ನೂರು ಸಸಿ ನೆಟ್ಟು, ಸಾವಿರ ಸಸಿ ವಿತರಣೆ

KannadaprabhaNewsNetwork |  
Published : Jun 09, 2024, 01:31 AM IST
8ಐಎನ್‌ಡಿ5,ಇಂಡಿ ಪಟ್ಟಣದ  ಕದಳಿ ವೇದಿಕೆ ತಾಲೂಕಾ ಶಾಖೆ ಇಂಡಿ ವತಿಯಿಂದ ಪರಿಸರ ದಿನದಂದು ಪಟ್ಟಣದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಉದ್ಯಾನವನದಲ್ಲಿ ನೂರಾರು ಸಸಿಗಳನ್ನು ನೆಟ್ಟು ಸಾವಿರಾರು ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ: ಪಟ್ಟಣದಲ್ಲಿ ಪರಿಸರ ದಿನಾಚರಣೆ ನಿಮಿತ್ಯ ಕದಳಿ ವೇದಿಕೆ ತಾಲೂಕ ಶಾಖೆ ಇಂಡಿ ವತಿಯಿಂದ ಪಟ್ಟಣದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಉದ್ಯಾನವನದಲ್ಲಿ ನೂರಾರು ಸಸಿಗಳನ್ನು ನೆಟ್ಟು ಸಾವಿರಾರು ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಇಂಡಿ:

ಪಟ್ಟಣದಲ್ಲಿ ಪರಿಸರ ದಿನಾಚರಣೆ ನಿಮಿತ್ಯ ಕದಳಿ ವೇದಿಕೆ ತಾಲೂಕ ಶಾಖೆ ಇಂಡಿ ವತಿಯಿಂದ ಪಟ್ಟಣದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಉದ್ಯಾನವನದಲ್ಲಿ ನೂರಾರು ಸಸಿಗಳನ್ನು ನೆಟ್ಟು ಸಾವಿರಾರು ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಕದಳಿ ವೇದಿಕೆ ತಾಲೂಕ ಅಧ್ಯಕ್ಷೆ ಗಂಗಾ ಗಲಗಲಿ ಮಾತನಾಡಿ, ಶ್ರೀ ಸಿದ್ದೇಶ್ವರ ಶ್ರೀಗಳು ನಿಸರ್ಗದಲ್ಲಿರುವ ಚರಾಚರ ವಸ್ತುಗಳನ್ನು ಮಾತೃ ಹೃದಯದಿಂದ ಪ್ರೀತಿಸುತ್ತಿದ್ದರು, ಪ್ರತಿಯೊಂದು ವಸ್ತುವಿನಲ್ಲಿ ದೇವರಿದ್ದಾನೆ ಎಂದು ತಮ್ಮ ವಾಣಿಯಲ್ಲಿ ಹೇಳಿದ್ದಾರೆ. ಅವರಲ್ಲಿ ಪರಿಸರದ ಬಗ್ಗೆ ಇರುವಷ್ಟು ಸಂತೋಷ ಎಲ್ಲಿಯೂ ಕಾಣುತ್ತಿರಲಿಲ್ಲ. ನಿಸರ್ಗದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದರು. ನಾವೂ ಕೂಡ ಪೂಜ್ಯರ ಸದಾಶಯದಂತೆ ಪ್ರತಿ ಗ್ರಾಮ, ನಗರ ಪಟ್ಟಣಗಳಲ್ಲಿ ಸಸಿಗಳನ್ನು ನೆಟ್ಟು ಹೆಮ್ಮರವಾಗಿ ಬೆಳೆಸಿದಾಗ ಅವರ ಮಾರ್ಗದರ್ಶನದಲ್ಲಿ ನಡೆಯಲು ಸಾರ್ಥಕವಾಗುತ್ತದೆ. ಪರಿಸರ ದಿನಾಚರಣೆ ಮಾಡುವ ಉದ್ದೇಶ ಕೇವಲ ಕಾಟಾಚಾರದ ಕಾರ್ಯಕ್ರಮಗಳಾಗದೆ ಜವಾಬ್ದಾರಿ ಇರಬೇಕು. ಪರಿಸರ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಕೋವಿಡ್ -19 ಸಂದರ್ಭದಲ್ಲಿ ಆಕ್ಸಿಜನ್‌ ಇಲ್ಲದೆ ಪರದಾಡುವ ಪರಸ್ಥಿತಿ ನಿರ್ಮಾಣವಾಗಿತ್ತು. ಇದೊಂದು ನಮಗೆಲ್ಲ ಪಾಠ ಎಂದು ತಿಳಿದುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮನ್ನು ರಾಜಶ್ರೀ ಕ್ಷತ್ರಿ ಉದ್ಘಾಟಿಸಿದರು. ಬಸಮ್ಮ ಪೊಲೀಸ್‌ ಪಾಟೀಲ, ಭವಾನಿ ಗುಳೆದಗುಡ್ಡ, ಪಾರ್ವತಿ ಸೊನ್ನದ, ಬೀನಾ, ಸಂಗೀತಾ ಡೊಳ್ಳಿನ್, ದಾನಮ್ಮಾ ಹಿರೇಮಠ, ಕಸ್ತೂರಿ ಅವುಟಿ, ಜೆ.ಡಿ.ಕಾಂಬಳೆ, ರಿಯಾನಾ ಸುತಾರ, ಶಶಿಕಲಾ ಅಂಕಲಗಿ ಇತರರು ಈ ಸಂದರ್ಭದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!