ಕನ್ನಡಪ್ರಭ ವಾರ್ತೆ ಭಾರತೀನಗರ
ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಸಂಘವು ಒಂದು ಕೋಟಿಗೂ ಅಧಿಕ ನಷ್ಟದಲ್ಲಿತ್ತು. ಗ್ರಾಮಸ್ಥರಿಂದ ಸಂಘಕ್ಕೆ ಆಯ್ಕೆಗೊಂಡ ನಿರ್ದೇಶಕರ ಸಹಕಾರದಿಂದ ಕಳೆದ ಮೂರ್ನಾಲ್ಕು ವರ್ಷದಿಂದ ನಷ್ಟವನ್ನು ತುಂಬಿ ಲಾಭ ಗಳಿಸುವತ್ತ ಹೆಜ್ಜೆ ಹಾಕಿದೆ ಎಂದರು.
ಸಂಘದಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದೆ. ರೈತರು ರಸಗೊಬ್ಬರಗಳನ್ನು ಸಂಘದಿಂದಲೇ ಖರೀದಿಸಿದಲ್ಲಿ ಇನ್ನೂ ಹೆಚ್ಚಿನ ಲಾಭ ನೀರೀಕ್ಷಿಸಬಹುದು. ಮಾರುಕಟ್ಟೆ ದರಕ್ಕಿಂತಲೂ ಸ್ವಲ್ಪ ಕಡಿಮೆ ಮೊತ್ತದಲ್ಲೇ ರಸಗೊಬ್ಬರ ಮಾರಾಟ ಮಾಡಲಾಗುತ್ತದೆ. ಜೊತೆಗೆ ಬೇವಿನ ಹಿಂಡಿ ಕೂಡ ಲಭ್ಯವಿದೆ ಎಂದರುಸಂಘದ ಸಿಇಒ ಎಸ್.ರಮೇಶ್ ಆದಾಯ ಮತ್ತು ಖರ್ಚು ವಿವರದ ಬಗ್ಗೆ ವರದಿ ಮಂಡಿಸಿ, ಕಳೆದ 2022-23ನೇ ಸಾಲಿನಲ್ಲಿ ಗಳಿಸಿದ್ದ ಲಾಭಾಂಶವನ್ನು ಗ್ರಾಮಾಭಿವೃದ್ಧಿಗೆ ದೇಣಿಗೆ ನೀಡಿದ್ದು, ಷೇರುದಾರರಿಗೆ ವಿತರಣೆ ಮಾಡಿರಲಿಲ್ಲ. ಈ ಬಾರಿ ಲಾಭಾಂಶವನ್ನು ಷೇರುದಾರರಿಗೆ ಶೇ.6.10 ರಷ್ಟು ಡಿವಿಡೆಂಟ್ ರೂಪದಲ್ಲಿ ನೀಡಲು ಸರ್ವ ಸದಸ್ಯರೂ ಒಪ್ಪಿಗೆ ಸೂಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಷೇರುದಾರರ ಮಕ್ಕಳಿಗೆ ಧನ ಸಹಾಯ ನೀಡಿ ಅಭಿನಂದಿಸಲಾಯಿತು. ಗ್ರಾಮದಲ್ಲಿ ಬಡಕುಟುಂಬದಿಂದ ಓದಿ ಸಿವಿಲ್ ಕೋರ್ಟ್ ನ್ಯಾಯಧೀಶೆಯಾಗಿ ಆಯ್ಕೆಗೊಂಡ ಎಸ್.ರಂಜಿತ ಮತ್ತು ಸಂಘದ ವೃತ್ತ ಮೇಲ್ವಿಚಾರಕ ಚರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.