ಗಾಣಿಗ ಸಮುದಾಯ ಭವನದಲ್ಲಿ ಗಾಣಿಗ ಮಹಿಳಾ ಮಂಡಳಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ
ನಗರದ ಗಾಣಿಗ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ₹10 ಲಕ್ಷ ಅನುದಾನ ನೀಡಿದ್ದು ಆದಷ್ಟು ಬೇಗ ಉದ್ಘಾಟಿಸಿ ಲೋಕಾರ್ಪಣೆ ಮಾಡುವುದಾಗಿ ಶಾಸಕ ಎಚ್.ಡಿ. ತಮ್ಮಯ್ಯ ಭರವಸೆ ನೀಡಿದರು.
ನಗರದ ಗಾಣಿಗ ಸಮುದಾಯ ಭವನದಲ್ಲಿ ಗಾಣಿಗ ಮಹಿಳಾ ಮಂಡಳಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಚಿಕ್ಕ ಸಮುದಾಯವಾದ ಗಾಣಿಗ ಸಮಾಜದವರ ಬಗ್ಗೆ ನನಗೆ ಅವಿನಾಭಾವ ಸಂಬಂಧವಿದೆ. ನಾಮಕರಣದಿಂದ ಅಂತಿಮ ಯಾತ್ರೆವರೆಗೆ ಭಾಗವಹಿಸಿದ್ದೇನೆ. ನ.1 ರ ತಿಂಗಳಿಡೀ ಕನ್ನಡ ರಾಜ್ಯೋತ್ಸವ ಆಚರಣೆ ಮಾದರಿಯಲ್ಲಿ ಮಾರ್ಚ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ತಿಂಗಳ ಪೂರ್ತಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಪುರುಷ ಪ್ರಧಾನದೇಶದಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣುವ ಜೊತೆಗೆ ಗೌರವಿಸಬೇಕೆಂಬುದೇ ವಿಶ್ವ ಮಹಿಳಾ ದಿನಾಚರಣೆ ಉದ್ದೇಶ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಅನುಭವ ಮಂಟಪದ ಮೂಲಕ ಹಾಗೂ 19ನೇ ಶತಮಾನ ದಲ್ಲಿ ಡಾ. ಬಿ.ಆರ್‌ಅಂಬೇಡ್ಕರ್ ಸಂವಿಧಾನದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿ ಸಮಾನತೆ ನೀಡಿದ್ದಾರೆಂದು ಶ್ಲಾಘಿಸಿದರು.ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯವಾಗಿ ಎಲ್ಲಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಮಹಿಳೆ ಅಬಲೆಯಲ್ಲ ಸಬಲೆ ಎಂದು ಮಹಾನ್ ಪುರುಷರು ಹೋರಾಟ ಮಾಡಿದ್ದನ್ನು ಸ್ಮರಿಸಿದರು.ಮಹಿಳೆಯರಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ. ಆರ್ಥಿಕ, ಸಾಮಾಜಿಕವಾಗಿ ಸಬಲೀಕರಣ ಮಾಡಲು ತಾರತಮ್ಯವಿಲ್ಲದೆ ಬೆಂಬಲಿಸುವ ಅಗತ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದರು.ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಒಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇದ್ದು, ಬೆನ್ನೆಲುಬಾಗಿದ್ದಾಳೆ. ಜವಾಹರ್‌ಲಾಲ್ ನೆಹರು ನಂತರ ಅತೀ ಹೆಚ್ಚು ವರ್ಷಗಳ ಕಾಲ ಭಾರತವನ್ನು ಆಳಿದ ಉಕ್ಕಿನ ಮಹಿಳೆ ಇಂದಿರಾಗಾಂಧಿ ಎಂದ ಅವರು, ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕರನ್ನು ಗುರ್ತಿಸಿ ಸನ್ಮಾನಿಸಿದಾಗ ದಿನಾಚರಣೆಗೆ ನಿಜ ಅರ್ಥ ಬರುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಗಾಣಿಗ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ನಾಗರಾಜ್ ಮಾತನಾಡಿ, ದೇವಸ್ಥಾನಕ್ಕೆ ಹೋದರೆ ದೇವರ ಬಗ್ಗೆ ಭಕ್ತಿ ಇರುವುದಿಲ್ಲ, ಹೊರಗಡೆ ಬಿಟ್ಟು ಬಂದ ಚಪ್ಪಲಿಯನ್ನು ಯಾರಾದರೂ ಅಪಹರಿಸುತ್ತಾರೆಂಬ ಚಿಂತನೆ ಯಲ್ಲಿರುತ್ತೇವೆ, ಇನ್ನೊಬ್ಬರ ವಸ್ತುಗಳಿಗೆ ಆಸೆಪಡದೆ ಮೋಸ, ವಂಚನೆ ಮಾಡದೆ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕೆಂದು ಕರೆನೀಡಿದರು.ತಾಯಿಯಾದವರು ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿ, ನಡೆತೆ ಗುಣಗಳನ್ನು ಕಲಿಸಿದಾಗ ಆ ಮಗು ಸಾರ್ವಜನಿಕ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯಎಂದ ಅವರು, ಸಂಘವಿರೋಧಿ ಚಟುವಟಿಕೆ ನಡೆಸದೆ ಸಂಘ ಒಡೆಯುವ ಕೆಲಸ ಮಾಡಬಾರದು. ಪರೋಪಕಾರಾರ್ಥ ಮಿದಂ ಶರೀರಂ ಎಂಬಂತೆ ಜೀವಿಸಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ದಿವ್ಯ ಕೇಶವಮೂರ್ತಿ, ಸವಿತಾ ಕೇಶವಮೂರ್ತಿ ಸುಕನ್ಯಾ ಸೋಮಶೇಖರ್, ನಳಿನಾ, ಯಶೋಧಾ ಉಮೇಶ್, ಶೋಭಾ ಅಶೋಕ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.23 ಸಿಕೆ.ಎಂ 7ಚಿಕ್ಕಮಗಳೂರಿನ ಗಾಣಿಗ ಸಮುದಾಯ ಭವನದಲ್ಲಿ ಸೋಮವಾರ ಗಾಣಿಗ ಮಹಿಳಾ ಮಂಡಳಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮುದಾಯದಲ್ಲಿ ಸೇವೆ ಸಲ್ಲಿಸಿದವರನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಗೌರವಿಸಿದರು.