ಕನ್ನಡಪ್ರಭ ವಾರ್ತೆ ಸುತ್ತೂರು
ಕಾರ್ಯಕ್ರಮದ ಆಯೋಜಕ ಡಾ.ವೈ.ಪಿ. ಪ್ರಸಾದ್ ಮಾತನಾಡಿ, ಪ್ರತೀ ವರ್ಷ ಮೇ 20ರಂದು ವಿಶ್ವ ಜೇನು ದಿನ ಆಚರಿಸಲಾಗುತ್ತಿದೆ. ಕೃಷಿಯಲ್ಲಿ ಪರಾಗಸ್ಪರ್ಷದ ಮಹತ್ವ ಮತ್ತು ಪ್ರಕೃತಿಯಲ್ಲಿ ಪರಾಗಸ್ಪರ್ಷಗಳ ಸಂರಕ್ಷಣೆಯನ್ನು ಸಾರುವುದು ಈ ದಿವಸದ ಮುಖ್ಯಉದ್ದೇಶ. ಈ ವರ್ಷ ಬೀ ಎಂಗೇಜ್ಡ್ ವಿತ್ ಯೂತ್ಎಂಬ ಶೀರ್ಷಿಕೆಯಡಿ ಆಚರಿಸಲಾಯಿತು ಎಂದರು.
ಮುಖ್ಯ ಅತಿಥಿಯಾಗಿದ್ದ ಡಾ. ರಾಜಗೋಪಾಲ್ ಮಾತನಾಡಿ, ಆಧುನಿಕ ಜೇನು ಸಾಕಾಣಿಕೆಯ ಹರಿಕಾರರಾದ ಆಂಟೋನ್ ಜಾನ್ಸಾ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿಶ್ವ ಜೇನು ನೊಣ ದಿನ ಎಂದು ಆಚರಿಸಲಾಗುತ್ತಿದೆ ಎಂದರು.ನಂತರ ಅವರು ಜೇನುಹುಳುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಹಾಗೂ ಜೇನು ಸಾಕಾಣಿಕೆಯಲ್ಲಿ ಗಮನಿಸಬಹುದಾದ ಅಂಶಗಳು ಮತ್ತು ಜೇನು ಗೂಡಿಗೆ ಭಾದಿಸುವ ಕೀಟ ಮತ್ತು ರೋಗಗಳ ಕುರಿತು ಮಾಹಿತಿ ನೀಡಿದರು.
ರೈತರು ಜೇನು ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯ ಪಡೆಯುವುದರ ಜೊತೆಗೆ ಆಹಾರ ಪದಾರ್ಥಗಳ ಇಳುವರಿ ಹೆಚ್ಚಿಸುವಲ್ಲಿ ಸಹಕಾರಿಯಾಗಬೇಕು ಎಂದರು.
ನಂತರ ಜೇನು ಸಾಕಾಣಿಕೆಯ ಪ್ರಾತ್ಯಕ್ಷಿಕೆ ನೀಡಲಾಯಿತು. ಡಾ.ಜಿ.ಎಂ. ವಿನಯ್, ಜೆ.ಜಿ. ರಾಜಣ್ಣ, ಡಾ. ರಕ್ಷಿತ್ ರಾಜ್, ಗಂಗಪ್ಪ ಹಿಪ್ಪರಗಿ ಮೊದಲಾದವರು ಇದ್ದರು.