ಶೇ.91.64 ರಷ್ಟು ಫಲಿತಾಂಶ । ಜಿಲ್ಲೆಯಲ್ಲಿ ತರೀಕೆರೆಗೆ 6ನೇ ಸ್ಥಾನ
ತಾಲೂಕಿನ ಸರ್ಕಾರಿ, ಅನುದಾನಿತ ಅನುದಾನ ರಹಿತ, ವಸತಿ ಶಾಲೆಗಳು ಸೇರಿ ಇರುವ ಒಟ್ಟು 44 ಶಾಲೆಗಳಲ್ಲಿ 5 ಸರ್ಕಾರಿ ಶಾಲೆ, ಅನುದಾನಿತ 2, ಅನುದಾನ ರಹಿತ 4 ಶಾಲೆ, ವಸತಿ ಶಾಲೆ 3 ಶಾಲೆ ಒಟ್ಟು 14 ಶಾಲೆಗಳಿಗೆ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದೊರಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಮಾಹಿತಿ ನೀಡಿದ್ದಾರೆ.ತಾಲೂಕಿನಲ್ಲಿ ಒಟ್ಟು 1759 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 1612 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.91.64 ಫಲಿತಾಂಶ ದೊರಕಿದೆ. ಜಿಲ್ಲೆಯಲ್ಲಿ ತರೀಕೆರೆ ತಾಲೂಕು 6ನೇ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿನಿ ಪ್ರತೀಕ್ಷಾ. ಎನ್.ಎನ್. 621, ಚೈತನ್ಯ ಡಿ.619, ತರೀಕೆರೆ ಅರುಣೋದಯ ಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾರ್ಥಿ ಚಿರಂತ್ ಕುಮಾರ್ ಟಿ.ಎಸ್. 617, ಶಿವನಿ ಕೆ.ಪಿ.ಎಸ್.ಪ್ರೌಢ ವಿಭಾಗ ಹೇಮಂತ್ ಬಿ.ಟಿ. 606, ತರೀಕೆರೆ ಸ..ಬಾಲಕೀಯರ ಪ.ಪೂ.ಕಾಲೇಜ್ ಪಾವನ ಎಸ್.603, ಕೆ.ಪಿ.ಎಸ್.ಶಾಲೆ ಶಿವನಿ ಪ್ರೌಢ ವಿಭಾಗ ಧನುಷ್ ಎಂ. 602, ಬೆಟ್ಟತಾವರೆಕೆರೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಸಂದ್ಯಾ ಜೆ.ಎಸ್.602, ಗೀತಾ ಜಿ.ಎಲ್. 600 ಗಳಿಸಿದ್ದಾರೆ ಎಂದು ಹೇಳಿದರು.ಈ ಉತ್ತಮ ಫಲಿತಾಂಶ ಪಡೆಯಲು ಮಾರ್ಗದರ್ಶನ ಮತ್ತು ಸಹಕಾರ ನೀಡಿದ ಶಾಸಕ ಜಿ.ಎಚ್.ಶ್ರೀನಿವಾಸ್, ಇಲಾಖಾ ಅಧಿಕಾರಿಗಳು, ಫಲಿತಾಂಶ ಪಡೆಯಲು ಶ್ರಮಿಸಿದ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಲ್ಲಾ ಸಿಬ್ಬಂದಿ, ವಿದ್ಯಾರ್ಥಿ, ಹಾಗೂ ಪೋಷಕರಿಗೆ ಇಲಾಖೆಯಿಂದ ಅಭಿನಂದನೆ ತಿಳಿಸಿದ್ದಾರೆ.-23ಕೆಟಿಆರ್.ಕೆ. 25 ಪ್ರತೀಕ್ಷಾ. ಎನ್.ಎನ್23ಕೆಟಿಆರ್.ಕೆ. 26 , ಚೈತನ್ಯ ಡಿ23ಕೆಟಿಆರ್.ಕೆ.27 ಚಿರಂತ್ ಕುಮಾರ್ ಟಿ.ಎಸ್23ಕೆಟಿಆರ್.ಕೆ.28 ಹೇಮಂತ್ ಬಿ.ಟಿ.23ಕೆಟಿಆರ್.ಕೆ.29 ಪಾವನ ಎಸ್23ಕೆಟಿಆರ್.ಕೆ.30 ಧನುಷ್ ಎಂ. 23ಕೆಟಿಆರ್.ಕೆ.31 ಸಂದ್ಯಾ ಜೆ.ಎಸ್23ಕೆಟಿಆರ್.ಕೆ.32 ಗೀತಾ ಜಿ.ಎಲ್.