ಭಾನುವಾರ ನಗರದ ಶ್ರೀ ಬನಶಂಕರಿ ಮಹಿಳಾ ಸಂಘದ 25 ನೇ ವಾರ್ಷಿಕೋತ್ಸವ ಸಮಾರಂಭ
ದೇವಾಂಗ ಸಂಘದ ಕಟ್ಟಡ ಕಾಮಗಾರಿಗೆ ₹10 ಲಕ್ಷ ಅನುದಾನ ನೀಡುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದ್ದಾರೆ.
ಭಾನುವಾರ ನಗರದ ಶ್ರೀ ಬನಶಂಕರಿ ಮಹಿಳಾ ಸಂಘದ 25 ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಭಾರತ ಅತಿ ಹೆಚ್ಚು ಸಂಸ್ಕೃತಿ, ಸಂಸ್ಕಾರ ಅನುಸರಿಸುವ ದೇಶ. ನಮ್ಮ ಬದುಕಿನ ಜಂಜಾಟದ ನಡುವೆ ಅರ್ಧ ಗಂಟೆಗಳ ಕಾಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ ಎಂದರು.ಎಲ್ಲರೂ ಬಾದಾಮಿಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಅಲ್ಲಿ ದೇವಾಂಗ ಸಮುದಾಯದ ಜಗದ್ಗುರು ದಯಾನಂದ ಪುರಿ ಅವರ ಮಠವೂ ಇದೆ. ಅಲ್ಲಿಗೂ ಭೇಟಿ ಮಾಡಿ ಗುರುಗಳ ಆಶೀರ್ವಾದ ಪಡೆಯಬೇಕು ಎಂದರು.
ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ದೇವಾಂಗ ಸಮಾಜದ ಚಿತ್ರ ನಟಿ ಉಮಾಶ್ರೀ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸ ಮಾಡಿದ್ದರು. ಮತ್ತೆ ಅವರನ್ನ ನಮ್ಮ ಸರ್ಕಾರ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಬೇಕು ಎಂದರು.
ಸಂಘದ ಸಂಸ್ಥಾಪಕ ಅಧ್ಯಕ್ಷೆ ಕಮಲಮ್ಮ ರಾಮಯ್ಯ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಾಂಗ ಸಂಘದ ಜಿಲ್ಲಾಧ್ಯಕ್ಷ ಕೆ. ಶ್ರೀನಿವಾಸ್, ದೇವಾಂಗ ಸಂಘದ ತಾಲೂಕು ಅಧ್ಯಕ್ಷ ಭಗವತಿ ಹರೀಶ್, ಪ್ರಧಾನ ಕಾರ್ಯದರ್ಶಿ ಟಿ. ತ್ಯಾಗರಾಜ್, ನಗರಸಭೆ ಸದಸ್ಯೆ ದೀಪಾ ರವಿಕುಮಾರ್, ಬನಶಂಕರಿ ಮಹಿಳಾ ಸಂಘದ ಉಪಾಧ್ಯಕ್ಷೆ ರಾಧಾ ರಾಜ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗೋಕುಲ್, ಸಹ ಕಾರ್ಯದರ್ಶಿಗಳಾದ ಮಂಜುಳಾ ಪುಟ್ಟರಾಜು, ಭಾಗ್ಯ ಮೋಹನ್, ಖಜಾಂಚಿ ಶ್ಯಾಮಲಾ ರಾಜು, ರತ್ನ ರವಿಕುಮಾರ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. 24 ಕೆಸಿಕೆಎಂ 4ಚಿಕ್ಕಮಗಳೂರಿನ ಶ್ರೀ ಬನಶಂಕರಿ ಮಹಿಳಾ ಸಂಘದ 25 ನೇ ವಾರ್ಷಿಕೋತ್ಸವ ಸಮಾರಂಭವನ್ನು ಕಮಲಮ್ಮ ರಾಮಯ್ಯ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಸುವರ್ಣಾ ಕೇಶವಮೂರ್ತಿ, ದೀಪಾ ರವಿಕುಮಾರ್, ಕೆ. ಶ್ರೀನಿವಾಸ್ ಇದ್ದರು.