ತುಮಕೂರಿನಲ್ಲಿ ಆಗಸ್ಟ್ 5 ರಿಂದ 10 ರವರೆಗೆ ಮೂಳೆ ರೋಗ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಆಯೋಜನೆ
ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ಧಗಂಗಾ ಮೆಡಿಕಲ್ ಕಾಲೇಜು ವತಿಯಿಂದ ದಿ ಇಂಡಿಯನ್ ಆರ್ಥೋಪೆಡಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಆಗಸ್ಟ್ 5 ರಿಂದ 10 ರವರೆಗೆ ಮೂಳೆ ರೋಗ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಶಾಲಿನಿರವರು ತಿಳಿಸಿದರು.ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಮೂಳೆರೋಗ ಶಿಬಿರದ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇಂದಿನಿಂದ ಆಗಸ್ಟ್ 7 ನೋಂದಣಿಗೆ ಅವಕಾಶವಿದ್ದು, ಬಡವರು,ಆರ್ಥಿಕವಾಗಿ ಹಿಂದುಳಿದವರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ.ಮಹೇಶ್ ಮಾತನಾಡಿ ಮಂಡಿ ಮರುಜೋಡಣೆ, ಹಿಪ್ ಮರುಜೋಡಣೆ ಹೊರತುಪಡಿಸಿ ಮೂಳೆಗೆ ಸಂಬಂಧಿಸಿದ ಉಳಿದೆಲ್ಲಾ ಶಸ್ತ್ರಚಿಕಿತ್ಸೆಗಳು ಉಚಿತವಾಗಿದ್ದು, ಔಷಧಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತಿದೆ. ರೋಗಿಗಳು ಸೂಕ್ತ ವೈದ್ಯಕೀಯ ದಾಖಲೆಗಳೊಂದಿಗೆ ಆಸ್ಪತ್ರೆಗೆ ಆಗಮಿಸಿ ಮೂಳೆ ತಜ್ಞರನ್ನು ಭೇಟಿಯಾಗಿ ನೋಂದಣಿ ಒಳಗಾಗಬೇಕು ಎಂದು ವಿನಂತಿಸಿದರು.ಅಸೋಸಿಯೇಟ್ ಪ್ರೋಫೆಸರ್ ಡಾ.ನಾರಾಯಣಗೌಡ ಮಾತನಾಡಿ ಮೂಳೆಮುರಿತ, ಸರಿಯಾಗಿ ಜೋಡಣೆಯಾಗಿರದ ಮೂಳೆ ಖಾಯಿಲೆಗಳು, ಇಂಪ್ಲಾಂಟ್ ರಿಮೂವಲ್ ಸರ್ಜರಿ,ಸೊಂಟ ನೋವಿಗೆ ಸಂಬಂಧಿಸಿದ ಡಿಸ್ಕ್ ಸರ್ಜರಿಗಳು,ಮಂಡಿನೋವಿಗೆ ಸಂಬಂಧಿಸಿದ ಸರ್ಜರಿಗಳು ಸೇರಿದಂತೆ ಇನ್ನಿತರ ಮೂಳೆ ಸರ್ಜರಿಗಳನ್ನು ಉಚಿತವಾಗಿ ನಡೆಸಲಾಗುತ್ತಿದೆ ಹೆಚ್ಚಿನ ವಿವಿರಗಳಿಗೆ 0816-2602222 ಕರೆಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಸಿಇಓ ಡಾ.ಸಂಜೀವಕುಮಾರ್,ಅಸೋಸಿಯೇಟ್ ಪ್ರೋಫೆಸರ್ ಡಾ.ಲೋಹಿತ್, ಆರ್ಥೊಪೆಡಿಕ್ ವಿಭಾಗದ ವೈದ್ಯರುಗಳಾದ ಡಾ.ದುಷ್ಯಂತ್,ಡಾ.ರಾಹುಲ್, ಡಾ.ಕಾರ್ತಿಕ್, ಡಾ.ಶ್ರವಣ್, ಡಾ.ಸುಮುಖ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.