ಜನರ ಕಲ್ಯಾಣಾಭಿವೃದ್ಧಿಗೆ ₹1 ಲಕ್ಷ ಕೋಟಿ ಮೀಸಲು

KannadaprabhaNewsNetwork |  
Published : May 21, 2024, 12:32 AM IST
೨೦ಕೆಎಲ್‌ಆರ್-೮ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್. | Kannada Prabha

ಸಾರಾಂಶ

ಈ ಹಿಂದೆ ಕಾಂಗ್ರೆಸ್ ಪಕ್ಷವು ನೀಡಿದ ೧೬೫ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿ ಸಾಧಿಸಿತ್ತು, ಈ ಭಾರಿ ಪಂಚ ಗ್ಯಾರಂಟಿಗಳನ್ನು ನೀಡುವುದರ ಜೂತೆಗೆ ಪರಿಣಾಮಕಾರಿಯಾಗಿ ಆಡಳಿತ ನಡೆಸಲು ಜನರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದೆ,

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದ ಜನತೆಯ ಕಲ್ಯಾಣ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಸರ್ಕಾರವು ೧ ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ದಿ ಕಾರ್ಯಗಳಿಗೆ ಮೀಸಲಿರಿಸಿದ್ದು ಕ್ರಿಯಾ ಯೋಜನೆಗಳನ್ನು ರೂಪಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ರೈತಾಪಿ ವರ್ಗದ ಯೋಜನೆಗಳಿಗೆ ೨೦ ಸಾವಿರ ಕೋಟಿ, ಎಸ್.ಸಿ.ಎಸ್.ಟಿ. ವರ್ಗಕ್ಕೆ ೨೫ ಸಾವಿರ ಕೋಟಿ ರು.ಗಳ ಅಭಿವೃದ್ದಿ ಯೋಜನೆಗಳನ್ನು ವಿಧಾನ ಪರಿಷತ್ ಚುನಾವಣೆಯ ನಂತರದಲ್ಲಿ ತೀರ್ಮಾನಿಸಲಿದೆ ಎಂದರು.

ಬಿಜೆಪಿ ಆಡಳಿತ ವೈಫಲ್ಯ

ಕಳೆದ ೨೦೨೨-೨೩ನೇ ಸಾಲಿನಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಕುಸಿತದಿಂದ ಜನರು ಬದಲಾವಣೆ ಬಯಸಿದರು, ಬಿಜೆಪಿ ಆಡಳಿತದ ವೈಫಲ್ಯತೆ ವಿರುದ್ದ ಅನೇಕ ನಿರ್ಧಾರಗಳನ್ನು ಕೈಗೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜಿತ್‌ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರನ್ನು ಸಂಘಟಿಸಿಕೊಂಡು ಕೈಗೊಂಡ ನಿರ್ಧಾರಗಳಲ್ಲಿ ರಾಜ್ಯದ ಜನತೆ ಭರವಸೆಗಳನ್ನು ನೀಡುವುದರ ಜೂತೆಗೆ ಜನರ ಕಲ್ಯಾಣ ಅಭಿವೃದ್ದಿ ಕಾರ್ಯಕ್ರಮಗಳಿಗೆ ೧ ಲಕ್ಷ ರೂ ಮೀಸಲಿರಿಸಿದ್ದಾರೆ ಎಂದು ಹೇಳಿದರು.ಈ ಹಿಂದೆ ಕಾಂಗ್ರೆಸ್ ಪಕ್ಷವು ನೀಡಿದ ೧೬೫ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿ ಸಾಧಿಸಿತ್ತು, ಈ ಭಾರಿ ಪಂಚ ಗ್ಯಾರಂಟಿಗಳನ್ನು ನೀಡುವುದರ ಜೂತೆಗೆ ಪರಿಣಾಮಕಾರಿಯಾಗಿ ಆಡಳಿತ ನಡೆಸಲು ಜನರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದೆ, ಜನರ ಅಗತ್ಯತೆಗೆ ಒತ್ತು ನೀಡುವ ದೆಸೆಯಲ್ಲಿ ಕ್ರಿಯಾ ಯೋಜನೆ ರೂಪಿಸಿ ಮುಂಬರುವ ಬಜೆಟ್‌ನಲ್ಲಿ ಮಂಡಿಸಲಿದ್ದಾರೆ ಎಂದು ತಿಳಿಸಿದರು.ಎತ್ತಿನಹೊಳೆ ಯೋಜನೆ ಅನುಷ್ಠಾನ

ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ, ಯರಗೋಳ್ ಯೋಜನೆಗಳು ಅನುಷ್ಠಾನಗೊಳಿಸಿದ್ದು, ಎತ್ತಿನ ಹೊಳೆಯ ನೀರಾವರಿ ಯೋಜನೆಯು ಪ್ರಗತಿಯಲ್ಲಿ ಕಾಂಗ್ರೆಸ್ ಆಡಳಿತಾದ ಅವಧಿಯೊಳಗೆ ಅನುಷ್ಠಾನಕ್ಕೆ ತರುವ ವಿಶ್ವಾಸ ಹೊಂದಿದೆ, ಇದರ ಜೊತೆಗೆ ಜಿಲ್ಲೆಗೆ ಸೂಪರ್ ಹಾಸ್ಪಿಟಲ್‌, ವೈದ್ಯಕೀಯ ಕಾಲೇಜು, ರಿಂಗ್ ರೋಡ್ ಸೇರಿದಂತೆ ಹಲವು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಟನಕ್ಕೆ ತರಲಿದೆ. ಈ ಚುನಾವಣೆಗಳು ಮುಗಿದ ನಂತರ ಈ ಎಲ್ಲಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ ಜನತೆ ಕಾಂಗ್ರೆಸ್‌ಗೆ ಅಧಿಕಾರಿ ನೀಡಿದ್ದಾರೆ. ಜಿಲ್ಲೆಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಕೆಲವೊಮ್ಮೆ ಪಕ್ಷದ ಸನ್ನಿವೇಶಗಳು ಬದಲಾದ ಸಂದರ್ಭದಲ್ಲಿ ತಾತ್ಕಲಿಕವಾಗಿ ಭಿನ್ನಮತ, ಗೊಂದಲ ಸೃಷ್ಟಿಯಾದರೂ ಕಾಲ ಕೊಡಿ ಬಂದಾಗ ಎಲ್ಲವೂ ಸರಿ ಹೋಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ವೆಂಕಟಪತಪ್ಪ, ಖಾದ್ರಿಪುರ ಬಾಬು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ