ಸಿದ್ಧಸಿರಿಯಿಂದ ಜಿಲ್ಲಾಡಳಿತಕ್ಕೆ 10 ಲಕ್ಷ ದೇಣಿಗೆ

KannadaprabhaNewsNetwork |  
Published : Jul 24, 2024, 12:18 AM IST
ಸಿದ್ಧಸಿರಿಯಿಂದ ಜಿಲ್ಲಾಡಳಿತಕ್ಕೆ 10 ಲಕ್ಷ ದೇಣಿಗೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸುವುದು ಹಾಗೂ ಸಂರಕ್ಷಣೆಗಾಗಿ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಜಿಲ್ಲಾಡಳಿತಕ್ಕೆ ₹ 10 ಲಕ್ಷ ದೇಣಿಗೆ ನೀಡಲಾಯಿತು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ನೇತೃತ್ವದ ತಂಡ ಚೆಕ್‌ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸುವುದು ಹಾಗೂ ಸಂರಕ್ಷಣೆಗಾಗಿ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಜಿಲ್ಲಾಡಳಿತಕ್ಕೆ ₹ 10 ಲಕ್ಷ ದೇಣಿಗೆ ನೀಡಲಾಯಿತು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ನೇತೃತ್ವದ ತಂಡ ಚೆಕ್‌ ನೀಡಿದರು.

ಈ ವೇಳೆ ಮಾತನಾಡಿದ ರಾಘವ ಅಣ್ಣಿಗೇರಿ, ಸಿದ್ದಸಿರಿ ಸೌಹಾರ್ದ ಸಹಕಾರಿಯು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿದೆ. ಕೋವಿಡ್‌ನಲ್ಲಿ ಜಿಲ್ಲಾಡಳಿತದೊಂದಿಗೆ ಲಸಿಕಾ ಕಾರ್ಯದಲ್ಲಿ ತೊಡಗಿಸಿಕೊಂಡು ನಗರದ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಲು ಜಾಗೃತಿ ಮೂಡಿಸಲಾಗಿತ್ತು ಎಂದರು.

ನಗರ ಶಾಸಕ ಹಾಗೂ ಸಿದ್ಧಸಿರಿ ಸೌಹಾರ್ದದ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಸಿದ್ಧಸಿರಿ ಆಡಳಿತ ಮಂಡಳಿಯ ನಿರ್ಣಯದಂತೆ ಪರಿಸರ ಸಂರಕ್ಷಣೆಗಾಗಿ ಕಳೆದ ಬಾರಿಯೂ ಟ್ರೀ ಗಾರ್ಡ್ ವ್ಯವಸ್ಥೆ ಕಲ್ಪಿಸಲು ₹10 ಲಕ್ಷ ನೀಡಲಾಗಿತ್ತು. ಅದೇ ರೀತಿ ವೃಕ್ಷೋಥಾನ ಅಭಿಯಾನಕ್ಕೆ ₹ 10 ಲಕ್ಷ ದೇಣಿಗೆ ನೀಡಲಾಗಿತ್ತು. ಇದೀಗ ನಗರದಲ್ಲಿ ಗಿಡಗಳನ್ನು ಬೆಳೆಸಲು ಮತ್ತು ಸಂರಕ್ಷಣೆಗಾಗಿ ಮತ್ತೆ ₹ 10 ಲಕ್ಷ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಗರ ಶಾಸಕ ಯತ್ನಾಳ ಹಾಗೂ ಆಡಳಿತ ಮಂಡಳಿಯ ಸಾಮಾಜಿಕ ಸೇವೆ ಹಾಗೂ ಕಳಕಳಿಗೆ ಜಿಲ್ಲಾಡಳಿತ ಕೃತಜ್ಞತೆ ಸಲ್ಲಿಸಿ, ಮಳೆಗಾಲದ ವೇಳೆಗೆ 10 ಸಾವಿರ ಸಸಿಗಳನ್ನು ಬೆಳೆಸಿ, ನೆಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ, ಸಿದ್ಧರಿಯ ಜನರಲ್ ಮ್ಯಾನೇಜರ್ ದೇವಿ ಹಿರೇಮಠ, ಉಮೇಶ ಹರಿವಾಳ, ರಾಜಶೇಖರ ಪಾಟೀಲ, ಎಜಿಎಂ ಶಿವಕುಮಾರ ಕಬ್ಬಿನ, ಹಿರಿಯ ಅಧಿಕಾರಿ ಸಂದೀಪ ಗುಡೂರ, ಪವನ ಕುಲಕರ್ಣಿ, ಬಾಬುಗೌಡ ರೋಡಗಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ