು ಸಿಎಸ್‌ಅರ್ ಅನುದಾನದಲ್ಲಿ ಅಭಿವೃದ್ದಿ ಮಾಡಲಾಗಿದೆ ಎಂದರು.ಈ ವೇಳೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್, ಹಿರಿಯ ನಿರ್ದೇಶಕ ಬಿ.ಶ್ರೀನಿವಾಸ್, ಮುಖ್ಯಶಿಕ್ಷಕ ರಾಮಕೃಷ್ಣಪ್ಪ, ಯಶೋಧಮ್ಮ, ತಬುಸಮ್, ರಾಮಕೃಷ್ಣಯ್ಯ, ಟ್ರಸ್ಟಿನ ನಿರ್ದೇಶಕರಾದ ಸೈಯದ್ ಮಹಬೂಬ್, ನಯಾಜ್ ಖಾನ್, ಜಿಯಾವುಲ್ಲಾ, ಬೆಟ್ಟಹಳ್ಳಿ ಗೋಪಿನಾಥ್, ಕುರುಗಲ್ ಕಾಂತರಾಜ್ ಉರ್ದು ಶಾಲೆಯ ತಸ್ಮಿಯಾ, ಶೈಲಜಾ ಇತರರಿದ್ದರು.
ಸೂಲಿಬೆಲೆ ಜನತಾ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಜೇನುಗೂಡು ಟ್ರಸ್ಟ್ ನಿರ್ದೇಶಕ ಡಾ.ನಯಾಜ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣೆ ಮಾಡಿದರು.