ಕನ್ನಡಪ್ರಭವಾರ್ತೆ, ಬೇಲೂರು
ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಉಪಾಧ್ಯಕ್ಷರಾದ ಮದನ್ ಗೌಡ, ತಾಲೂಕು ಉಸ್ತುವಾರಿ ಪ್ರಮೋದ್ ಹಾಗೂ ಜಿಲ್ಲಾಧ್ಯಕ್ಷ ಕೆಂಚೇಗೌಡ ಸಹಕಾರದಿಂದ ಕ್ಷೇಮಾಭಿವೃದ್ಧಿ ನಿಧಿ ರೂಪಿಸುವ ಕನಸು ನನಸಾಗಿದೆ ಎಂದು ಪತ್ರಕರ್ತರಿಗೆ ಮಾಹಿತಿ ನೀಡಿದರು.
ಈ ಹಿಂದೆ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ 2 ಲಕ್ಷ, ಹೆಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜು 2 ಲಕ್ಷ, ಗ್ರಾನೈಟ್ ಉದ್ಯಮಿ ರಾಜಶೇಖರ್ 1,11,111 ಹಾಗೂ ಮಾಜಿ ಸಚಿವರಾದ ಬಿ. ಶಿವರಾಂ 1 ಲಕ್ಷ ಸೇರಿದಂತೆ ವಿವಿಧ ದಾನಿಗಳು ನೀಡಿದ ಕೊಡುಗೆ ಹಾಗೂ ಪತ್ರಕರ್ತರ ದಿನಾಚರಣೆ, ಪತ್ರಿಕಾಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಂದ ಉಳಿದ ಹಣವನ್ನು ಕ್ರೋಡೀಕರಿಸಿ ಒಟ್ಟು 10 ಲಕ್ಷ ರು.ಗಳನ್ನು ನಿಧಿಗೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.ಈ ಹಣವನ್ನು ಶೀಘ್ರದಲ್ಲೇ ಠೇವಣಿ ಇಟ್ಟು, ಅದರಿಂದ ಬರುವ ಆದಾಯವನ್ನು ಪತ್ರಕರ್ತರು ಅಥವಾ ಅವರ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ತುರ್ತು ಅಗತ್ಯಗಳಿಗೆ ಬಳಸುವ ಉದ್ದೇಶವಿದೆ. ನಿಧಿಯನ್ನು ಪಾರದರ್ಶಕವಾಗಿ ಮತ್ತು ನಿಯಮಾನುಸಾರ ನಿರ್ವಹಿಸಲಾಗುವುದು ಎಂದು ಶಿವರಾಜು ಹೇಳಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಗಣೇಶ್, ಮಲ್ಲೇಶ್, ಲೋಹಿತ್, ನಾಗೇಶ್, ಸುನೀಲ್ ಇದ್ದರು.