ಕನ್ನಡಪ್ರಭ ವಾರ್ತೆ ಬೆಳಗಾವಿಬೃಹತ್ ಕೆಎಲ್‍ಇ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದೇ ಒಂದು ಭಾಗ್ಯ. ಅದು ನನ್ನದಾದುದು ಒಂದು ಆಕಸ್ಮಿಕ. ಅದನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.
ಕರ್ನಾಟಕ ಜನತೆಗೆ ಉತ್ತಮವಾದ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ನೀಡಬೇಕೆಂಬುವುದು ನನ್ನ ಹೆಬ್ಬಯಕೆಯಾಗಿತ್ತು. ಅದನ್ನು ಈಡೇರಿಸಿದ್ದೇನೆ. ಮಾಜಿ ಸಿಎಂ ಎಸ್.ನಿಜಲಿಂಗಪ್ಪನವರು ಮೊದಲ್ಗೊಂಡು ಎಲ್ಲರೂ ನನಗೆ ಆಶೀರ್ವದಿಸಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ನನ್ನ ಶ್ರೀಮತಿ ಆಶಾ ಅವರು ಕೌಟುಂಬಿಕ ಎಲ್ಲ ಜವಾಬ್ದಾರಿಗಳನ್ನು ಹೊತ್ತು ನನ್ನ ಸಮಾಜ ಕೆಲಸಕ್ಕೆ ಅನುವು ಮಾಡಿಕೊಟ್ಟ ಫಲವೆಂಬಂತೆ ನಾನು ಅಸಂಖ್ಯ ಕೆಲಸಗಳನ್ನು ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.
ರಾಣಿ ಚನ್ನಮ್ಮ ವಿವಿ ಕುಲಪತಿ ಡಾ.ಸಿ.ಎಂ.ತ್ಯಾಗರಾಜ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಪ್ರಭಾಕರ ಕೋರೆಯವರು ತಮ್ಮ ಹೆಸರಿಗೆ ಅನ್ವರ್ಥರಾದವರು. ಒಂದು ಸಂಸ್ಥೆಯನ್ನು ಮಾತ್ರ ಕಟ್ಟಲಿಲ್ಲ ಅದನ್ನು ಗುಣಾತ್ಮಕವಾಗಿ ಬೆಳೆಸಿದರು, ವಿಸ್ತರಿಸಿದರು ಎಂದು ಬಣ್ಣಿಸಿದರು.ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಮಾತನಾಡಿ, ಡಾ.ಕೋರೆಯವರ ಇಚ್ಛಾಶಕ್ತಿ ಅಪಾರವಾದುದು. ಅವರು ಸಂಸ್ಥೆಯ ಆಚೆಗೂ ಮೌಲಿಕವಾದ ಕೊಡುಗೆ ನೀಡಿದರು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರ ಶಿಖರ ಸೂರ್ಯ ಅಭಿನಂದನ ಗ್ರಂಥ ಸಂಪಾದಿಸಿದ ಡಾ.ಅಶೋಕ ನರೋಡೆ, ಜನಜೀವಾಳ ಪತ್ರಿಕೆಯಿಂದ ಡಾ.ಕೋರೆಯವರ ಕುರಿತು ವಿಶೇಷಾಂಕ ಹೊರತಂದ ಶಿವರಾಜ ಏಳುಕೋಟಿ, ಡಾ.ಪ್ರಭಾಕರ ಕೋರೆ ಭಾವಚಿತ್ರ ಬಿಡಿಸಿದ ಚಿತ್ರಕಲಾವಿದ ಬಾಳು ಸದಲಗೆ ಅವರನ್ನು ಡಾ.ಪ್ರಭಾಕರ ಕೋರೆಯವರು ಸತ್ಕರಿಸಿದರು. ಡಾ.ಎಫ್.ವಿ.ಮಾನ್ವಿ, ಪ್ರೊ.ಎಸ್.ಎಸ್.ಉರಬಿನವರ, ಜಾವೂರ, ಸುಭಾಷ ಏಣಗಿ, ಪ್ರೊ.ವಿ.ಜಿ.ಅಷ್ಟಗಿ, ಪ್ರೊ.ಸಾಲಿಮಠ, ಪ್ರೊ.ಎಸ್.ವಿ.ದಳವಾಯಿ, ಪ್ರೊ.ಎ.ಪಿ.ಬಿರಾದಾರ ಪಾಟೀಲ, ಡಾ.ಎಂ.ಟಿ.ಕುರಣಿ ಮೊದಲಾದವರು ಉಪಸ್ಥಿತರಿದ್ದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಯ.ರು.ಪಾಟೀಲ ವಂದಿಸಿದರು.
---ಇಂದು ಕೆಎಲ್‍ಇ ಸಂಸ್ಥೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಓದುತ್ತಿದ್ದಾರೆ. ಸಾವಿರಾರು ಕುಟುಂಬಗಳು ಉತ್ತಮವಾದ ಜೀವನವನ್ನು ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಏನೆಲ್ಲವನ್ನು ಮಾಡಲು ಸಾಧ್ಯವೆಂಬುವುದಕ್ಕೆ ಡಾ.ಕೋರೆಯವರು ಸಾಕ್ಷಿಪ್ರಜ್ಞೆಯಾಗಿ ನಮ್ಮ ಮುಂದೆ ನಿಂತಿದ್ದಾರೆ.-ಡಾ.ಸಿ.ಎಂ.ತ್ಯಾಗರಾಜ, ರಾಣಿ ಚನ್ನಮ್ಮ ವಿವಿ ಕುಲಪತಿ.
-ಎಂ.ಜಿ.ಹಿರೇಮಠ, ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತರು.