13 ರಾಜ್ಯಗಳಲ್ಲಿ 100 ಸಾಯಿ ಸ್ವಾಸ್ಥ್ಯ ಕೇಂದ್ರ

KannadaprabhaNewsNetwork |  
Published : Nov 22, 2025, 01:15 AM IST
  ಸಿಕೆಬಿ-1 ಕೊಳಲು ವಾದಕರಾದ ಪದ್ಮಶ್ರೀ ಪಂಡಿತ್ ರೋಣು (ರಾಣೇಂದ್ರನಾಥ್) ಮಜುಂದಾರ್, ಕಲ್ಪೇಶ್ ಸಾಜನ್ ಹಾಗೂ ತಬಲ ವಾದಕ ಅಜೀದ್ ಪಾಠಕ್ ರನ್ನು ಸದ್ಗುರು ಶ್ರೀ ಮಧುಸೂದನ ಸಾಯಿ   ಸನ್ಮಾನಿಸಿದರು   | Kannada Prabha

ಸಾರಾಂಶ

ಕಳೆದ 100 ದಿನಗಳಲ್ಲಿ 100 ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆಯನ್ನು ನಡೆಸಿ ದಾಖಲೆಯನ್ನು ಬರೆದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಹೀಲಿಂಗ್ ಲಿಟಲ್ ಹಾರ್ಟ್ ಫೌಂಡೇಶನ್ ಸಹಯೋಗದೊಂದಿಗೆ ಕಳೆದ 100 ದಿನಗಳಲ್ಲಿ 100 ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆಯನ್ನು ನಡೆಸಿ ದಾಖಲೆಯನ್ನು ಬರೆದಿದೆ.

ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ''''''''ದ 97ನೇ ದಿನ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹಾರ್ಟ್ಸ್ ವಾಲ್ವ್ ಬ್ಯಾಂಕ್ ನಿರ್ದೇಶಕರು ಮತ್ತು ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ ಸಿ.ಎಸ್.ಹೀರೇಮಠ್ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ರೋಬೊಟಿಕ್ ಸರ್ಜರಿ ಸೇರಿದಂತೆ ವಿವಿಧ ಬಗೆಯ ಹೃದಯ ಶಸ್ತ್ರಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.ಹೀಲಿಂಗ್ ಲಿಟ್ಲ್‌ ಹಾರ್ಟ್ಸ್ ಫೌಂಡೇಶನ್‌ನ ಸಂಸ್ಥಾಪಕ ಡಾ. ಸಂಜೀವ್ ನಿಚಾನಿ ಮಾತನಾಡಿ, ಭಗವಾನ್ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನ. 19ಕ್ಕೆ 100 ಮಕ್ಕಳಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಮಕ್ಕಳಿಗಾಗಿ ನಾವೆಲ್ಲರೂ ಒಂದು ಕುಟುಂಬವಾಗಿ ಕೆಲಸ ಮಾಡಬೇಕು. ಈ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ವೈದ್ಯರ ತಂಡವಿದೆ ಎಂದು ವಿವರಿಸಿದರು.

ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ನೀರ್ ನವಾಜ್ ಖಾನ್ ಮತ್ತು ಹೀನಾ ಕೌಸರ್ ದಂಪತಿಯ 7 ತಿಂಗಳ ಮಗು ಹಂಜಾ ಅಲಿ ಖಾನ್‌, ಅಸ್ಸಾಂ ಮೂಲದ ಅಬ್ದುಲ್ ಅಲಿ ಮತ್ತು ಸಿಮ್ರಾನ್ ಬೇಗಂ ದಂಪತಿಯ 3 ವರ್ಷದ ಮತಿಬಾರ್ ಅಲಿ ಮತ್ತು ರಾಯಚೂರು ಮೂಲದ ಚಂದ್ರಶೇಖರ್ ಮತ್ತು ಲಕ್ಷ್ಮಿ ದಂಪತಿಯ 14 ವರ್ಷದ ಆಕಾಶ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಈ ಮಕ್ಕಳಿಗೆ ''''''''ಚಿರಂಜೀವಿ ಭವ ಗಿಫ್ಟ್ ಆಫ್ ಲೈಫ್'''''''' ಪ್ರಮಾಣಪತ್ರವನ್ನು ನೀಡಲಾಯಿತು.

ಸಾಯಿ ಸ್ವಾಸ್ಥ್ಯ ಯೋಜನೆಯ ಈಶಾನ್ಯ ವಿಭಾಗದ ಮುಖ್ಯಸ್ಥ ಸುಭಜಿತ್ ರಾಯ್ ಮುಖರ್ಜಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಆಶೀರ್ವಾದದಿಂದ ವೈದ್ಯಕೀಯ ಚಿಕಿತ್ಸೆ ಸಿಗದ ಅತ್ಯಂತ ಕ್ಲಿಷ್ಟಕರವಾದ ಸ್ಥಳಗಳಲ್ಲಿ ಕಳೆದ 50 ದಿನಗಳಲ್ಲಿ 76 ಸಾಯಿ ಸ್ವಾಸ್ಥ್ಯ ಕೇಂದ್ರಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಒಟ್ಟಾರೆಯಾಗಿ 100 ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳು ಸೇವೆಯನ್ನು ನೀಡುತ್ತಿವೆ. ಈ ಮೂಲಕ ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆಯು ಶೀಘ್ರವಾಗಿ ಸಿಗಲು ಇರುವ ಅಡೆತಡೆಗಳನ್ನು ನಿವಾರಿಸಲಾಗುತ್ತಿದೆ. ಇದರಿಂದ ಸಮಯದ ಉಳಿತಾಯವಾಗುತ್ತಿದೆ. ದುರ್ಗಮ ಸ್ಥಳಗಳಲ್ಲಿ ಈ ಸೇವೆಗಳನ್ನು ನೀಡುತ್ತಿರುವುದು ತೃಪ್ತಿ ತಂದಿದೆ ಎಂದು ಹೇಳಿದರು.

ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆಯ ನಂತರ ಮಗು ಆರೋಗ್ಯವಾಗಿ ತಾಯಿ ಬಳಿಗೆ ಹಿಂದಿರುಗುವುದು ಮತ್ತು ಇತರ ಮಕ್ಕಳಂತೆ ಸಾಮಾನ್ಯ ಜೀವನ ನಡೆಸಲು ಸಹಾಯ ಮಾಡುವುದೇ ಶುದ್ಧ ಪ್ರೀತಿ, ಇದಷ್ಟೇ ನಮ್ಮ ಗುರಿಯಾಗಿದೆ. ಪ್ರೀತಿಯನ್ನು ಹೊರತುಪಡಿಸಿ ನಾವು ಏನನ್ನೂ ನಿರೀಕ್ಷೆ ಮಾಡುವುದಿಲ್ಲ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಇದೇ ವೇಳೆ ಕೊಳಲು ವಾದಕರಾದ ಪದ್ಮಶ್ರೀ ಪಂಡಿತ್ ರೋಣು (ರಾಣೇಂದ್ರನಾಥ್) ಮಜುಂದಾರ್, ಕಲ್ಪೇಶ್ ಸಾಜನ್ ಹಾಗೂ ತಬಲ ವಾದಕ ಅಜೀದ್ ಪಾಠಕ್ ರನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಸನ್ಮಾನಿಸಿದರು.

ಸಿಕೆಬಿ-1 ಕೊಳಲು ವಾದಕರಾದ ಪದ್ಮಶ್ರೀ ಪಂಡಿತ್ ರೋಣು (ರಾಣೇಂದ್ರನಾಥ್) ಮಜುಂದಾರ್, ಕಲ್ಪೇಶ್ ಸಾಜನ್ ಹಾಗೂ ತಬಲ ವಾದಕ ಅಜೀದ್ ಪಾಠಕ್ ರನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಸನ್ಮಾನಿಸಿದರು.

PREV

Recommended Stories

ಮಠ-ಮಾನ್ಯಗಳು ಗ್ರಾಮ ಸೇವೆ, ಅಭಿವೃದ್ಧಿಗೆ ಆದ್ಯತೆ ನೀಡಬೇಕು: ಎಚ್‌.ಕೆ. ಪಾಟೀಲ್
ದೊಡ್ಡ ಕನಸುಗಳ ಈಡೇರಿಕೆಗೆ ಶಿಕ್ಷಣ ಬೇಕು: ಪ್ರೊ.ಡಿ.ಎಸ್.ಗುರು